ಮೂರನೇ ಮದುವೆ ಆದ ಬಹುಭಾಷೆಯ ಸುಪ್ರಸಿದ್ದ ನಟ ‘ಪ್ರಕಾಶ್ ರೈ’

ಪ್ರಕಾಶ್ ರಾಜ್ ನಟಿ ಲಲಿತಾ ಕುಮಾರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಲಲಿತಾ ಕುಮಾರಿ ದಕ್ಷಿಣ ಭಾರತೀಯ ಸಿನಿಮಾದ ಖ್ಯಾತ ನಟಿ ಡಿಸ್ಕೋ ಶಾಂತಿ ಅವರ ಸಹೋದರಿ. 1994ರಲ್ಲಿ ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಮದುವೆಯಾಗಿದ್ದರು. ಆದರೆ ಮದುವೆಯಾಗಿ 15 ವರ್ಷಗಳಲ್ಲೇ ಪ್ರಕಾಶ್ ಪತ್ನಿಯಿಂದ ದೂರ ಆದರು. 2009ರಲ್ಲಿ ಪ್ರಕಾಶ್ ರಾಜ್ ಮೊದಲ ಪತ್ನಿ ಲಲಿತಾ ಅವರಿಂದ ವಿಚ್ಛೇದನ ಪಡೆದು ಬೇರೆ ಆದರು. ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮೇಘನಾ ಮತ್ತು ಪೂಜಾ. ಒಬ್ಬ ಮಗ ಇದ್ದರು. ಆದರೆ 2004ರಲ್ಲಿ ಪುತ್ರನನ್ನು ಕಳೆದುಕೊಂಡರು.

2010 ಆಗಸ್ಟ್ 24ರಂದು ಪೋನಿ ವರ್ಮ್ ಜೊತೆ ಮದುವೆಯಾದರು. ಪ್ರಕಾಶ್ ರೈ ಅವರಿಗೆ ಪೋನಿ ವರ್ಮ್ ಎರಡನೇ ಪತ್ನಿ. ಪೋನಿ ವರ್ಮಾ ಅವರು ಬಾಲಿವುಡ್‌ನ ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಂದನಿ ಚೌಕ್ ಟು ಚೈನಾ, ಭೂಲ್ ಭೂಲಯ್ಯ, ನಮಸ್ತೆ ಲಂಡನ್, ಚುಪ್ ಚುಪ್ ಕೆ, ಪದ್ಮಶ್ರೀ ಲಾಲು ಪ್ರಸಾದ್ ಯಾದವ್, ಹಂಗಾಮ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ. 2015ರಲ್ಲಿ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮೊದಲ ಮಗುವನ್ನು ಸ್ವಾಗತಿಸಿದರು. ಮಗನಿಗೆ ವೇದಾಂತ್ ಎಂದು ಹೆಸರಿಟ್ಟಿದ್ದಾರೆ.

ಪ್ರಕಾಶ್ ರಾಜ್ ತನ್ನ 11 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಪೋನಿ ವರ್ಮಾ ಜೊತೆ ಆಗಸ್ಟ್ 24 ರಂದು ಆಚರಿಸಿದ್ದಾರೆ. ಅವರ ಮಗ ವೇದಾಂತ್ ತನ್ನ ತಂದೆ ತಾಯಿಯರು ತನ್ನ ಮುಂದೆ ಮದುವೆಯಾಗುವುದನ್ನು ನೋಡಲು ಬಯಸಿದ್ದ. ತಮ್ಮ 11 ನೇ ವಾರ್ಷಿಕೋತ್ಸವದಂದು, ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ವಿವಾಹವಾದರು. ಪ್ರಕಾಶ್ ರಾಜ್ ಅವರು ತಮ್ಮ ಪತ್ನಿ ಪೋನಿ ವರ್ಮಾ ಅವರನ್ನು ಮತ್ತೆ ಮದುವೆಯಾದೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ದಂಪತಿಗಳು ತಮ್ಮ ಮಕ್ಕಳ ಮುಂದೆ ಉಂಗುರ ಬದಲಾಯಿಸಿ ಕಿಸ್ ಮಾಡಿ ಮಗನ ಆಸೆ ಈಡೇರಿಸಿದ್ದಾರೆ.