ಮೂರನೇ ಮಗುವಿನ ಬಗ್ಗೆ ಕೇಳಿದಾಗ ಯಶ್ ಏನಂದ್ರು ಗೊತ್ತಾ. ಅವರು ಹೇಳಿದ್ದೇ ಬೇರೆ, ನೋಡಿ ಒಮ್ಮೆ

ಮಕ್ಕಳಾಗೋದೇ ಅದೃಷ್ಟ.ನನಗೆ ಮಕ್ಕಳು ಅಂದರೆ ತುಂಬಾ ಇಷ್ಟ ಎಂದ ಯಶ್ ಮೂರನೇ ಮಗುವಿನ ಬಗ್ಗೆ ಕೇಳಿದಾಗ ಏನಂದ್ರು. ಸ್ಯಾಂಡಲ್ ವುಡ್ ರಾಮಾಚಾರಿ ಮತ್ತು ಮಾರ್ಗರೇಟ್ ಎಂದೇ ಕರೆಸಿಕೊಳ್ಳುವ ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್. ಇತ್ತೀಚೆಗೆ ಈ ಯಶಸ್ವಿ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟು ಡಿಸೆಂಬರ್ 9 2021 ಕ್ಕೆ ಐದು ವರ್ಷಗಳು ಪೂರೈಸಿವೆ. ಹೌದು 2016 ಡಿಸೆಂಬರ್ 9 ರಂದು ಸಪ್ತಪದಿ ತುಳಿದಿದ್ದ ಈ ದಂಪತಿಗಳಿಗೆ ಆರ್ಥಿಗೊಬ್ಬ ಕೀರ್ತಿಗೊಬ್ಬಳು ಎಂಬಂತೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಮೂಲಕ ಚಂದನವನಕ್ಕೆ ಪಾದಾರ್ಪಣೆ ಬೆಳೆಸಿದ ಯಶ್ ಮತ್ತು ರಾಧಿಕಾ ಪಂಡಿತ್ ಈ ಚಿತ್ರದ ಮೂಲಕ ಇಬ್ಬರಗೂ ಪರಿಚಯ ಸ್ನೇಹ ಉಂಟಾಗುತ್ತದೆ. ಹೀಗೆ ಒಂದಷ್ಟು ವರ್ಷಗಳ ಒಡನಾಟ ಪ್ರೀತಿಗೆ ತಿರುಗುತ್ತದೆ.

ಆದರೆ ತಮ್ಮಿಬ್ಬರ ಪ್ರೀತಿಯ ವಿಷಯವನ್ನು ಎಲ್ಲಿಯೂ ಕೂಡ ಬಹಿರಂಗವಾಗಿಸಿಕೊಳ್ಳದೇ ಇಬ್ಬರು ಕೂಡ ತಮ್ಮ ಸಿನಿ ವೃತ್ತಿಯಲ್ಲಿ ಯಶಸ್ಸು ಗಳಿಸುವ ತನಕ ಗೌಪ್ಯವಾಗಿಯೇ ತಮ್ಮ ಪ್ರೀತಿಯನ್ನ ಕಾಪಾಡಿಕೊಂಡು ಬಂದಿರುತ್ತಾರೆ. ಬಳಿಕ ಇಬ್ಬರು ಕೂಡ ಸಿನಿಮಾ ವೃತ್ತಿಯಲ್ಲಿ ಯಶಸ್ಸುಗಳಿಸಿದ ನಂತರ ತಮ್ಮಕುಟುಂಬದವರನ್ನು ಒಪ್ಪಿಸಿ ಮದುವೆ ಕೂಡ ಆಗುತ್ತಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಜೊತೆಯಾಗಿ ಡ್ರಾಮಾ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವಾಡ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ಕೆಜಿಎಫ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಭಾರತೀಯ ಚಿತ್ರರಂಗದಾದ್ಯಂತ ಅಪಾರ ಅಭಿಮಾನ-ಬಳಗ ಹೊಂದುತ್ತಾರೆ . ಸಿನಿಮಾಗಳ ಯಶಸ್ಸು ನಟ ಯಶ್ ಅವರನ್ನು ಭಾರಿ ಬೇಡಿಕೆಯ ನಟನಾಗಿ ಬೆಳೆಸುತ್ತದೆ.

ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ಯಶ್ ಕಳೆದ ವರ್ಷ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ವೊಂದರಲ್ಲಿ ಫ್ಲಾಟ್ ವೊಂದನ್ನ ಖರೀದಿ ಮಾಡಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಯಶ್ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಸಂಸಾರದ ಮುದ್ದಾದ ಫೋಟೋಗಳನ್ನು ತಮ್ಮ ಇನ್ಸ್ಟಾ ದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಕೆಲವು ಮಾಧ್ಯಮ ಸ್ನೇಹಿತರು ಸುದ್ದಿಗೋಷ್ಠಿಯೊಂದರಲ್ಲಿ ಮೂರನೇ ಮಗುವಿನ ಬಗ್ಗೆ ಏನಾದ್ರು ಪ್ಲಾನ್ ಇದ್ಯ ಎಂದು ಪ್ರಶ್ನೆ ಕೇಳಿದ್ದಕ್ಕೆ ನಟ ಯಶ್ ನಗುತ್ತಲೇ ನನಗೆ ಮಕ್ಕಳೆಂದರೆ ಇಷ್ಟ. ಮಕ್ಕಳಾಗುವುದೇ ಲಕ್ ಅದು ಹೆಣ್ಣು ಗಂಡು ಅಂತಲ್ಲ ಎಂದು ಉತ್ತರ ನೀಡಿದ್ದರು.

Leave a Reply

%d bloggers like this: