ಮುನ್ನೂರು ಕೋಟಿ ಗಳಿಕೆ ಮಾಡಿ ದಾಖಲೆ ಪುಟಕ್ಕೆ ಸೇರಿದ ಕಾಂತಾರ ಚಿತ್ರ

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಮುನ್ನೂರು ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡದ ಮತ್ತೊಂದು ಗೋಲ್ಡನ್ ಸಿನಿಮಾವಾಗಿ ಹೊರ ಹೊಮ್ಮಿದೆ. ಕಾಂತಾರ ಸಿನಿಮಾದ ಹವಾ ಹೇಗಿದೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಇಂದು ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಅವರ ಇಡೀ ತಂಡಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಹೌದು ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಾಣ ಮಾಡಿ ರಿಷಬ್ ಶೆಟ್ಟಿ ಅವರು ನಟನೆಯ ಜೊತೆಗೆ ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಕಳೆದ ಸೆಪ್ಟೆಂಬರ್ 30ರಂದು ಅದ್ದೂರಿಯಾಗಿ ಕನ್ನಡ ಭಾಷೆಯಲ್ಲಿ ರಿಲೀಸ್ ಆಯಿತು.

ಸಿನಿಮಾದ ಟ್ರೇಲರ್, ಸಾಂಗ್ ನೋಡಿದಾಗಿನಿಂದ ಭಾರಿ ಕುತೂಹಲದಲ್ಲಿದ್ದ ಸಿನಿ ಪ್ರೇಕ್ಷಕರು ಕಾಂತಾರ ಸಿನಿಮಾ ನೋಡಿದ ನಂತರ ಚಿತ್ರದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಿನಿ‌ಮಾಗೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ನಂತರ ಪರಭಾಷೆ ಸಿನಿ ಪ್ರೇಕ್ಷಕರು ಕೂಡ ಕನ್ನಡದ ಕಾಂತಾರ ಸಿನಿಮಾವನ್ನ ಮುಗಿಬಿದ್ದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದಾದ ಬಳಿಕ ಕಾಂತಾರ ಸಿನಿಮಾ ಬೇಡಿಕೆಯ ಅನುಸಾರ ಪಂಚಭಾಷೆಗಳಲ್ಲಿ ರಿಲೀಸ್ ಆಯಿತು. ಕಳೆದ ಸೆಪ್ಟೆಂಬರ್ 30ರಂದು ರಿಲೀಸ್ ಆದ ಕಾಂತಾರ ಸಿನಿಮಾ ಕರ್ನಾಟಕದಲ್ಲಿಯೇ ಬರೋಬ್ಬರಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಈ ಚಿತ್ರದ್ದು ವಿಶೇಷ ಗಮನಾರ್ಹವಾದ ಸಂಗತಿ ಅಂದರೆ ಕಾಂತಾರ ಸಿನಿಮಾ ಕರ್ನಾಟಕದಲ್ಲಿಯೇ ಸರಿ ಸುಮಾರು 77 ಲಕ್ಷಕ್ಕೂ ಅಧಿಕ ವೀಕ್ಷಣೆ ಮಾಡಿದೆ. ಇದೊಂದು ದಾಖಲೆಯೇ ಸರಿ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ.

ಕಾಂತಾರ ಸಿನಿಮಾ ಇದೀಗ ಭಾರತ ಮಾತ್ರ ಅಲ್ಲದೆ ವರ್ಲ್ಢ್ ವೈಡ್ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಎಲ್ಲೆಡೆ ಕಾಂತಾರ ಸಿನಿಮಾದ್ದೇ ಸದ್ದು. ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಗಳಿಸಿದ್ದೆಷ್ಟು ಅನ್ನೋದೆ ಸುದ್ದಿಯಾಗಿದೆ. ರಿಷಬ್ ಶೆಟ್ಟಿ ಅವರ ಅಮೋಘ ನಟನೆಗೆ ಎಲ್ಲಾ ಭಾಷೆಯ ಪ್ರೇಕ್ಷಕರು ಫಿಧಾ ಆಗಿದ್ದು, ಇಂದಿಗೂ ಕೂಡ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಇದುವರೆಗೆ ಒಟ್ಟು ಮುನ್ನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಇದೀಗ ಆಪ್ತ ಮೂಲಗಳ ವರದಿ ಹೊರ ಬಿದ್ದಿದೆ. ತಮಿಳಿನ ಪ್ರಸಿದ್ದ ಸಿನಿಮಾ ವಿತರಣೆ ಸಂಸ್ಥೆ ಆಗಿರೋ ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಪಕ ಎಸ್.ಆರ್ ಪ್ರಭು ಅವರ ತಮಿಳಿನಲ್ಲಿ ಕಾಂತಾರ ಸಿನಿಮಾವನ್ನ ವಿತರಣೆ ಮಾಡಿದ್ದರು. ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗಿದೆಯಂತೆ. ಈ ವಿಚಾರವನ್ನ ಅವರೇ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

%d bloggers like this: