ಮುಂದಿನ ವಾರ ಮನೆಯಲ್ಲೇ ಕೂತು ವಿಕ್ರಾಂತ್ ರೋಣ ಚಿತ್ರವನ್ನು ವೀಕ್ಷಿಸಿ

ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ವಿಕ್ರಾಂತ್ ರೋಣ ಇದೀಗ ಓಟಿಟಿಯಲ್ಲಿ ಬರಲಿದೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾವನ್ನು ಥಿಯೇಟರ್ ನಲ್ಲಿ ಕಣ್ತುಂಬಿಕೊಂಡಿದ್ದ ಸಿನಿ ಪ್ರೇಕ್ಷಕರು ಇದೀಗ ಜೀ಼5 ಓಟಿಟಿನಲ್ಲಿಯೂ ಕೂಡ ನೋಡಬಹುದಾಗಿದೆ. ಈ ಬಗ್ಗೆ ಜೀ಼5 ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಡೇಟ್ ವೊಂದನ್ನ ನೀಡಿದೆ. ಹೌದು ಬಾದ್ ಶಾ ಕಿಚ್ಚ ಸುದೀಪ್ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ವಿಕ್ರಾಂತ್ ರೋಣ ಸಿನಿಮಾ ಕಳೆದ ತಿಂಗಳು ಜುಲೈ 28ರಂದು ವರ್ಲ್ಡ್ ವೈಡ್ ಬರೋಬ್ಬರಿ 3500 ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿದೆ. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ವಿಕ್ರಾಂತ್ ರೋಣ ಸಿನಿಮಾ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಪಂಚ ಭಾಷೆಯಲ್ಲಿ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಹೊರ ರಾಜ್ಯಗಳಲ್ಲಿಯೂ ಕೂಡ ಭಾರಿ ಮೆಚ್ಚುಗೆ ಗಳಿಸಿತ್ತು.

ಬೆಳ್ಳಿಪರದೆಯ ಮೇಲೆ ಥ್ರೀ ಡಿಯಲ್ಲಿ ಬೆರಗುಗೊಳಿಸಿದ ವಿಕ್ರಾಂತ್ ರೋಣ ಸಿನಿಮಾ ಈಗ ಜೀ಼5 ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಇದೇ ಸೆಪ್ಟೆಂಬರ್ 2ರಂದು ರಿಲೀಸ್ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಯಾವ ಸಮಯಕ್ಕೆ ಎಂಬುದನ್ನ ಜೀ಼5 ಸಂಸ್ಥೆ ಮಾಹಿತಿ ನೀಡಿಲ್ಲ. ಜೀ಼5 ಕನ್ನಡ ಸಂಸ್ಥೆಯು ವಿಕ್ರಾಂತ್ ರೋಣ ಸಿನಿಮಾವನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡಿತ್ತು ಅನ್ನೋದನ್ನ ಈ ಹಿಂದೆ ತಿಳಿಸಿತ್ತು. ನಿರ್ಮಾಪಕ ಜಾಕ್ ಮಂಜು ಅವರು ವಿಕ್ರಾಂತ್ ರೋಣ ಸಿನಿಮಾವನ್ನು ತಾವು ಅಂದುಕೊಂಡಂತೆ ಎಲ್ಲಾ ರೀತಿಯಾಗಿ ಒಂದೊಳ್ಳೆ ರೀತಿಯಲ್ಲಿ ರೀಚ್ ಮಾಡಿಸಿ ಗೆದ್ದು ಬೀಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೇಲಿನ್ ಫರ್ನಾಂಡೀಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಎಲ್ಲೆಡೆ ಅಪಾರ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಇದೀಗ ಫ್ಯಾಂಟಸಿ ವಿಕ್ರಾಂತ್ ರೋಣ ಸಿನಿಮಾ ಇದೇ ಸೆಪ್ಟೆಂಬರ್2 ರಂದು ಜೀ಼ ಫೈವ್ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರೋದು ಕಿಚ್ಚನ ಅಭಿಮಾನಿಗಳಿಗೆ ಸಂತೋಷವಾಗಿದೆ.

Leave a Reply

%d bloggers like this: