ಮುಂದಿನ ಚಿತ್ರದ ದೊಡ್ಡ ಸುಳಿವು ಕೊಟ್ರಾ ರಾಕಿ, ಹಾಲಿವುಡ್ ನಿರ್ದೇಶಕನ ಜೊತೆ ಕಾಣಿಸಿಕೊಂಡ ಯಶ್ ಅವರು

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಂದಾಕ್ಷಣ ಮೊದಲು ಪ್ರಶ್ನೆ ಹುಟ್ಟೋದೇ ಯಶ್ ಮುಂದಿನ ಸಿನಿಮಾ ಯಾವ್ದು ಅನ್ನೋದು. ಕೆಜಿಎಫ್ ಚಿತ್ರ ಮತ್ತು ಅದರ ಮುಂದುವರಿದ ಭಾಗವಾಗಿ ಮೂಡಿಬಂದ ಕೆಜಿಎಫ್ ಚಾಪ್ಟರ್2 ಸಿನಿಮಾ ಯಶ್ ಅವರ ನಸೀಬನ್ನೇ ಬದಲಾಯಿಸಿಬಿಡ್ತು. ಸೌತ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾದ ನಂತರ ನ್ಯಾಶನಲ್ ಸ್ಟಾರ್ ಆಗಿ ರಾಕಿಬಾಯ್ ಅಂತಾನೇ ಫೇಮಸ್ ಆಗ್ಬಿಟ್ರು. ಕೆಜಿಎಫ್2 ಚಿತ್ರದ ನಂತರ ಯಶ್ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಭಾರಿ ಜಾಗೃತಿ ವಹಿಸ್ತಿದ್ದಾರೆ. ಕಥೆಗಳ ಆಯ್ಕೆಯ ಬಗ್ಗೆಯೂ ಕೂಡಾ ಅಪಾರ ಕಾಳಜಿ ವಹಿಸಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡ್ತಿದ್ದಾರೆ. ಕೆಜಿಎಫ್2 ಸಕ್ಸಸ್ ನಂತರ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿರೋ ಯಶ್ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಅಪ್ ಡೇಟ್ ನೀಡ್ತಾನೇ ಇರ್ತಾರೆ.

ಅದ್ರಂತೆ ಇದೀಗ ಯಶ್ ಅವರ ಬಗ್ಗೆ ಒಂದು ಲೇಟೆಸ್ಟ್ ಅಪ್ ಡೇಟ್ ಸಿಕ್ಕಿದೆ. ಅದೇನಪ್ಪಾ ಅಂದರೆ ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಗನ್ ಹಿಡಿದು ಶೂಟ್ ಮಾಡ್ತಿರೋ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು. ಸೈಲೀಶ್ ಹೇರ್ ಸ್ಟೈಲ್ ಬಿಟ್ಟು, ಗ್ಲಾಸ್ ಆಕೊಂಡ್ ಕೈಯಲ್ಲಿ ಗನ್ ಹಿಡಿದು ಗುರಿಯಿಟ್ಟು ಸ್ಪಷ್ಟವಾಗಿ ಗುರಿಯಿಟ್ಟಿರೋ ಈ ದೃಶ್ಯಾವಳಿ ನಡೆದದ್ದು ಹಾಲಿವುಡ್ ಖ್ಯಾತ ನಿರ್ದೇಶಕ ಜೆಜೆ ಪೆರ್ರಿ ಅವರೊಟ್ಟಿಗೆ ಅನ್ನೋದು ವಿಶೇಷ. ಯಶ್ ಅವರು ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಅವರೊಟ್ಟಿಗೆ ಒಂದಷ್ಟು ಕಾಲ ಕಳೆದು ಅವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ಈ ಬೆಳವಣಿಗೆ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್2 ನಂತರ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಅವರೊಟ್ಟಿಗೆ ಸಿನಿಮಾ ಮಾಡ್ತಾರೆ ಅಂತ ಹೇಳಲಾಗ್ತಿತ್ತು.

ಅದಾದ ಮೇಲೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರೊಟ್ಟಿಗೆ ಸಿನಿಮಾ ಮಾಡ್ತಾರೆ ಅಂತಾಯ್ತು. ಕೊನೆಗೆ ಯಾವ್ದೂ ಇಲ್ಲ ಯಶ್ ಪ್ರಶಾಂತ್ ನೀಲ್ ಮತ್ತೆ ಜೊತೆಯಾಗಿ ಕೆಜಿಎಫ್3 ಮಾಡಲಿದ್ದಾರೆ. ಹಾಗಾಗಿಯೇ ಯಶ್ ಇನ್ನು ಕೂಡ ತಮ್ಮ ಉದ್ದ ಕೂದಲನ್ನ ನಿರ್ವಹಣೆ ಮಾಡ್ತಿದ್ದಾರೆ ಅಂತ ಸುದ್ದಿ ಆಯ್ತು. ಇದೀಗ ಇದೆಲ್ಲದರ ನಡುವೆ ಯಶ್ ಅವರು ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರನ್ನ ಭೇಟಿ ಆಗಿರೋದ್ರಿಂದ ಯಶ್ ಹಾಲಿವುಡ್ ಹಾರಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಜೆಜಿಪೆರ್ರಿ ಅವರೊಟ್ಟಿಗೆ ಯಶ್ ಒಂದು ಆಕ್ಷನ್ ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತು ಮೂಲಗಳಿಂದ ಕೇಳಿ ಬರ್ತಿದೆ. ಆದರೆ ಇದೆಲ್ಲದಕ್ಕೂ ಉತ್ತರ ಯಶ್ ಅವರೇ ನೀಡಬೇಕಾಗಿದೆ. ಆ ಸುದ್ಥಿಗಾಗಿ ಇಡೀ ಭಾರತೀಯ ಚಿತ್ರರಂಗದ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

%d bloggers like this: