ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮುದ್ದಾದ ಹೆಂಡತಿ ಹಾಗು ಇಬ್ಬರು ಮಕ್ಕಳು ನೋಡಿ

ಇತ್ತೀಚೆಗೆ ಕಳೆದೊಂದು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು ಮುಖ್ಯಮಂತ್ರಿ ಬದಲಾವಣೆ ವಿಷಯ.ಈ ಸಿ.ಎಂ.ಹುದ್ದೆಗಾಗಿ ಕಾಯುತ್ತಿದ್ದವರು ಹಲವರು.ಆದರೆ ಇಂದು ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಉದಯಕ್ಕೆ ಕಾರಣವಾಗಿದ್ದು ಬಿ.ಎಸ್.ಯಡಿಯೂರಪ್ಪ. ಹಗಲಿರುಳು ಪಕ್ಷಕ್ಕಾಗಿ ಸೈಕಲ್ ಏರಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ತಮ್ಮ ಶ್ರಮದಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಜನಪ್ರಿಯ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಒಳಜಗಳ ಮತ್ತು ಕೆಲವು ಶಾಸಕರ,ಸಚಿವರ ಅಸಮಾಧಾನದ ಧ್ವನಿ ಹೆಚ್ಚಾಗಿ ಮುಖ್ಯಮಂತ್ರಿ ಬದಲಾವಣೆ ಮಟ್ಟಿಗೆ ಹೈ ಕಮಾಂಡ್ ಗೆ ದೂರು ತಲುಪಿತು.ಕೊನೆಗೂ ಸಿ.ಎಂ.ಬದಲಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ ಹೈ ಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದ್ದು ಮುಂದಿನ ಸಿ.ಎಂ.ಹುದ್ದೆಗೆ ಯಾರನ್ನು ಆಯ್ಕೆ ಮಾಡುವುದು ಎಂಬುದು.

ಜಾತಿ ಸಮುದಾಯಗಳ ಲೆಕ್ಕಾಚಾರ ಜೊತೆ ಜೊತೆಗೆ ಹಿರಿಯ ಮುಖಂಡರು,ಹೊಸಮುಖ,ಅನುಭವ ಹೀಗೆ ಅನೇಕ ಸವಾಲುಗಳೊಂದಿಗೆ ಬೆಲ್ಲದ್,ಪ್ರಹ್ಲಾದ್ ಜೋಶಿ,ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬಂದರು ಕೂಡ ಅಂತಿಮ ವೇಳೆಯಲ್ಲಿ ಅಚ್ಚರಿಯಾಗಿ ಮುಖ್ಯಮಂತ್ರಿ ಗದ್ದುಗೆ ಏರಿದವರು ಹಾಲಿ ಗೃಹ ಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಬೊಮ್ಮಾಯಿ.ಪ್ರಸ್ತುತ ಗೃಹ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದದ್ದು ಸ್ವ ಪಕ್ಷದ ಹಲವು ನಾಯಕರಿಗೆ ಅಚ್ಚರಿಯಾಗಿ ಕಂಡಿತ್ತು.ಇನ್ನು ರಾಜ್ಯದ ಜನರಿಗೆ ಬಸವರಾಜ್ ಬೊಮ್ಮಾಯಿ ಅವರು ಗೃಹಮಂತ್ರಿಗಳು ಎಂದು ತಿಳಿದಿದ್ದ ಕಾರಣ ಅವರ ಪರಿಚಯ ಅಷ್ಟೇನೋ ಮಾಡಿಕೊಡಬೇಕಾಗಿರಲಿಲ್ಲ.

ಆದರೇ ಬಸವರಾಜ್ ಬೊಮ್ಮಾಯಿ ಅವರ ಹಿನ್ನೆಲೆ ರಾಜಕೀಯವಾಗಿ ನಡೆದುಬಂದ ದಾರಿ ನೋಡುವುದಾದರೆ,ಕರ್ನಾಟಕ ರಾಜ್ಯದ
23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಅವರು ಎಸ್.ಆರ್ ಬೊಮ್ಮಾಯಿ ಮತ್ತು ಗಂಗಮ್ಮ ದಂಪತಿಗಳಿಗೆ 1960 ರಲ್ಲಿ ಹುಬ್ಬಳ್ಳಿ ಜನಿಸುತ್ತಾರೆ.ಇವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುತ್ತಾರೆ.ಬಸವರಾಜ್ ಬೊಮ್ಮಾಯಿ ಅವರು ಈಗಿನ ಕೆ.ಎಲ್.ಇ.ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ.ತದ ನಂತರ ಒಂದಷ್ಟು ವರ್ಷಗಳ ಕಾಲ ಪುಣೆಯ ಟಾಟಾ ಮೋಟರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.

ಇದಾದ ಬಳಿಕ ತನ್ನ ತಂದೆಯಂತೆ ರಾಜಕೀಯ ಕ್ಷೇತ್ರದತ್ತ ಗಮನ ಹರಿಸಿದ ಬಸವರಾಜ್ ಬೊಮ್ಮಾಯಿ ಅವರು 2008 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತು ಗೆಲ್ಲುತ್ತಾರೆ.ಹೀಗೆ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗುವ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ.ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಉತ್ತಮ ಆಡಳಿತ ನೀಡುವ ಆಶಯ ಹೊಂದಿದ್ದಾರೆ. ಸಾದರ ಲಿಂಗಾಯಿತ ಸಮುದಾಯದ ಬಸವರಾಜ್ ಬೊಮ್ಮಾಯಿಯವರ ಧರ್ಮಪತ್ನಿ ಚೆನ್ನಮ್ಮ.ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮ,ಮಗ ಭರತ್ ಅಮೆರಿಕದಲ್ಲಿ ನೆಲೆಸಿದ್ದರು.

ಸದ್ಯಕ್ಕೆ ಭಾರತ ದೇಶಕ್ಕೆ ಹಿಂದಿರುಗಿರುವ ಭರತ್ ತಮ್ಮ ತಂದೆಯಂತೆ ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡುವ ಇಚ್ಚೆ ಹೊಂದಿದ್ದಾರೆ.ಆದರೆ ಪ್ರಸ್ತುತ ತಮ್ಮ ತಂದೆಯ ಕಂಪನಿಯೊಂದನ್ನು ನೋಡಿಕೊಳ್ಳುತ್ತಿದ್ದಾರೆ.ಇನ್ನು ಮಗಳು ಅಧಿತಿ ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: