ಮುಕೇಶ್ ಅಂಬಾನಿ ಕೈ ಸೇರಿತು 728 ಕೋಟಿಯ ಹೊಸ ಐಷಾರಾಮಿ ಹೋಟೆಲ್, ಇಲ್ಲಿ ಒಂದು ದಿನದ ಬಾಡಿಗೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಜಗತ್ತಿನ ಅತಿದೊಡ್ಡ ಶ್ರೀಮಂತರ ಪೈಕಿ ಒಬ್ಬರಾಗಿರುವ ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಮುಖೇಶ್ ಅಂಬಾನಿ ಇತ್ತೀಚೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಹೌದು ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ ಮುಖೇಶ್ ಅಂಬಾನಿ ಈಗಾಗಲೇ ರಿಟೇಲ್, ಪೆಟ್ರೋಲಿಯಂ ಸೇರಿದಂತೆ ವಿವಿಧ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಈ ಮೂಲಕ ವಿವಿಧ ಆದಾಯದ ಮೂಲಗಳನ್ನು ಹೊಂದಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೆ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಸೂಚಿಯಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅಗ್ರ ಹದಿನೈದು ಜನರ ಹೆಸರಿನ ಸಾಲಿನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಈ ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಇಂಡೆಕ್ಸ್ ನಲ್ಲಿ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಬರೋಬ್ಬರಿ 95.4 ಬಿಲಿಯನ್ ಡಾಲರ್ ನಷ್ಟು ಮೌಲ್ಯ ಹೊಂದಿದೆ ಎಂದು ಪ್ರಕಟಿಸಿದೆ.

ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ತಾವೇ ಮೊಟ್ಟ ಮೊದಲ ಬಾರಿಗೆ ಫೈವ್ ಜಿ ನೆಟ್ ವರ್ಕ್ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯೋನುಮುಖವಾಗಿ ಕಾರ್ಯ ನಿರ್ವಹಿಸುತ್ತಿದೆ ಜಿಯೋ ಸಂಸ್ಥೆ.ಅಂತೆಯೇ ಇದರ ನಡುವೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ಇದೀಗ ರಿಯಲ್ ಎಸ್ಟೇಟ್ ನತ್ತ ಮುಖ ಮಾಡಿದ್ದಾರೆ. ಹೌದು ಮುಖೇಶ್ ಅಂಬಾನಿಯವರು ಕೆಲವು ತಿಂಗಳ ಹಿಂದೆಯಷ್ಟೆ ಬ್ರಿಟನ್ ದೇಶದ ಪ್ರತಿಷ್ಟಿತ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಭಾರಿ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದರು. ಇದರ ಜೊತೆಗೆ ಇದೀಗ ನ್ಯೂಯಾರ್ಕ್ ನ ಪ್ರೀಮಿಯರ್ ವಿಲಾಸಿ ಐಷಾರಾಮಿ ಹೋಟೆಲ್ ವೊಂದನ್ನ ತಮ್ಮದಾಗಿಸಿಕೊಂಡಿದ್ದಾರೆ.

ಹೌದು ಮುಖೇಶ್ ಅಂಬಾನಿಯವರು ಪ್ರಿಸ್ಟೀನ್ ಸೆಂಟ್ರಲ್ ಪಾರ್ಕ್ ಮತ್ತು ಕೊಲಂಬಸ್ ವೃತ್ತಗೆ ಸಮೀಪ ಇರುವ ಪ್ರತಿಷ್ಟಿತ ಹೋಟೆಲ್ ವೊಂದನ್ನ ಬರೋಬ್ಬರಿ 728 ಕೋಟಿ ಗೆ ಖರೀದಿ ಮಾಡಿದ್ದಾರೆ. ಈ ಹೋಟೆಲ್ 2003 ರಲ್ಲಿ ನಿರ್ಮಾಣವಾಗಿದೆಯಂತೆ. ಈ ಹೋಟೆಲ್ ನಲ್ಲಿ ಸರಿ ಸುಮಾರು 248 ರೂಂ ಗಳಿದ್ದಾವೆಯಂತೆ. ಈ ಹೋಟೇಲಿನ ರೂಮಿನಲ್ಲಿ ಒಂದು ದಿನ ಉಳಿಯಬೇಕಾದರೆ ಪ್ರತಿ ದಿನಕ್ಕೆ ಬರೋಬ್ಬರಿ ಐವತ್ತೈದು ಸಾವಿರ ಬಾಡಿಗೆ ಕಟ್ಟಬೇಕಾಗಿರುತ್ತದೆಯಂತೆ. ಈ ಹೋಟೆಲ್ ನಲ್ಲಿ ಜಗತ್ತಿನ ಪ್ರತಿಷ್ಟಿತ ಉದ್ಯಮಿಗಳು, ಹಾಲಿವುಡ್ ನ ಅನೇಕ ಸ್ಟಾರ್ ನಟ-ನಟಿಯರು ಉಳಿದುಕೊಳ್ಳಲಿದ್ದಾರಂತೆ.