ಮುಂಬೈ ಸರಣಿ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಅಪರಾಧಿಯಾಗಿ ಜೈಲು ಸೇರಿದ್ದ ಈ ಬಾಲಿವುಡ್ ನಟ ತನ್ನ ತಂದೆಯ ಜೊತೆ ದೇಶ ದ್ರೋಹಿಯ ರೀತಿ ಮಾತನಾಡಿದ್ರಾ..!

ಮುಂಬೈ ಸರಣಿ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಅಪರಾಧಿಯಾಗಿ ಜೈಲು ಸೇರಿದ್ದ ಈ ಬಾಲಿವುಡ್ ನಟ ತನ್ನ ತಂದೆಯ ಜೊತೆ ದೇಶ ದ್ರೋಹಿಯ ರೀತಿ ಮಾತನಾಡಿದ್ರಾ…! ಸಿನಿಮಾ ಸ್ಟಾರ್ಸ್ ಕೆಲವರು ಸಿನಿಮಾದಲ್ಲಿ ಹೀರೋ ಆದಂತೆ ನಿಜ ಜೀವನದಲ್ಲಿಯೂ ಕೂಡ ತಮ್ಮ ಉತ್ತಮ, ಸಜ್ಜನ, ಪರೋಪಕಾರಿ ವ್ಯಕ್ತಿತ್ವದ ಹೀರೋ ಆಗಿ ಜನರ ಪ್ರೀತಿ ಗಳಿಸುತ್ತಾರೆ. ಆದರೆ ಕೆಲವು ನಟರು ದುರಂತ ಎಂಬಂತೆ ಸಿನಿಮಾದಲ್ಲಿ ಹೀರೋ ಆಗಿ ನಿಜ ಜೀವನದಲ್ಲಿ ವಿಲನ್ ಗಳಾಗಿ ಬಿಡುತ್ತಾರೆ. ಅದೇ ರೀತಿಯಾಗಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಕೂಡ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದರು. ಅದರೆ ರಿಯಲ್ ಲೈಫ್ ನಲ್ಲಿ ಮಾತ್ರ ಉಗ್ರರಿಗೆ ನೆರವಾಗಿ ಅಪರಾಧಿಯಾಗಿ ಜೈಲು ಪಾಲಾದರು. ಹೌದು ಬಾಲಿವುಡ್ ನಟರಾದ ಸುನೀಲ್ ದತ್ತ ಅವರ ಪುತ್ರರಾದ ಸಂಜಯ್ ದತ್ 1981 ರಲ್ಲಿ ತನ್ನ ತಂದೆ ಸುನೀಲ್ ದತ್ ಅವರೇ ಆಕ್ಷನ್ ಕಟ್ ಹೇಳಿದ ರಾಕಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಹೆಜ್ಜೆ ಇಡುತ್ತಾರೆ.

ಬಳಿಕ ಹಿಂದಿರುಗದೆ ಸಂಜಯ್ ದತ್ ಅವರು ಬರೋಬ್ಬರಿ 180 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಂಜುಬಾಯ್ ಎಂದೇ ಹೆಸರುವಾಸಿಯಾಗಿದ್ದಾರೆ. ಅವರ ನಟನಾಪ್ರತಿಭೆಗೆ ಸಾಕ್ಷಿಯಾಗಿ ಅವರಿಗೆ ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು ಸಂದಿವೆ. ಇದರ ನಡುವೆ ನಟ ಸಂಜಯ್ ದತ್ ಅವರ ಜೀವನದಲ್ಲಿ ಕಪ್ಪು ಚುಕ್ಕೆ ಕೂಡ ಇದೆ. ಹೌದು 1993 ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ದಾಳಿ ಮಾಡಿದ ಉಗ್ರರಿಗೆ ನೆರವಾಗಿದ್ದಾರೆ. ಅದಲ್ಲದೆ ಸಂಜಯ್ ದತ್ ಅವರ ಮನೆಯಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳ ಇಟ್ಟುಕೊಳ್ಳಲು ಅನುವು ಮಾಡಿಕೊಡುವ ಮೂಲಕ ಉಗ್ರರಿಗೆ ದಾಳಿ ಮಾಡಲು ಪರೋಕ್ಷವಾಗಿ ಸಹಾಯ ಮಾಡಿದ ಅಪರಾಧದಿಂದಾಗಿ ಸಂಜಯ್ ದತ್ ಅವರಿಗೆ ಬರೋಬ್ಬರಿ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಸಂಜಯ್ ದತ್ ಅವರ ಜೀವನ ಕುರಿತು ಯಾಸಿನ್ ಉಸ್ಮಾನ್ ಎಂಬ ಲೆಖಕರು ” ಸಂಜಯ್ ದತ್ ” ದಿ ಕ್ರೇಜಿ಼ ಅನ್ ಟೋಲ್ಡ್ ಲವ್ ಸ್ಟೋರಿ ಎಂಬ ಪುಸ್ತಕವೊಂದನ್ನ ಹೊರ ತರುತ್ತಾರೆ.

ಈ ಪುಸ್ತಕದಲ್ಲಿ ಸಂಜಯ್ ದತ್ ಅವರು ಜೈಲಿನಲ್ಲಿದ್ದಾಗ ಅವರ ತಂದೆ ಸುನೀಲ್ ದತ್ ಅವರು ತಮ್ಮ ಮಗ ಸಂಜಯ್ ದತ್ ಅವರನ್ನ ಭೇಟಿ ಮಾಡಿ ಮಾತನಾಡುತ್ತಾರಂತೆ. ಆ ಮಾತು ಕತೆಯಲ್ಲಿ ತಂದೆ ಸುನೀಲ್ ದತ್ ಅವರು ಸಂಜಯ್ ದತ್ ಅವರ ಬಳಿ ಏಕೆ ನೀನು ದೇಶದ್ರೋದ ಕೆಲಸ ಮಾಡಿದೆ. ನೀನು ಈ ಕೆಲಸ ಮಾಡಿಲ್ಲ ಎಂದು ನನಗೆ ಗೊತ್ತು ಎಂದು ಕೇಳುತ್ತಾರಂತೆ. ಆಗ ಸಂಜಯ್ ದತ್ ಇಲ್ಲ ನನ್ನಿಂದ ತಪ್ಪಾಗಿದೆ ಎಂದು ತನ್ನ ತಂದೆ ಸುನೀಲ್ ದತ್ ಅವರ ಮುಂದೆ ತಪ್ಪನ್ನು ಒಪ್ಪಿಕೊಳ್ಳುತ್ತಾರಂತೆ. ಯಾಕಾಗಿ ಈ ಕೆಲಸ ಮಾಡಿದೆ ಎಂದು ಪ್ರಶ್ನೆ ಮಾಡಿದಾಗ ತಾಯಿ ಮುಸ್ಲಿಂ ಆಗಿದ್ದ ಕಾರಣ ಸಂಜಯ್ ದತ್ ನನ್ನ ರಕ್ತದಲ್ಲಿ ಮುಸ್ಲಿಂ ರಕ್ತ ಹರಿಯುತ್ತಿದೆ ಎಂದು ತನ್ನ ತಂದೆಯ ಮುಂದೆ ಆಕ್ರೋಶಭರಿತರಾಗಿ ಹೇಳಿದ್ದರು ಎಂದು ಪುಸ್ತಕದಲ್ಲಿದೆ. ಆದರೆ ಈ ಬಗ್ಗೆ ನಟ ಸಂಜಯ್ ದತ್ ಅವರ ಪುಸ್ತಕದಲ್ಲಿ ಬರೆದಿರುವುದು ಶುದ್ದ ಸುಳ್ಳು. ನನ್ನ ತಂದೆ ಜೈಲಿಗೇ ಬಂದಿಲ್ಲ. ಇನ್ನು ನಾನು ಅವರ ಬಳಿ ಆ ರೀತಿ ಮಾತನಾಡಿರುವುದು ಎಲ್ಲಿ ಹೇಗೆ ಎಂದು ಪ್ರತಿಕ್ರಿಯೆ ನೀಡುತ್ತಾರೆ.

Leave a Reply

%d bloggers like this: