ಮೊಟ್ಟೆಯ ಜೊತೆ ಈ ಆಹಾರಗಳನ್ನು ತಿನ್ನುತ್ತಿದ್ದರೆ ಈಗಲೇ ನಿಲ್ಲಿಸಿ, ಇಲ್ಲ ಅಂದರೆ ದೇಹಕ್ಕೆ ಉಂಟಾಗತ್ತೆ ಅನಾಹುತ

ಮನುಷ್ಯ ತನ್ನ ಆಯುಷ್ಯವನ್ನು ನಿಯಂತ್ರಣ ಮಾಡಲು ಸಾದ್ಯವಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಲು ಸಹ ಸಾಧ್ಯವಿಲ್ಲ. ಆದರೆ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನ ತಿಳಿಯಬಹುದು. ತಮ್ಮ ಆರೋಗ್ಯವನ್ನು ಹೇಗೆ ನಿಯಮಿತವಾಗಿ ನಿರ್ವಹಣೆ ಮಾಡಬೇಕು ಎಂಬುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುತ್ತದೆ. ಆರೋಗ್ಯವೇ ಭಾಗ್ಯ. ಮನುಷ್ಯನಿಗೆ ಹಣ, ಆಸ್ತಿ, ಅಧಿಕಾರ ಅಂಧ ಎಲ್ಲಾ ಇದ್ದು ಆರೋಗ್ಯವೇ ಇಲ್ಲ ಎಂದರೆ ಅವರು ಯಾವ ಸುಖವನ್ನು ಅನುಭವಿಸಲಾರರು. ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ಅವಲಂಬನೆ ಆಗಿರುತ್ತದೆ. ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ಪಧಾರ್ಥಗಳು ವ್ಯಕ್ತಿಯು ಆರೋಗ್ಯಕರವಾಗಿರಲು ಸಹಾಯ ಮಾಡುತ್ತವೆ. ಉತ್ತಮ ಪ್ರೋಟಿನ್ ಅಂಶ ಹೊಂದಿರುವ ಆಹಾರ ಪಧಾರ್ಥಗಳಲ್ಲಿ ಹಾಲು,ಬಾಳೆ ಹಣ್ಣು,ಮೊಟ್ಟೆ ಪ್ರಮುಖವಾಗಿರುತ್ತವೆ.

ಅಂತೆಯೇ ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ದೇಹ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅದೇ ವೈದ್ಯರು ಹೇಳುವುದೇನೆಂದರೆ ಮೊಟ್ಟೆಯ ಜೊತೆ ಜೊತೆಗೆ ಕೆಲವೊಂದು ಪಧಾರ್ಥಗಳನ್ನು ಸೇವನೆ ಮಾಡಬೇಡಿ ಎಂದು ಕೂಡ ಸಲಹೆ ನೀಡುತ್ತಾರೆ.ಅದಕ್ಕೆ ಸೂಕ್ತವಾದ ಕಾರಣಗಳನ್ನು ನೀಡಿದ್ದಾರೆ. ಅವುಗಳೆಂದರೆ ಮೊಟ್ಟೆಯ ಜೊತೆಗೆ ಬಾಳೆ ಹಣ್ಣನ್ನ ಸೇವಿಸಬಾರದು. ಮೊಟ್ಟೆಯು ಅತೀ ಹೆಚ್ಚು ಪ್ರೋಟಿನ್, ಜೀವಕಾಂಶಗಳು, ಖನಿಜಾಂಶಗಳು ಮತ್ತು ಪೌಷ್ಟಿಂಕಾಂಶವನ್ನು ಒಳಗೊಂಡಿರುತ್ತದೆ.ಮೊಟ್ಟೆಯು ಆರೋಗ್ಯಕ್ಕೆ ಉತ್ತಮವಾದುದೇ ಆದರೆ ಬಾಳೆ ಹಣ್ಣನ್ನು ಕೂಡ ಅದೇ ಸಮಯದಲ್ಲಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದೇಳುತ್ತಾರೆ. ಕೆಲವರಿಗೆ ಮೊಟ್ಟೆಯ ಜೊತೆಗೆ ಬೇಕನ್ ಅನ್ನು ಒಟ್ಟಿಗೆ ತಿನ್ನುವ ಹವ್ಯಾಸ ಇರುತ್ತದೆ.

ಇದು ನಿಮ್ಮ ದೇಹದ ಆಲಸ್ಯಕ್ಕೆ ಕಾರಣವಾಗಿ ದೇಹದ ಶಕ್ತಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಏಕೆಂದರೆ ಬೇಕನ್ ನಲ್ಲಿ ಮೊಟ್ಟೆಯಲ್ಲಿರುವಷ್ಟೇ ಪ್ರೋಟೀನ್ ಮತ್ತು ಕೊಬ್ಬಿನಾಂಶಗಳು ಇರುತ್ತವೆ. ಇನ್ನು ಮೊಟ್ಟೆ ತಿಂದ ಬಳಿಕ ಅಥವಾ ಮೊಟ್ಟೆ ತಿನ್ನುವ ಮುನ್ನ ಸಕ್ಕರೆ ಅಥವಾ ಸಕ್ಕರೆಯ ಅಂಶ ಹೆಚ್ಚಾಗಿರುವ ಆಹಾರ ಪಧಾರ್ಥಗಳನ್ನ ಸೇವಿಸಲೇಬಾರದು. ಇವೆರಡು ಪಧಾರ್ಥಗಳ ಮಿಶ್ರಣ ದೇಹದಲ್ಲಿ ಅಮೈನೋ ಆಮ್ಲವು ರಕ್ತ ಹೆಪ್ಪು ಗಟ್ಟುವಿಕೆಗೆ ಕಾರಣವಾಗುತ್ತದೆ. ಇನ್ನು ಮೊಟ್ಟೆಯ ಜೊತೆಗೆ ಸೋಯಾ ಹಾಲನ್ನು ಸೇವಿಸುವುದರಿಂದ ದೇಹದ ಪ್ರೋಟಿನ್ ಹೀರಿಕೊಳ್ಳಲು ತೊಂದರೆ ಉಂಟು ಮಾಡುತ್ತದೆ. ಇನ್ನು ಬಹುತೇಕರು ಮೊಟ್ಟೆಯನ್ನು ಬೆಳಿಗ್ಗೆ ತಿನ್ನುವುದು ಉಂಟು. ಇಂತಹ ಸಂಧರ್ಭದಲ್ಲಿ ಯಾವುದೇ ಕಾರಣಕ್ಕೂ ಚಹಾ ಸೇವನೆ ಮಾಡದೇ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.