ಮೂರೇ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಸಿನಿಮಾ, ಬಜೆಟ್ ಎಷ್ಟು

ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ ಅಂದರೆ ಅದು ಪ್ಯಾನ್ ಇಂಡಿಯಾ ಆದಿಪುರುಷ್ ಸಿನಿಮಾ. ಹೌದು ಇದೀಗ ಆದಿಪುರುಷ್ ಸಿನಿಮಾ ತಂಡದಿಂದ ಗುಡ್ ನ್ಯೂಸ್ ವೊಂದು ಹೊರ ಬಿದ್ದಿದೆ. ಇದು ನಟ ಪ್ರಭಾಸ್ ಅಭಿಮಾನಿಗಳಿಗೆ ಸಖತ್ ಎಕ್ಸೈಟ್ ಆಗೋ ಸುದ್ದಿ ಕೂಡಾ ಆಗಿತ್ತು. ಅದೇನಪ್ಪಾ ಅಂದರೆ ಆದಿಪುರುಷ್ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಈ ಆದಿಪುರುಷ್ ಸಿನಿಮಾದ ಪೋಸ್ಟರ್ ನಲ್ಲಿ ನಟ ಪ್ರಭಾಸ್ ರಾಮನ ಅವತಾರದಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಪ್ರಭಾಸ್ ರಾಮನ ಅವತಾರದಲ್ಲಿ ಇರೋದನ್ನ ಕಂಡು ಅವರ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ. ಇತ್ತೀಚೆಗೆ ತಾನೇ ಈ ಆದಿಪುರುಷ್ ಸಿನಿಮಾದ ನಿರ್ದೇಶಕರಾದ ಓಂ ರಾವುತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆದಿಪುರುಷ್ ಸಿನಿಮಾದ ಹೊಸದೊಂದು ಅಪ್ ಡೇಟ್ ನೀಡಲಿದ್ದೇವೆ ಎಂದು ತಿಳಿಸಿದ್ದರು.

ಇದಕ್ಕೆ ಸಿನಿ ಪ್ರಿಯರು ಕೂಡ ಏನಿರಬಹುದು ಎಂದು ಭಾರಿ ಕುತೂಹಲದಿಂದ ಕಾಯುತ್ತಿದ್ದರು. ಅದರಂತೆ ಆದಿಪುರುಷ್ ಸಿನಿಮಾದ ಪೋಸ್ಟರ್ ಅನ್ನ ಇದೇ ಸೆಪ್ಟೆಂಬರ್ 30 ರ ಬೆಳಿಗ್ಗೆ ಏಳು ಗಂಟೆ ಹನ್ನೋಂದು ನಿಮಿಷಕ್ಕೆ ಕನ್ನಡ ಸೇರಿದಂತೆ ಪಂಚ ಭಾಷೆಯ ಶೀರ್ಷಿಕೆಯಲ್ಲಿ ಪೋಸ್ಟರ್ ಅನ್ನ ರಿವೀಲ್ ಮಾಡಲಾಯಿತು. ಈ ಪೋಸ್ಟರ್ ನಲ್ಲಿ ನಟ ಪ್ರಭಾಸ್ ಅವರು ರಾಮನ ಪಾತ್ರದಲ್ಲಿ ಬಿಲ್ಲು ಬಾಣ ಹಿಡಿದು ಮಿಂಚಿದ್ದಾರೆ. ಇದೇ ಪೋಸ್ಟರ್ ನಲ್ಲಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನಪ್ಪಾ ಅಂದರೆ ಇದೇ ಅಕ್ಟೋಬರ್2 ರಂದು ಸಂಜೆ 7.11 ಕ್ಕೆ ಆದಿಪುರುಷ್ ಸಿನಿಮಾದ ಟೀಸರ್ ಲಾಂಚ್ ಆಗಲಿದೆ ಅನ್ನೋದನ್ನ ತಿಳಿಸಿದೆ. ಈ ವಿಚಾರ ತಿಳಿದು ಪ್ರಭಾಸ್ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಇನ್ನು ಆದಿಪುರುಷ್ ಪೌರಾಣಿಕ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಮಯ ಜನವರಿ 12ಕ್ಕೆ ಪಂಚ ಭಾಷೆಗಳಲ್ಲಿ ವರ್ಲ್ಢ್ ವೈಡ್ ಆದಿಪುರುಷ್ ಸಿನಿಮಾ ಥಿಯೇಟರ್ ಗಳಲ್ಲಿ ಆರ್ಭಟಿಸಲಿದ್ದಾನೆ ಎಂದು ಚಿತ್ರತಂಡ ತಿಳಿಸಿದೆ.

ಇನ್ನು ಈ ಆದಿಪುರುಷ್ ಸಿನಿಮಾ ನಟ ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ಬಹುದೊಡ್ಡ ತಿರುವು ಅಂತ ಹೇಳ್ಬೋದು. ಯಾಕಂದ್ರೆ ಆದಿಪುರುಷ್ ಎಂಬ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಈ ಪೌರಾಣಿಕ ಸಿನಿಮಾದಲ್ಲಿ ಅವಕಾಶ ಪಡೆದಿರೋದು ಪ್ರಭಾಸ್ ಅವರಿಗೆ ಗಾಡ್ ಗಿಫ್ಟ್ ಅಂತಾನೇ ಹೇಳಲಾಗ್ತಿದೆ. ಪ್ರಭಾಸ್ ಅವರು ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟ ಪ್ರಭಾಸ್ ಬರೋಬ್ಬರಿ 120 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಸೀತೆಯಾಗಿ ಕೃತಿ ಸನೂನ್ ನಟಿಸುತ್ತಿದ್ದು, ರಾವಣನಾಗಿ ಸೈಫ್ ಅಲಿಖಾನ್ ಅವರು ನಟಿಸುತ್ತಿದ್ದಾರೆ. ಅದೇ ರೀತಿಯಾಗಿ ಲಕ್ಷ್ಮಣನಾಗಿ ಸನ್ನಿಸಿಂಗ್ ನಟಿಸುತ್ತಿದ್ದು, ದೇವ್ ದತ್ತಾ ಹನುಮಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಆದಿಪುರುಷ ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಝಿ಼ ಆಗಿದೆ. ಇದೀಗ ಪೋಸ್ಟರ್ ಬಿಡುಗಡೆ ಮಾಡಿ ಸಖತ್ ಕ್ರೇಜ಼್ ಹುಟ್ಟು ಹಾಕಿದೆ ಆದಿಪುರುಷ್ ಸಿನಿಮಾ ತಂಡ.

Leave a Reply

%d bloggers like this: