ಮೊನ್ನೆ ಹೊಂಬಾಳೆ ಫಿಲ್ಮ್ಸ್‌ ಜೊತೆ ಹೊಸ ಚಿತ್ರ ಘೋಷಣೆ, ಇಂದು ಹೊಸ ಸ್ಪೋರ್ಟ್ಸ್ ಕಾರು ಖರೀದಿಸಿದ ಸ್ಟಾರ್ ನಟ

ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಲೈಫ್ ಸ್ಟೈಲ್ ಫುಲ್ ಹೈ ಫೈ ಆಗಿರುತ್ತೆ. ಅದ್ರಲ್ಲೂ ಕಾರ್ ಕ್ರೇಜ಼್ ಅನ್ನೋದು ಸಖತ್ ಆಗಿಯೇ ಇರುತ್ತೆ ಬಿಡಿ. ಅದ್ರಂತೆ ಇದೀಗ ಮಾಲಿವುಡ್ ಸ್ಟಾರ್ ನಟ ಫಹಾದ್ ಫಾಸಿಲ್ ಸೌತ್ ಸಿನಿರಂಗದಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ. ಒಂದು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರೋ ಮೂಲಕ ಸುದ್ದಿಯಾದ್ರೆ, ಇನ್ನೊಂದು ಕಡೆ ಕಾರ್ ಮೇಲ್ ಕಾರ್ ಖರೀದಿ ಮಾಡುವ ಮೂಲಕ ಕೂಡ ಸುದ್ದಿ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಫಹಾದ್ ಫಾಸಿಲ್ ಅವರು ಐಷಾರಾಮಿ ಕಾರೊಂದನ್ನ ಖರೀದಿ ಮಾಡಿದ್ರು. ನಟ ಫಹಾದ್ ಫಾಸಿಲ್ ಅವರು ಹೇಗೆ ವೈವಿಧ್ಯಮ ನಟ ಅಂತ ಹೆಸರು ಮಾಡಿದ್ದಾರೋ ಅದೇ ರೀತಿಯಾಗಿ ತಮ್ಮ ಬದುಕನ್ನ ಕೂಡ ತುಂಬಾ ವೈವಿಧ್ಯಮವಾಗಿ ಕಟ್ಟಿಕೊಂಡಿದ್ದಾರೆ.

ಫಹಾದ್ ಫಾಸಿಲ್ ಅವರು ಹೊಸದಾಗಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನ ಖರೀದಿ ಮಾಡಿ ಸುದ್ದಿ ಆಗಿದ್ದರು. ಕಾರು ಗ್ರಿಗಿಯೊ ಕೆರೆಸ್ ಶೇಡ್ ಮಾದರಿಯದ್ದು. ಇದೀಗ ಮತ್ತೊಂದು ವಾಹನ ಖರೀದಿಸಿದ್ದಾರೆ. ಹೌದು ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿರೋ ಮಿನಿ ಕಂಟ್ರಿಮ್ಯಾನ್ ಜೆಸಿಡಬ್ಲ್ಯೂ ಕಾರನ್ನ ಖರೀದಿಸಿದ್ದಾರೆ. ಈ ಮಿನಿ ಕಂಟ್ರಿಮ್ಯಾನ್ ಕಾರ್ ಬಗ್ಗೆ ಅದರ ವಿಶೇಷತೆಗಳನ್ನ ನೋಡೋದಾದ್ರೆ ಎಲ್.ಇಡಿ ಹೆಡ್ ಲ್ಯಾಂಪ್ ಅಂಡ್ ಎಲ್ ಇ.ಡಿ ಟೈಲ್ ಲೈಟ್ ಗಳು ಮತ್ತು ಹೊಸ ರೇಡಿಯೇಟರ್ ಗ್ರಿಲ್ ಅಂಡ್ ರೂಫ್ ಅನ್ನ ಹೊಂದಿದೆ. ಇದರಲ್ಲಿ 18ಇಂಚಿನ ಅಲಾಯ್ ವ್ಹೀಲ್ ಗಳು ರನ್ ಫ್ಲಾಟ್ ಟೈರ್ ಅಂಡ್ ಹೆಚ್ಚುವರಿ ಏರೋಡೈನಾಮಿಕ್ ಅನ್ನ ಸ್ಟ್ಯಾಂಡರ್ಡ್ ಅನ್ನ ಸಹ ಹೊಂದಿದೆ.

ಅತ್ಯಾಧುನಿಕ ಫೀಚರ್ ಗಳ ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಕ್ಲಸ್ಟರ್, ಹೆಡ್ಸ್ ಅಪ್ ಡಿಸ್ ಪ್ಲೇ ಆಂಬಿಯೆಂಟ್ ಲೈಟಿಂಗ್ ಹೊಂದಿದೆ. ಇನ್ನು ಎಂಜಿನ್ ಸಾಮರ್ಥ್ಯವನ್ನ ನೋಡೋದಾದ್ರೆ 2.0 ಲೀಟರಿನ ಟರ್ಬೋ-ಪೆಟ್ರೋಲ್ ಎಂಜಿನ್ ಇದ್ದು, 189 ಬಿಎಚ್ಪಿ ಪವರ್ ಅಂಡ್ 280 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಇನ್ನು ಈ ಕಂಟ್ರಿಮ್ಯಾನ್ ಸೆವೆನ್ ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಹೊಂದಿದ್ದು, ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಘ್ ಪ್ಯಾಡಲ್ ಶಿಫ್ಟರ್ ಹೊಂದಿದೆ. ಇನ್ನು ನಟ ಫಹಾದ್ ಫಾಸಿಲ್ ಅವರು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಧೂಮಂ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೂ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ.

Leave a Reply

%d bloggers like this: