ಮೊನ್ನೆ 3 ಕೋಟಿಯ ಬೆಂಜ್ ಕಾರು, ಇಂದು 14 ಲಕ್ಷದ ಬೈಕ್ ಖರೀದಿಸಿದ ಸ್ಟಾರ್ ನಟ

ಈ ಸಿನಿಮಾ ಸೆಲೆಬ್ರಿಟಿಗಳು ಒಂದಲ್ಲ ಒಂದು ವಿಚಾರವಾಗಿ ಸದಾ ಭಾರಿ ಸುದ್ದಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಸ್ಟಾರ್ ನಟ ನಟಿಯರು ತಮ್ಮ ಸಿನಿಮಾಗಳ ಮೂಲಕ ಸುದ್ದಿಯಾಗುವುದಲ್ಲದೆ ಕೆಲವರು ತಮ್ಮ ಹೇಳಿಕೆಯಿಂದ, ಇನ್ನೂ ಕೆಲವರು ತಮ್ಮ ಜೀವನ ಶೈಲಿಯಿಂದ ಸುದ್ದಿಯಾಗುತ್ತಾರೆ. ಇತರೆ ಭಾಷೆಯ ಸ್ಟಾರ್ಸ್ ಗಳಿಗಿಂತ ಹೆಚ್ಚಾಗಿ ಈ ಬಾಲಿವುಡ್ ಮಂದಿ ಕೆಲವರು ಐಷಾರಾಮಿ ಕಾರ್ ಮತ್ತು ಬೈಕ್ ಗಳ ಬಗ್ಗೆ ಹೆಚ್ಚು ಕ್ರೇಜ಼್ ಹೊಂದಿರುತ್ತಾರೆ. ಹಾಗಾಗಿ ಅವರು ಭಾರತದ ಮಾರುಕಟ್ಟೆಗೆ ಬರುವ ಯಾವುದೇ ಹೊಸ ಕಾರು ಮತ್ತು ಬೈಕ್ ಗಳನ್ನ ಖರೀದಿ ಮಾಡಲು ಬಹಳ ಕಾತುರರಾಗಿರುತ್ತಾರೆ. ಅದರಂತೆ ಇತ್ತೀಚೆಗೆ ನಟ ಯಶ್ ಅವರನ್ನ ಬಾಲಿವುಡ್ ನಂಬರ್ ಒನ್ ನಟ ಎಂದು ಹೇಳಿ ಸುದ್ದಿಯಾಗಿದ್ದ ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಅವರು ಇದೀಗ ಹೊಸದಾಗಿ ಡುಕಾಟಿ ಸ್ಕ್ರ್ಯಾಂಬರ್ ಡೆಸರ್ಟ್ ಸ್ಲೆಡ್ ಬೈಕ್ ಅನ್ನ ಖರೀದಿ ಮಾಡಿದ್ದಾರೆ.

ಇದರ ಬೆಲೆ ಬರೋಬ್ಬರಿ 14 ಲಕ್ಷ ಎಂದು ತಿಳಿದು ಬಂದಿದೆ. ಶಾಹಿದ್ ಕಪೂರ್ ಅವರು ಖರೀದಿ ಮಾಡಿರೋ ಈ ಬಿಳಿ ಬಣ್ಣದ ಡುಕಾಟಿ ಸ್ಕ್ರ್ಯಾಂಬರ್ ಡೆಸರ್ಟ್ ಸ್ಲೆಡ್ ಬೈಕ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ. ಈ ಬೈಕ್ ಮಾರುಕಟ್ಟೆಗೆ ಎರಡು ವರ್ಷಗಳ ಹಿಂದೆ ಅಂದರೆ 2020ರಲ್ಲಿ ಮಾರುಕಟ್ಟೆಗೆ ಪರಿಚಯವಾಗಿತ್ತು. ಈ ಬೈಕ್ ಅನ್ನ 1980 ಎಂಡ್ಯೂರೊ ಬೈಕ್ ಗಳಿಗೆ ಗೌರವ ಸಲ್ಲಿಸೋದಕ್ಕೆ ಡಿಸೈನ್ ಮಾಡಲಾಗಿರೋದಂತೆ. ಈ ಬೈಕ್ ನ ವಿಶೇಷತೆಗಳನ್ನ ನೋಡೋದಾದ್ರೆ ಸಸ್ಪೆಕ್ಷನ್ ಅಡ್ಜಸ್ಟಬಲ್ ಹೊಂದಿದ್ದು, 200 ಎಂಎಂ ಸಮಗ್ರ ಟ್ರ್ಯಾವೆಲ್ ನೀಡಲಿದೆಯಂತೆ. 803 ಸಿಸಿ, ಎಲ್ ಟ್ವಿನ್ ಸಿಲಿಂಡರ್ ಅಂಡ್ ಏರ್ ಕೂಲ್ಡ್ ಎಂಜಿನ್ ಅನ್ನ ಹೊಂದಿದೆ.

75 ಬಿಹೆಚ್ಪಿ ಪವರ್ ಅಂಡ್ 68 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಈ ಡುಕಾಟಿ ಸ್ಕ್ರ್ಯಾಂಬರ್ 1100 ಬೈಕ್ 15ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನ ಹೊಂದಿದೆ. ಈಗಾಗಲೇ ಶಾಹಿದ್ ಕಪೂರ್ ಅವರ ಬಳಿ ಬಿಎಂಡಬ್ಲ್ಯೂ ಆರ್ 1250 ಜಿಎಸ್, ಅಡ್ವೆಂಚರ್ ಬೈಕ್, ಹಾರ್ಲೇ ಡೇವಿಡ್ಸನ್ ಫ್ಯಾಟ್ ಬಾಯ್, ಯಮಹಾ ಎಂಟಿ ಒನ್ ಅಂತಹ ಒಂದಷ್ಟು ದುಬಾರಿ ಐಷಾರಾಮಿ ಬೈಕ್ ಗಳನ್ನ ಹೊಂದಿದ್ದಾರೆ. ಇದರ ಸಾಲಿಗೆ ಇದೀಗ ಬಿಳಿ ಬಣ್ಣದ ಡುಕಾಟಿ ಸ್ಕ್ರ್ಯಾಂಬರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿ ಮಾಡಿದ್ದಾರೆ. ಈ ಹೊಸ ಬೈಕ್ ನಲ್ಲಿ ರೌಂಡ್ ಹೊಡೆಯುತ್ತಿರೋ ಫೋಟೋಗಳನ್ನ ಶಾಹಿದ್ ಕಪೂರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Leave a Reply

%d bloggers like this: