ಮೊನ್ನೆ 119 ಕೋಟಿ ಬೆಲೆಯ ಮನೆ ಖರೀದಿ, ಇಂದು 3 ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟಿ ದೀಪಿಕಾ ಪಡುಕೋಣೆ ಅವರು

ಬಾಲಿವುಡ್ ಯಶಸ್ವಿ ತಾರಾ ಜೋಡಿಗಳಲ್ಲಿ ಒಂದಾಗಿರೋ ಡಿಂಪಲ್ ರಾಣಿ ನಟಿ ದೀಪಿಕಾ ಪಡುಕೋಣೆ ನಟ ರಣ್ವೀರ್ ಸಿಂಗ್ ದಂಪತಿಗಳು ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಐಷಾರಾಮಿ ಜೀವನದ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಹೌದು ನಟಿ ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿ. ಸದ್ಯಕ್ಕೆ ನಟ ಶಾರುಖ್ ಖಾನ್ ಅವರ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಇದರ ನಡುವೆ ದೀಪಿಕಾ ಅತ್ಯಂತ ದುಬಾರಿ ಬೆಲೆಯ ಕಾರೊಂದನ್ನ ಖರೀದಿ ಮಾಡುವ ಮುಖಾಂತರ ಸುದ್ದಿಯಾಗಿದ್ದಾರೆ. ಈ ಕಾರು ಭಾರತದಲ್ಲಿ ಭಾರಿ ಮೌಲ್ಯ ವೊಂದಿರುವ ಮರ್ಸಿಡೀಜ಼್ ಬೆಂಝ಼್ ಕಾರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕಳೆದ ಎರಡ್ಮೂರ್ ತಿಂಗಳ ಹಿಂದೆ ಅಂದ್ರೆ ಜೂನ್ ನಲ್ಲಿ ರಣ್ವೀರ್ ಸಿಂಗ್ ಅವರು ಕೂಡ ತಮ್ಮ ಜನ್ಮದಿನದ ಪ್ರಯುಕ್ತ ಒಂದು ದುಬಾರಿ ಬೆಲೆಯ ಕಾರನ್ನ ಖರೀದಿ ಮಾಡಿದ್ದರು. ಇದೀಗ ನಟಿ ದೀಪಿಕಾ ಪಡುಕೋಣೆ ಬರೋಬ್ಬರಿ 3 ಕೋಟಿ ಬೆಲೆಯ ಮರ್ಸಿಡೀಸ್ ಮೇಬ್ಯಾಕ್ ಜಿಎಲ್ಎಸ್ 600 4ಮ್ಯಾಟಿಕ್ ಎಸ್.ಯು.ವಿ ಕಾರನ್ನ ಖರೀದಿಸಿದ್ದಾರೆ. ಇದು ನೀಲಿ ಬಣ್ಣದ ಕಾರಾಗಿದೆ. ಮೊನ್ನೆ ತಾನೇ ಸೆಪ್ಟೆಂಬರ್ 2ರಂದು ಆರ್.ಟಿ.ಓ ನಲ್ಲಿ ದೀಪಿಕಾ ಪ್ರಕಾಶ್ ಎಂಬ ಹೆಸರಿನಲ್ಲಿ ಕಾರ್ ರಿಜಿಸ್ಟ್ರೇಶನ್ ಆಗಿದೆ. ಈಗಾಗಲೇ ದೀಪಿಕಾ ಮತ್ತು ರಣ್ ವೀರ್ ಸಿಂಗ್ ದಂಪತಿಗಳು ದುಬಾರಿ ಐಷಾರಾಮಿ ಬೆಲೆಯ ಕಾರುಗಳನ್ನ ಹೊಂದಿದ್ದಾರೆ. ಈಗ ಹೊಸದಾಗಿ ನೀಲಿ ಬಣ್ಣದ ಮರ್ಸಿಡೀಸ್ ಮೇಬ್ಯಾಕ್ ಎಸ್ಯುವಿ ಕಾರು ದೀಪಿಕಾ ಪಡುಕೋಣಿ ಅವರ ಕಾರ್ ಲಿಸ್ಟ್ ಗೆ ಸೆರ್ಪಡೆಯಾಗಿದೆ‌. ಈ ಕಾರಿನ ಫೀಚರ್ ಬಗ್ಗೆ ತಿಳಿಯೋದಾದ್ರೆ ಇದು ಜಿ.ಎಲ್.ಎಸ್ 600 4 ಲೀಟರಿನ ವಿ8 ಎಂಜಿನ್ ನೊಂದಿಗೆ 48ವಿ ಹೈ ಬ್ರಿಡ್ ಸಿಸ್ಟಮ್ ಒಳಗೊಂಡಿದೆ.

ಈ ಎಂಜಿನ್ 557 ಪಿಎಸ್ ಅಂಡ್ 730 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡಲಿದ್ದು, 9ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಕೆಯಾಗಿದೆ. ಇದರ ಜೊತೆಗೆ ಅಡಿಶನ್ ಫೀಚರ್ ಗಳಾಗಿ ಲೆದರ್ ಅಪೋಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್ ರೂಫ್, ವೆಂಟಿಲೇಟೆಡ್ ಮಸಾಜ್ ಸೀಟುಗಳನ್ನ ಹೊಂದಿದೆ. ಇನ್ನು ನಟಿ ದೀಪಿಕಾ ಪಡುಕೋಣೆ ಅವರು ಇದೀಗ ಖರೀದಿ ಮಾಡಿರೋ ಮರ್ಸಿಡೀಸ್ ಮೇಬ್ಯಾಕ್ ಜಿಎಲ್ಎಸ್ 600 4ಮೆಟಿಕ್ ಎಸ್ಯುವಿ ಕಾರು ಭಾರತದಲ್ಲಿ ಇರುವ ಅತ್ಯಂತ ದುಬಾರಿ ಐಷಾರಾಮಿ ಮರ್ಸಿಡಿಸ್ ಕಾರು ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಬಾಲಿವುಡ್ ಈ ಡಿಂಪಲ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸಿನಿಮಾಗಳಷ್ಟೇ ಕಾರ್ ಗಳ ಮೇಲೂ ಕೂಡ ಸಖತ್ ಕ್ರೇಜ಼್ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಮುಂಬೈನ ಪ್ರತಿಷ್ಠಿತ ಏರಿಯಾ ಅಲ್ಲಿ ಬರೋಬ್ಬರಿ ನೂರಾ ಹತ್ತೊಂಬತ್ತು ಕೋಟಿ ಬೆಲೆಯ ಬಂಗಲೆಯನ್ನು ದೀಪಿಕಾ ಹಾಗೂ ರಣವೀರ್ ಸಿಂಗ್ ಅವರು ಖರೀದಿಸಿದ್ದರು.

Leave a Reply

%d bloggers like this: