ಮೊಮ್ಮಗನನ್ನು ನೋಡಲು ಬಂದ ಚಿರು ತಾಯಿ.. ಆದರೆ ಆಗಿದ್ದೇನು ಗೊತ್ತಾ.. ನೋಡಿ ಒಮ್ಮೆ

ಕನ್ನಡದ ಯುವ ಸಾಮ್ರಾಟ್ ಖ್ಯಾತಿಯ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿ ಎರಡು ವರ್ಷಗಳಾಗಿವೆ. ಈ ಎರಡು ವರ್ಷದಲ್ಲಿ ಚಿರು ಕುಟುಂಬದಲ್ಲಿ ನೋವು ನಲಿವು ಸುಖ ದುಃಖ ಎಲ್ಲ ಸಂಗತಿಗಳು ಘಟಿಸಿವೆ. ನಟ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದ ಬಳಿಕ ಅವರ ಕುಟುಂಬ ಶೋಕದ ಸಾಗರದಲ್ಲಿ ಮುಳುಗಿತು. ಅದರಲ್ಲೂ ಚಿರು ಅವರನ್ನ ಪ್ರೀತಿಸಿ ಮದುವೆ ಆಗಿದ್ದ ನಟಿ ಮೇಘನಾರಾಜ್ ಅವರ ಪರಿಸ್ಥಿತಿ ಅಂತೂ ಹೇಳತೀರದು. ಚಿರು ಅಗಲಿದಾಗ ಮೇಘನಾರಾಜ್ ಅವರು ತುಂಬು ಗರ್ಭಿಣಿ ಆಗಿದ್ದರು. ಇಂತಹ ಸಂಕಷ್ಟದ ಸಂಧರ್ಭದಲ್ಲಿ ನಟಿ ಮೇಘನಾ ರಾಜ್ ಅವರು ಅನುಭವಿಸಿದ ನೋವು, ಸಂಕಟ ಅಷ್ಟಿಷ್ಟಲ್ಲ. ಚಿರು ಇಹಲೋಕ ತ್ಯಜಿಸಿದ ನಂತರ ಸಂಪೂರ್ಣವಾಗಿ ಮಾನಸಿಕವಾಗಿ ಕುಗ್ಗಿದ ಮೇಘನಾ ರಾಜ್ ಮೌನಕ್ಕೆ ಶರಣಾಗಿ ಕಣ್ಢೀರಾಕುತ್ತಲೇ ಇದ್ದರು. ಮತ್ತೆ ಬಾಡಿದ ಮುಖದಲ್ಲಿ ನಗು ಕಂಡು ಚೇತರಿಕೆ ಕಂಡಿದ್ದು ಮೇಘನಾ ಅವರಿಗೆ ಗಂಡು ಮಗು ಜನಿಸಿದಾಗ.

ಏಕೆಂದರೆ ಆ ಮಗುವಿನ ಮೂಲಕ ಮತ್ತೆ ಚಿರು ಪುನರ್ಜನ್ಮ ತಾಳಿ ಬಂದರು ಎಂಬ ಭಾವ ಅವರದ್ದಾಯಿತು. ಈ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿ, ಈಗಾಗಲೇ ಒಂದು ವರ್ಷದ ಹುಟ್ಟು ಹಬ್ಬವನ್ನ ಬಹಳ ಅದ್ದೂರಿಯಾಗಿ ಮಾಡಿದ್ದಾರೆ. ಈ ಸಂಭ್ರಮದಲ್ಲಿ ಕನ್ನಡದ ಖ್ಯಾತ ನಟ ನಟಿಯರು ಆಗಮಿಸಿ ರಾಯನ್ ರಾಜ್ ಸರ್ಜಾ ನಿಗೆ ಶು‌ಭ ಹಾರೈಸಿದ್ದರು. ಇನ್ನು ರಾಯನ್ ರಾಜ್ ಸರ್ಜಾ ತನ್ನ‌ ತಾಯಿ ಮೇಘನಾ ರಾಜ್ ಅವರ ಬಳಿ ಬೆಳೆಯುತ್ತಿದ್ದಾನೆ. ಇತ್ತೀಚೆಗೆ ತನ್ನ ಮೊಮ್ಮಗನನ್ನ ನೋಡಲು ಚಿರು ತಾಯಿ ಹೋದಾಗ ಲವಲವಿಕೆಯಿಂದ ಅಜ್ಜಮ್ಮನನ್ನ ತೊದಲು ನುಡಿಗಳಿಂದ ಮಾತನಾಡಿಸುತ್ತಾ ಸಂತೋಷ ಪಟ್ಟಿದ್ದಾನೆ ರಾಯನ್ ರಾಜ್ ಸರ್ಜಾ.

ಆದರಂತೆ ಮೊಮ್ಮಗನ್ನನ್ನ ಮುದ್ದಾಡಿ ಅಲಂಗಿಸಿ ಚೂರು ಅವರ ತಾಯಿ ಉತ್ತಮವಾದ ಅಮೂಲ್ಯವಾದ ಸಮಯ ಕಳೆದಿದ್ದಾರೆ. ಇತ್ತ ನಟಿ ಮೇಘಾನಾ ರಾಜ್ ಕೂಡ ಮನೆಗೆ ಬಂದಂತಹ ಅತ್ತೆ ಯನ್ನ ಆದರದಿಂದ ಬರ ಮಾಡಿಕೊಂಡು ಕುಶಲೋಪರಿ ವಿಚಾರಿಸಿಕೊಂಡು ಆತ್ಮೀಯತೆ ಯಿಂದ ಅವರೊಟ್ಟಿಗೆ ಸಮಯ ಕಳೆದಿದ್ದಾರೆ. ಇದೀಗ ಎರಡು ವರ್ಷಗಳ ನಂತರ ಮೇಘನಾ ರಾಜ್ ಅವರು ಜಾಹೀರಾತು, ಸಿನಿಮಾ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

%d bloggers like this: