ಪ್ರಧಾನಿ ಮೋದಿ ಅವರ ಅಧಿಕೃತ ಆಸ್ತಿ ಪ್ರಕಟ, ಚಿನ್ನಾಭರಣ ಮತ್ತು ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ

ಸಾಮಾನ್ಯವಾಗಿ ಕೇಂದ್ರ ಸರ್ಕಾರ ಸೇರಿದಂತೆ ಆಯಾ ಆಯಾ ರಾಜ್ಯದ ಎಲ್ಲಾ ಸಚಿವರು ಕೂಡ ತಮ್ಮ ಆಸ್ತಿ ಅದು ಸಿರಾಸ್ತಿ ಮತ್ತು ಚರಾಸ್ತಿ ಮತ್ತು ಹಣಕಾಸು,ಒಡವೆಗಳ ಎಲ್ಲಾ ದಾಖಲೆಯ ಮಾಹಿತಿಗಳನ್ನ ಸೂಕ್ತ ಸಮಯಕ್ಕೆ ಸಮರ್ಪಕವಾಗಿ ನೀಡಬೇಕಾಗಿರುತ್ತದೆ.ಇದು ಚುನಾವಣಾ ಸಂಧರ್ಭದಲ್ಲಿ ಆಯೋಗಕ್ಕೆ ಸ್ಪಷ್ಟವಾದ ಮಾಹಿತಿಯನ್ನ ಸಲ್ಲಿಸಬೇಕಾಗಿರುತ್ತದೆ. ಜನ ಪ್ರತಿನಿಧಿಗಳಿಗೆ ಇದು ಬಹಳ ಮುಖ್ಯವಾದ ಪ್ರಕ್ರಿಯೆ ಆಗಿರುತ್ತದೆ.ಚುನಾವಣಾ ಪೂರ್ವ ಅಧಿಕಾರ ಪಡೆಯುವ ಮುನ್ನ ಮತ್ತು ಅಧಿಕಾರ ಪಡೆದ ನಂತರ ಜನ ಪ್ರತಿನಿಧಿಗಳ ಆದಾಯ ಮತ್ತು ಅವರ ಆಸ್ತಿಯ ಮೌಲ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದರು ಕೂಡ ಅದು ಅವರು ಅಕ್ರಮ ಭ್ರಷ್ಟಚಾರ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾದರು ಕೂಡ ಆದಾಯ ತೆರಿಗೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅವರ ಮೇಲೆ ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಬಹುದಾಗಿರುತ್ತದೆ.

ಇನ್ನು ಅದರಂತೆ ದೇಶದ ಪ್ರಧಾನಿ ಮಂತ್ರಿಗಳ ಆಸ್ತಿಯ ಬಗ್ಗೆಯು ಕೂಡ ಪ್ರಧಾನಿ ಮಂತ್ರಿಗಳ ಕಾರ್ಯಾಲಯದ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿರುತ್ತದೆ.ಜಾಲತಾಣದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಲೆಕ್ಕಾಚಾರ ತಿಳಿಯುವುದಾದರೆ ಕಳೆದ ವರ್ಷಕ್ಕಿಂತ ಮೋದಿ ಅವರ ಆಸ್ತಿಯಲ್ಲಿ ಏರಿಕೆ ಕಂಡು ಬಂದಿದೆ ಎನ್ನಬಹುದು.ಎರಡು ಕೋಟಿ ಎಂಭತ್ತೈದು ಲಕ್ಷ ರೂ.ಇದ್ದ ಆಸ್ತಿ ಈ ವಾರ್ಷಿಕ ಪಟ್ಟಿಯಲ್ಲಿ ಮೂರು ಕೋಟಿ ಏಳು ಲಕ್ಷ ಅರವತ್ತೆಂಟು ಸಾವಿರದ ಎಂಟು ನೂರ ಎಂ‌ಭತ್ತೈದು ರೂ. ಗಳಾಗಿದೆ.ಕಳೆದ ಮಾರ್ಚ್ ತಿಂಗಳ ಅಂತ್ಯಕ್ಕೆ ಪ್ರಧಾನಿ ಅವರ ಅಕೌಂಟ್ ನಲ್ಲಿ ಒಂದೂವರೆ ಲಕ್ಷ ರೂ.ಉಳಿತಾಯವಿದೆ.

ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ಕೋಟಿ ಎಂಭತ್ತಾರು ಲಕ್ಷ ರೂ.ಸ್ಥಿರ ಠೇವಣಿ ಹೊಂದಿದ್ದಾರೆ.ಮೋದಿ ಅವರು ವೈಯಕ್ತಿಕ ಯಾವುದೇ ಸಾಲ ಮತ್ತು ವಾಹನಗಳನ್ನು ಹೊಂದಿರುವುದಿಲ್ಲ.ಜೊತೆಗೆ ಯಾವುದೇ ಕಂಪನಿಗಳಲ್ಲಿ ಷೇರು,ಮ್ಯೂಚ್ಯುಯಲ್ ಫಂಡ್ ಹೊಂದಿಲ್ಲ.ಇವರ ಬಳಿ ಒಂದೂವರೆ ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನ ಹೊಂದಿದ್ದಾರೆ. ನಿಮಗೂ ಇಷ್ಟ ಆದ್ರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಾಪಡೆ ಲೈಕ್ ಮಾಡಿ.

Leave a Reply

%d bloggers like this: