ಮೊದಲ ರಾತ್ರಿ ದಿನ ಹೆಂಡತಿ ಜೊತೆ ಈ ತಪ್ಪುಗಳು ಮಾಡಲೇ ಬೇಡಿ.. ನೋಡಿ ಒಮ್ಮೆ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಂದು ಅಮೃತ ಘಳಿಗೆ. ಅದು ಗಂಡು ಹೆಣ್ಣಿನ ಒಂದು ಹೊಸ ಬದುಕು. ಮುಂದಿನ ಬದುಕಿಗೆ ಪರಸ್ಪರ ಸಂಗಾತಿಗಳಾಗಿ ಜೀವನ ನಡೆಸುವ ಹಾದಿಯ ಮುನ್ನುಡಿ ಈ ಮದುವೆ. ಮದುವೆ ಆದ ನಂತರದಲ್ಲಿ ನವ ಜೋಡಿಗಳಿಗೆ ಕಾಡುವ ಭಯ ಅಂದ್ರೆ ಅದು ಈ ಸಂತಾನ ಮಾಡುವ ಪ್ರಕ್ರಿಯೆ. ಮೊದಲ ರಾತ್ರಿ ಅಂದಾಕ್ಷಣ ಪ್ರತಿಯೊಬ್ಬರಿಗೂ ಒಂದೊಂದು ವಿಭಿನ್ನ ಬಗೆಯ ಕನಸು ಆಲೋಚನೆಗಳು ಇರುತ್ತವೆ. ಮದುವೆಗೆ ಮುನ್ನ ಇದ್ದಂತಹ ಆ ಆತ್ಮ ವಿಶ್ವಾಸ ಮದುವೆಯಾದ ನಂತರ ಮೊದಲ ರಾತ್ರಿಯಲ್ಲಿ ಗಂಡು ಹೆಣ್ಣು ಇಬ್ಬರಿಗೂ ಕೂಡ ಆತಂಕ ಭಯ ಎಂಬುದು ಇದ್ದೇ ಇರುತ್ತದೆ. ಹೌದು ಮೊದಲ ರಾತ್ರಿಯಂದು ಬಹುತೇಕ ಜೋಡಿಗಳು ಯಾವುದೇ ರೀತಿಯಾಗಿ ದೈಹಿಕವಾಗಿ ಸೇರುವುದಿಲ್ಲ. ಇದಕ್ಕೆ ಕಾರಣ ಇಬ್ಬರಲ್ಲೂ ಇರುವ ಭಯ. ಅಷ್ಟಾಗಿ ಮುಕ್ತವಾಗಿ ಮಾತನಾಡದೇ ಇರುವುದು. ಕೆಲವೇ ತಿಂಗಳುಗಳ ಪರಿಚಯ ಇಬ್ಬರಲ್ಲೂ ಅಷ್ಟಾಗಿ ಆತ್ಮೀಯತೆ ಮೂಡಲು ಸಾಧ್ಯವಾಗಿರುವುದಿಲ್ಲ.

ಹಾಗಾಗಿ ನವ ದಂಪತಿಗಳಲ್ಲಿ ನಾಚಿಕೆ ಈ ಸರಸ ಸಲ್ಲಾಪದ ಬಗ್ಗೆ ಅಳುಕು ಇದ್ದೇ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಜೋಡಿಗಳು ಮೊದಲ ರಾತ್ರಿಯಲ್ಲಿ ಪರಸ್ಪರ ಮುಕ್ತವಾಗಿ ಮಾತನಾಡಿ ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು. ತಮಗೆ ಮೊದಲ ರಾತ್ರಿಯಲ್ಲಿ ದೈಹಿಕವಾಗಿ ಸೇರಲು ಆರಾಮದಾಯಕವಾಗಿ ಇಲ್ಲ ಅನಿಸಿದರೆ ಪರಸ್ಪರ ಗಟ್ಟಯಾಗಿ ಆಲಂಗಿಸಬಹುದಾಗಿರುತ್ತದೆ. ನವ ದಂಪತಿಗಳು ಸಾಮಾನ್ಯವಾಗಿ ಮೊದಲು ಮುತ್ತು ಕೊಟ್ಟು ದೈಹಿಕವಾಗಿ ಮುಂದುವರಿಯುವ ಪ್ರಯತ್ನ ಪಟ್ಟರು ಇಲ್ಲಿ ಹೆಣ್ಣಿಗೆ ಭಯ ಅನ್ನೋದು ಗಂಡಿಗಿಂತ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಒತ್ತಾಯ ಮಾಡಿ ಅವರೊಂದಿಗೆ ದೈಹಿಕ ಸಂಬಂಧ ನಡೆಯಬಾರದು. ಗಂಡಾಗಲಿ, ಹೆಣ್ಣಾಗಲಿ ಯಾರಿಗೇ ಆದ್ರು ಲೈಂಗಿಕ ಆಸಕ್ತಿ ಆ ಸಂಧರ್ಭದಲ್ಲಿ ಮಾಡಿದ್ದರೆ ಮಾತ್ರ ದೈಹಿಕವಾಗಿ ಮುಂದುವರಿಯಬೇಕು. ಒಬ್ಬರಿಗೆ ಇಷ್ಟ ಇದ್ದು ಮತ್ತೊಬ್ಬರಿಗೆ ಇಷ್ಟ ಇಲ್ಲವಾದಲ್ಲಿ ಆಗ ಈ ಲೈಂಗಿಕ ಸುಖ ಪರಸ್ಪರ ಇಬ್ಬರಿಗೆ ದೊರೆಯುವುದಿಲ್ಲ. ಹಾಗಾಗಿ ಸುಖದ ಲೈಂಗಿಕ ಮಿಲನ ಆಗಬೇಕು ಅಂದರೆ ಗಂಡು ಹೆಣ್ಣು ಇಬ್ಬರು ಕೂಡ ಪರಸ್ಪರ ಸಮ್ಮತಿ ಇದ್ದಾಗ ಮಾತ್ರ ಅದು ಸಂತೋಷಕರ ಆಗಿರುತ್ತದೆ.

ಇನ್ನು ಕೆಲವು ಸಮುದಾಯಗಳ ಪ್ರಕಾರ ಮದುವೆಯಾದ ದಿನವೇ ಅಂದರೆ ಮದುವೆ ದಿನದ ರಾತ್ರಿಯೇ ಪ್ರಸ್ಥ ಮಾಡುತ್ತಾರೆ. ಇದು ನವ ದಂಪತಿಗಳಿಬ್ಬರಿಗೂ ಆರಾಮಾದಾಯಕವಾಗಿರುವುದಿಲ್ಲ. ಯಾಕಂದ್ರೆ ಮದುವೆ ದಿನದಂದು ಉಪವಾಸ ಇದ್ದು ದೈಹಿಕವಾಗಿ ಇಬ್ಬರು ಬಳಲಿರುತ್ತಾರೆ. ಆಗ ಯಾವಾಗ ಮಲಗಿಕೊಂಡ್ರೆ ಸಾಕು ಅನ್ನುವಂತಹ ಸ್ಥಿತಿಯಲ್ಲಿ ಇರುತ್ತಾರೆ. ನಿರೀಕ್ಷೆಯಂತೆ ಅಂದು ದಿನ ಪ್ರಸ್ಥ ಆದಾಗ ಆನಂದದ ಅನುಭವ ಇಬ್ಬರಿಗೂ ದೊರೆಯುವುದಿಲ್ಲ. ಕೆಲವು ಸಮುದಾಯಗಳ ಸಂಪ್ರದಾಯದಲ್ಲಿ ಶುಭ ದಿನ ಅಂತ ಘಳಿಗೆ ಅಂತೆಲ್ಲಾ ನೋಡಿ ತದ ನಂತರದಲ್ಲಿ ಗಂಡು ಹೆಣ್ಣನ್ನ ಕೋಣೆಗೆ ಬಿಡುತ್ತಾರೆ. ಒಟ್ಟಾರೆಯಾಗಿ ನವ ದಂಪತಿಗಳಿಗೆ ತಮ್ಮ ಮೊದಲ ರಾತ್ರಿಯ ಬಗ್ಗೆ ಅಳುಕಿದ್ದರೆ ನಿಮಗೆ ಒಬ್ಬರ ಮೇಲೆ ಒಬ್ಬರಿಗೆ ಯಾವಾಗ ಸಂಪೂರ್ಣ ಅರ್ಥ ಆಗುತ್ತದೆ ಆಗ ದೈಹಿಕವಾಗಿ ಮುಂದುವರಿದರೆ ನಿಮಗೆ ಉತ್ತಮವಾಗಿರುತ್ತದೆ. ಆದಷ್ಟು ಅಂದು ಪರಸ್ಪರ ಆಲಂಗನೆ, ಮುಕ್ತ ಮನಸ್ಸಿನಿಂದ ಮಾತುಕತೆಯ ಮಾಡುವ ಮೂಲಕ ಮೊದಲ ರಾತ್ರಿಯಲ್ಲಿ ಪರಸ್ಪರ ಅರಿತುಕೊಂಡರೆ ದಾಂಪತ್ಯ ಜೀವನಕ್ಕೆ ಉತ್ತಮವಾಗಿರುತ್ತದೆ.