ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಅವರು

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಅವರು ಇದೀಗ ಸಂತೋಷದ ಸುದ್ದಿಯೊಂದನ್ನ ನೀಡಿದ್ದಾರೆ. ಹಾಗಂತ ನಟ ಧೃವಸರ್ಜಾ ಅವರು ತಮ್ಮ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡ್ತಿಲ್ಲ. ಅದಕ್ಕೂ ಮೀರಿದ ಅವರ ವೈಯಕ್ತಿಕ ಜೀವನದ ಒಂದು ಸಂತೋಷದ ಸುದ್ದಿಯೊಂದನ್ನ ನೀಡಿದ್ದಾರೆ. ಹೌದು ನಟ ಧೃವಸರ್ಜಾ ಅವರು ಇದೀಗ ತಂದೆ ಆಗುತ್ತಿದ್ದಾರೆ. ಹೌದು ಇತ್ತೀಚೆಗೆ ನಟ ಧೃವ ಸರ್ಜಾ ಅವರು ತಮ್ಮ ಪ್ರೀತಿಯ ಮಡದಿ ಪ್ರೇರಣಾ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. ಅರೇ! ಮೂರು ವರ್ಷಗಳ ನಂತರ ಇದೇನಿದು ಈಗ ಅಂತೀರಾ. ವಿಶೇಷ ಏನಪ್ಪಾ ಅಂದ್ರೆ ಪ್ರೇರಣಾ ಅವರು ಈಗ ಗರ್ಭಿಣಿ ಆಗಿದ್ದಾರೆ. ಹಾಗಾಗಿ ತುಂಬು ಗರ್ಭಿಣಿ ಆಗಿರೋ ತಮ್ಮ ಮಡದಿ ಪ್ರೇರಣಾ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. ತುಂಬು ಗರ್ಭಿಣಿ ಆಗಿರೋ ತಮ್ಮ ಮಡದಿ ಜೊತೆ ತಾವೂ ಕೂಡ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ನಟ ಧೃವಸರ್ಜಾ ಅವರು 2019ರಲ್ಲಿ ತಮ್ಮ ಬಾಲ್ಯದ ಗೆಳತಿಯಾಗಿದ್ದ ಪ್ರೇರಣಾ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಇವರಿಬ್ಬರ ವಿವಾಹ ಮಹೋತ್ಸವಕ್ಕೆ ಚಿತ್ರರಂಗದ ಬಹುತೇಕ ಸ್ಟಾರ್ ನಟ ನಟಿಯರು ನವ ದಂಪತಿಗಳಿಗೆ ಶುಭ ಹಾರೈಸಿದ್ದರು. ಇದೀಗ ಈ ದಂಪತಿಗಳು ತಂದೆ ತಾಯಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಧೃವಸರ್ಜಾ ಅವರು ತಮ್ಮ ತುಂಬು ಗರ್ಭಿಣಿ ಮಡದಿಯ ಫೋಟೋ ಶೂಟ್ ಮಾಡಿಸಿ ಅಂಬಾರಿ ಚಿತ್ರದ ಟೈಟಲ್ ಟ್ರ್ಯಾಕ್ ಆಲ್ಬಂ ಸಾಂಗ್ ಹಾಡಿ ತಮ್ಮಿಬ್ಬರ ಮುದ್ದಾದ ಫೋಟೋ ಎಡಿಟಿಂಗ್ ಮಾಡಿಸಿದ್ದಾರೆ. ಈ ವೀಡಿಯೋವನ್ನ ಧೃವಸರ್ಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ವೀಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಅವರ ಹಿತೈಷಿಗಳು ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಇನ್ನು ಸದ್ಯಕ್ಕೆ ಧೃವ ಸರ್ಜಾ ಅವರು ಎಪಿ ಅರ್ಜುನ್ ಅವರ ಮಾರ್ಟಿನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.