ಮೊದಲ ಮಗುವಿನ ನಿರೀಕ್ಷೆಯಲ್ಲಿ ದಕ್ಷಿಣ ಭಾರತದ ಸುಪ್ರಸಿದ್ಧ ನಟಿ

ದಕ್ಷಿಣ ಭಾರತದ ಸುಪ್ರಸಿದ್ದ ಮಾದಕ ನಟಿ ಎಂದೇ ಹೆಸರಾಗಿದ್ದ ನಟಿ ನಮಿತಾ ತಾಯಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ವಿಚಾರ ತಿಳಿದಾಗ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಜೊತೆಗೆ ನಟಿ ನಮಿತಾ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ನಮಿತಾ ತಮ್ಮ ಎಲ್ಲಾ ಚಟುವಟಿಕೆಗಳನ್ನು ತಮ್ಮ ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇದೀಗ ನಮಿತಾ ಅವರು ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಯಾವ ಫೋಟೋ ಅಂತ ಗೊಂದಲವಾಗಬೇಡಿ. ಇತ್ತೀಚೆಗೆ ಟ್ರೆಂಡ್ ಆಗಿರುವ ಬೇಬಿ ಬಂಪ್ ಫೋಟೋಶೂಟ್ ಅನ್ನ ನಟಿ ನಮಿತಾ ಕೂಡ ಮಾಡಿಸಿದ್ದಾರೆ.

ನಮಿತಾ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ನೀಲಕಂಠ, ಇಂದ್ರ, ಹೂ ಹೀಗೆ ಒಂದಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಮಿತಾ ನಟಿಸಿದ್ದಾರೆ. ನಟಿ ನಮಿತಾ ಅವರು ಕೆಲವು ಚಿತ್ರಗಳಲ್ಲಿ ಬೋಲ್ಡ್ ಪಾತ್ರ ಮಾಡುವ ಮೂಲಕ ಪಡ್ಡೆ ಹುಡುಗರಿಗೆ ನಿದ್ದೆ ಗೆಡಿಸಿದ್ರು. ಕನ್ನಡದಲ್ಲಿ ನಮಿತಾ ನಟಿಸಿದ ಅಂತಿಮ ಸಿನಿಮಾ ಅಂದರೆ ಅದು ಬೆಂಕಿ ಬಿರುಗಾಳಿ ಸಿನಿಮಾ. ಇದಾದ ನಂತರ ನಟಿ ನಮಿತಾ ಅವರು 2011ರಲ್ಲಿ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಬಳಿಕ ವೀರೇಂದ್ರ ಎಂಬುವರೊಟ್ಟಿಗೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.

ಇದೀಗ ತಾಯಿಯಾಗುವ ಖುಷಿಯ ಸಂಧರ್ಭದಲ್ಲಿ ಇರುವ ನಮಿತಾ ಅವರು ಎಲ್ಲರಂತೆ ತಾವು ಕೂಡ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋಶೂಟ್ ನಲ್ಲಿ ಕಪ್ಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸುತ್ತಿದ್ದಾರೆ. ಈ ಪೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಅಂದದ ಗೊಂಬೆಗೆ ಚೆಂದಾದ ಸಿಂಗಾರ ಎಂದು ರವಿಚಂದ್ರನ್ ಅವರ ನೀಲಕಂಠ ಸಿನಿಮಾದ ಹಾಡೊಂದರ ಸಾಹಿತ್ಯವನ್ನು ಕಮೆಂಟ್ ಗಳಲ್ಲಿ ಬರೆದು ನಮಿತಾ ಅವರಿಗೆ ಶುಭ ಹಾರೈಸಿದ್ದಾರೆ. ಒಟ್ಟಾರೆಯಾಗಿ ನಟಿ ನಮಿತಾ ಅವರು ಈಗ ತಾಯ್ತತನದ ಅನುಭವವನ್ನು ಅನುಭವಿಸುತ್ತಿದ್ದಾರೆ.

Leave a Reply

%d bloggers like this: