ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಖ್ಯಾತ ನಟಿ

ಬಿಪಾಶಾ ಬಸು ಬೇಬಿ ಬಂಪ್ ಪೋಟೋಶೂಟ್ ಇದೀಗ ಬಿಟೌನ್ ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ನಮ್ಮ ಭಾರತೀಯ ಸಂಸ್ಕೃತಿಗೆ ಹೊಸದೊಂದು ಸಂಪ್ರದಾಯ ಸೇರ್ಪಡೆಗೊಂಡಿದೆ. ಅದುವೇ ಈ ಬೇಬಿ ಬಂಪ್ ಷೋಟೋಶೂಟ್. ಈ ಸಿನಿಮಾ ಸೆಲೆಬ್ರಿಟಿಗಳು ಯಾವಾಗ ಹೇಗೆ ಸುದ್ದಿ ಆಗುತ್ತಾರೆ ಅನ್ನೋದನ್ನ ಊಹೆ ಮಾಡುವುದಕ್ಕೆ ಆಗುವುದಿಲ್ಲ. ಈ ವಿಜ್ಞಾನ ತಂತ್ರಜ್ಞಾನದಲ್ಲಿ ಹೊಸ ಹೊಸ ಅವಿಶ್ಕಾರಗಳಾದಂತೆ ನಮ್ಮ ಸಂಸ್ಕೃತಿ ಆಚಾರ ವಿಚಾರದಲ್ಲಿಯೂ ಕೂಡ ಒಂದಷ್ಟು ಬದಲಾವಣೆಗಳಾಗುತ್ತಿವೆ. ಅಂತೆಯೇ ಇದೀಗ ಹೊಸ ಟ್ರೆಂಡ್ ಆಗಿರೋ ಬೇಬಿಬಂಪ್ ಫೋಟೋಶೂಟ್ ಬಾರಿ ಸುದ್ದಿಯಾಗುತ್ತಿರುತ್ತದೆ. ಅದರಲ್ಲಿಯೂ ಕೂಡ ಈ ಸ್ಟಾರ್ ನಟಿಯರು ಗರ್ಭಿಣಿ ಆಗೋದೇ ತಡ ಅವರ ಅನುಯಾಯಿಗಳು ಕುಣಿದು ಕುಪ್ಪಳಿಸಿ ಬಿಡುತ್ತಾರೆ. ಅವರ ಬಗ್ಗೆ ಹೆಚ್ಚೆಚ್ಚು ಮಾಹಿತಿ ತಿಳಿದುಕೊಳ್ಳಲು ಕುತೂಹಲ ಆಗಿರುತ್ತಾರೆ.

ಅದರಂತೆ ಇತ್ತೀಚೆಗೆ ಭಾರಿ ಕುತೂಹಲ ಮೂಡಿಸಿದ್ದು ಅಂದರೆ ಅದು ಬಾಲಿವುಡ್ ಬ್ಯೂಟಿ ಬಿಪಾಶಾ ಬಸು. ಹೌದು ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಭಾರಿ ಗುಲ್ಲೆಬ್ಬಿತ್ತು. ಅದರಂತೆ ಇದೀಗ ನಟಿ ಬಿಪಾಶಾ ಬಸು ತಾವು ಗರ್ಭಿಣಿ ಆಗಿರೋ ವಿಚಾರಕ್ಕೆ ಸಂಬಂಧಿಸಿದಂತೆ ಬೇಬಿಬಂಪ್ ಪೋಟೋ ಶೂಟ್ ಮಾಡಿಸಿ ಅದರ ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಬಿಪಾಶಾ ಬಸು ಅವರ ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟಿ ಬಿಪಾಶಾ ಬಸು ಅವರು 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು.

Leave a Reply

%d bloggers like this: