ಮೊದಲ ದಿನವೇ ಬಿಸಿಯಾದ ಬಿಗ್ ಬಾಸ್ ಮನೆ, ಶುರು ಆಯ್ತು ಸ್ಪರ್ಧಿಗಳ ನಡುವೆ ಮನಸ್ತಾಪ

ಬಿಗ್ ಬಾಸ್ ಒಂಭತ್ತನೇ ಆವೃತ್ತಿ ಅದ್ದೂರಿಯಾಗಿ ಆರಂಭವಾಗಿದೆ. ದೊಡ್ಮನೆಯೊಳಗೆ ಹದಿನೆಂಟು ಮಂದಿ ಸ್ಪರ್ಧಿಗಳಾಗಿ ಪ್ರವೇಶ ಪಡೆದಿದ್ದಾರೆ. ಪರಸ್ಪರ ಒಬ್ಬರೊಬ್ಬರನ್ನ ಪರಿಚಯ ಕೂಡ ಮಾಡಿಕೊಂಡಿದ್ದಾರೆ. ಈ ಹದಿನೆಂಟು ಮಂದಿಯಲ್ಲಿ ನಾಲ್ವರು ಬಿಗ್ ಬಾಸ್ ಓಟಿಟಿಯಿಂದ ಟಾಪರ್ ಆಗಿ ನೇರವಾಗಿ ಬಿಗ್ ಬಾಸ್ ಟಿವಿ ಸೆಷನ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಬಾರಿಯ ಸೀಸನ್ 9ರ ಬಿಗ್ ಬಾಸ್ ನಲ್ಲಿ ಪ್ರವೀಣರ ಜೊತೆ ನವೀನರು ಎಂಬ ಪರಿಕಲ್ಪನೆಯಡಿಯಲ್ಲಿ ಹಳೆಯ ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಕೆಲವರು ಎಂಟ್ರಿ ಕೊಟ್ಟಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾ ಕಿರುತೆರೆಯಲ್ಲಿ ಗಮನ ಸೆಳೆದಿರೋ ಒಂದಷ್ಟು ಮಂದಿ ಈ ದೊಡ್ಮನೆಗೆ ಎಂಟ್ರಿ ಅಗಿದ್ದಾರೆ. ಒಂದೇ ಮನೆಯಲ್ಲಿ ವಿಭಿನ್ನ ವ್ಯಕ್ತಿತ್ವದ ಹಲವಾರು ವ್ಯಕ್ತಿಗಳು ಸೇರಿದಾಗ ಅಲ್ಲಿ ಮನಸ್ತಾಪ, ಮುನಿಸು, ಅಪಾರ್ಥ ಸರ್ವೇ ಸಾಮಾನ್ಯ.

ಅದರಂತೆ ಬಿಗ್ ಬಾಸ್ ಮನೆಯಲ್ಲಿ ಮೊದಲನೇ ದಿನವೇ ಅಂತದ್ದೇ ಒಂದು ಬಿಸಿ ಕಾವೇರುವ ವಾತಾವರಣ ಸೃಷ್ಟಿ ಆಗಿತ್ತು. ಅದೂ ಕೂಡ ಪ್ರವೀಣರಾಗಿರೋ ಪ್ರಶಾಂತ್ ಸಂಬರ್ಗಿ ಮತ್ತು ನವೀನರಾಗಿರೋ ಆರ್ಯವರ್ಧನ್ ಗುರೂಜಿ ನಡುವೆ ಅನ್ನೋದು ಕುತೂಹಲ. ಯಾಕಂದ್ರೆ ಆರ್ಯವರ್ಧನ್ ಮತ್ತು ಪ್ರಶಾಂತ್ ಸಂಬರ್ಗಿ ಇಬ್ಬರು ಕೂಡ ಹೊರಗಡೆ ತಮ್ಮದೇಯಾದ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡು ಜನಪ್ರಿಯತೆ ಪಡೆದವರು. ಸಂಖ್ಯಾ ಶಾಸ್ತ್ರಜ್ಞರಾಗಿ ಐಪಿಎಲ್ ಮ್ಯಾಚ್ ಸಂಧರ್ಭದಲ್ಲಿ ತಮ್ಮದೇಯಾದ ವಿಶಿಷ್ಟ ರೀತಿಯಲ್ಲಿ ಜ್ಯೋತಿಷ್ಯ ಭವಿಷ್ಯ ಹೇಳೋ ಮೂಲಕ ಆರ್ಯವರ್ಧನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಜೊತೆಗೆ ಟ್ರೋಲ್ ಕೂಡ ಆದರು. ಹೀಗೆ ಬಿಗ್ ಬಾಸ್ ಮನೆಯ ಮೊದಲ ದಿನದಲ್ಲಿ ಆರ್ಯವರ್ಧನ್ ಪ್ರಶಾಂತ್ ಸಂಬರ್ಗಿ ಅವರಿಗೆ ಆಕಸ್ಮಿಕವಾಗಿ ಸಂಪಗಿ ಎಂದು ಕರೆದಿದ್ದಾರೆ. ಇದರಿಂದ ಕೋಪಗೊಂಡ ಪ್ರಶಾಂತ್ ಸಂಬರ್ಗಿ ಕೂಡ ನಿನ್ ನಿಜವಾದ ಹೆಸ್ರು ಏನು ಅಂತ ನಾನ್ ಹೇಳ್ಲಾ.

ಸುದೀಪ್ ಅವ್ರ್ ಮುಂದೆ ನಾನ ನಿನ್ ನಿಜವಾದ ಹೆಸ್ರು ಹೇಳ್ತಿನಿ. ನೀನು ವಿಷ್ಣು ವರ್ಧನ್ ಅವರ ಹೆಸರಿನ ರೀತಿ ಆರ್ಯವರ್ಧನ್ ಅಂತ ಬದಲಾಯಿಸಿಕೊಂಡಿದ್ಯ. ಸರ್ಕಾರದ ಯಾವುದೇ ದಾಖಲೆಯಲ್ಲಿ ನಿನ್ನ ಹೆಸ್ರು ಆರ್ಯ ವರ್ಧನ್ ಅಂತ ಇಲ್ಲ ಅಂತ ಅಂದಾಗ ಸ್ವತಃ ಆರ್ಯವರ್ಧನ್ ಅವರೇ ಹೌದು ನನ್ನ ನಿಜವಾದ ಹೆಸರು ಸುಬ್ರಮಣ್ಯ ಅಂತ ಹೇಳಿದ್ದಾರೆ. ಇದು ಕಿರುತೆರೆ ವೀಕ್ಷಕರಿಗೆ ಅಚ್ಚರಿಯ ವಿಷಯವಾಗಿದೆ ಅಂದರೆ ತಪ್ಪೇನಿಲ್ಲ. ಯಾಕಂದ್ರೆ ಆರ್ಯವರ್ಧನ್ ಗುರೂಜಿ ಅವರ ನಿಜವಾದ ಹೆಸ್ರು ಯಾರಿಗೂ ಕೂಡ ಗೊತ್ತೇ ಇರ್ಲಿಲ್ಲ. ಹೀಗೆ ಆರ್ಯವರ್ಧನ್ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲನೇ ದಿನವೇ ಭಾರಿ ಮಾತಿನ ಚಕಮಕಿ ನಡೆದಿದೆ. ಇದೀಗ ದೊಡ್ಮನೆಯಲ್ಲಿ ಮೊದಲ ಜೋಡಿ ಟಾಸ್ಕ್ ಆರಂಭವಾಗಿದ್ದು, ಮೊದಲ ವಾರದಲ್ಲಿ ಯಾವ ಜೋಡಿ ಸ್ಪರ್ಧಿ ಹೊರ ಹೋಗಲಿದೆ ಎಂದು ಕಾದು ನೋಡಬೇಕಾಗಿದೆ. ಇದೆ ಸಮಯದಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ದರ್ಶ್ ಚಂದ್ರಪ್ಪ ಅವರ ನಡುವೆಯೂ ಮಾತಿನ ಚಕಮಕಿ ಜೋರಾಗಿತ್ತು.

Leave a Reply

%d bloggers like this: