ಮೊದಲ ದಿನ ವಿಕ್ರಾಂತ್ ರೋಣ ಯಾವ ರಾಜ್ಯದಲ್ಲಿ ಎಷ್ಟು ಗಳಿಕೆ ಮಾಡಿದೆ ಸಂಪೂರ್ಣ ಮಾಹಿತಿ

ಸ್ಯಾಂಡಲ್ ವುಡ್ ಬಾದ್-ಶಾ ಕಿಚ್ಚ ಸುದೀಪ್ ನಟನೆಯ ಕನ್ನಡದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದ ವಿಕ್ರಾಂತ್ ರೋಣ ಸಿನಿಮಾ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಭಾರತೀಯ ಸಿನಿಮಾರಂಗದಲ್ಲಿ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಕಿಚ್ಚನ ಲುಕ್ ಅಂಡ್ ರಾರಾ ರಕ್ಕಮ್ಮ ಸಾಂಗ್ ಅಂತೂ ಎಲ್ಲಾ ಕಡೆ ಧೂಳೆಬ್ಬಿಸಿತ್ತು. ಕರ್ನಾಟಕ ರಾಜ್ಯದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ರಾಜದಾನಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 1000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ರಾರಾಜಿಸುತ್ತಿದೆ. ಇದೀಗ ಎಲ್ಲರ ಕುತೂಹಲ ಮತ್ತು ಬಹುದೊಡ್ಡ ಪ್ರಶ್ನೆಯಾಗಿ ಕಾಡ್ತಿರೋದು ಅಂದ್ರೆ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಅನ್ನೋದು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದ ವಿಕ್ರಾಂತ್ ರೋಣ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡ ಕಿಚ್ಚನ ಅಭಿಮಾನಿಗಳಿಗೆ ಸುದೀಪ್ ಅವರ ನಟನೆ, ಡ್ಯಾನ್ಸ್ ಹಬ್ಬದೂಟ ಅಂತಾನೇ ಹೇಳ್ಬೋದು.

ಮೊದಲ ದಿನದಲ್ಲೇ ವಿಕ್ರಾಂಚ್ ರೋಣ ಸಿನಿಮಾ ಬರೋಬ್ಬರಿ 18ಕೋಟಿ ಎಂದು ಹೇಳಲಾಗುತ್ತಿದೆ. ಇದು ಕರ್ನಾಟಕದಲ್ಲಿ ಮಾತ್ರ. ವರ್ಲ್ಡ್ ವೈಡ್ ರಿಲೀಸ್ ಆಗಿರುವ ವಿಕ್ರಾಂತ್ ರೋಣ ಸಿನಿಮಾ ಒಟ್ಟಾರೆಯಾಗಿ ಇಪ್ಪತ್ತೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಅದರಲ್ಲಿ ರಾಜ್ಯವಾರು ವಿಂಗಡಣೆ ಮಾಡುವುದಾದರೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸರಿ ಸುಮಾರು ಎರಡು ಕೋಟಿ ಅಷ್ಟು ಕಲೆಕ್ಷನ್ ಆಗಿದೆ. ತೆಲುಗಿನಲ್ಲಿ ಕಿಚ್ಚ ಸುದೀಪ್ ಅವರಿಗೆ ತಕ್ಕ ಮಟ್ಟಿಗೆ ಅಭಿಮಾನಿ ಬಳಗವಿದೆ. ಫ್ಯಾಂಟಸಿ ಥ್ರಿಲ್ಲರ್ ಸಿನಿಮಾಗಳನ್ನ ಇಷ್ಟಪಡುವ ತೆಲುಗು ಸಿನಿ ಪ್ರೇಕ್ಷಕರು ವಿಕ್ರಾಂತ್ ರೋಣ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದರಂತೆ ವಿಕ್ರಾಂತ್ ರೋಣ ಸಿನಿಮಾ ಕೂಡ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ.

ಇನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಸೇರಿ ಒಂದು ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನುಳಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ತಕ್ಕ ಮಟ್ಟಿಗೆ ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನದಲ್ಲೇ ಬರೋಬ್ಬರಿ ಇಪ್ಪತ್ತೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ವಾರಾಂತ್ಯದ ವೇಳೆಗೆ ಹಾಕಿದ ಸಂಪೂರ್ಣ ಬಂಡವಾಳವನ್ನು ಹಿಂತೆಗೆದುಕೊಳ್ಳಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ತಂತ್ರಜ್ಞಾನ ಕೆಲಸಗಳಿಗೆ ಮತ್ತು ಭರ್ಜರಿ ಸೆಟ್ ಹಾಕಿ ಹೊಸ ಫ್ಯಾಂಟಸಿ ಲೋಕವನ್ನೇ ಕಟ್ಟಿಕೊಟ್ಟಿರುವುದರಲ್ಲಿ ವಿಕ್ರಾಂತ್ ರೋಣ ಚಿತ್ರದ ತಾಂತ್ರಿಕ ವರ್ಗ ಶಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದೆ. ಜೊತೆಗೆ ಅಜನೀಶ್ ಲೋಕನಾಥ್ ಅವರ ರಾಗ ಸಂಯೋಜನೆ ಸಿನಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಬಿಜಿಎಮ್ ಗೆ ಥಿಯೇಟರ್ ನಲ್ಲಿ ಭಾರಿ ಚಪ್ಪಾಳೆ ಕೇಳಿ ಬರುತ್ತಿದೆ.

Leave a Reply

%d bloggers like this: