ಮೊದಲ ಬಾರಿಗೆ ಟಿವಿ ಅಲ್ಲಿ ಬರುತ್ತಿದೆ ಕನ್ನಡದ ಬಹುದೊಡ್ಡ ಕೆಜಿಎಫ್ ಚಾಪ್ಟರ್2 ಚಿತ್ರ

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿದ ಕೆಜಿಎಫ್ ಚಾಪ್ಟರ್2 ಸಿನಿಮಾ ಇದೀಗ ಕಿರುತೆರೆಯಲ್ಲಿ ಬರುತ್ತಿದೆ. ಕನ್ನಡದ ಗೋಲ್ಡನ್ ಸಿನಿಮಾ ಅಂತಾನೇ ಕರೆಸಿಕೊಳ್ಳುವ ಕೆಜಿಎಫ್ ಚಿತ್ರದ ಮುಂದುವರಿದ ಸರಣಿಯಾಗಿ ಮೂಡಿಬಂದ ಕೆಜಿಎಫ್2 ಸಿನಿಮಾ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡಿತ್ತು. ಇಡೀ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಈ ಕೆಜಿಎಫ್2 ಸಿನಿಮಾ ಮಾಡಿದ ದಾಖಲೆ ಒಂದೆರಡಲ್ಲ. ಹತ್ತು ಹಲವು ವಿಶೇಷತೆಗಳ ಮೂಲಕ ಕೆಜಿಎಫ್ ಚಾಪ್ಟರ್2 ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನ ಸೃಷ್ಟಿಸಿದೆ. ಬಿಡುಗಡೆಯಾದ ಎರಡು ಮೂರು ವಾರಗಳಲ್ಲೇ ಬರೋಬ್ಬರಿ ಸಾವಿರ ಕೋಟಿ ಗಡಿ ದಾಟಿ ಇಂದು ಕನ್ನಡ ಸಿನಿಮಾದ ಗತ್ತು ಏನೇಂಬುದನ್ನ ಕೆಜಿಎಫ್2 ಸಿನಿಮಾ ತೋರಿಸಿಕೊಟ್ಟಿದೆ.

ಇಂತಹ ಮಾಸ್ ಮಹಾ ದೃಶ್ಯಕಾವ್ಯ ಕೆಜಿಎಫ್ ಪಾರ್ಟ್ ಒನ್ ಅನ್ನ ಕನ್ನಡಿಗರು ಥಿಯೇಟರ್ ಜೊತೆಗೆ ಕಿರುತೆರೆಯಲ್ಲಿಯೂ ಕೂಡ ಕಣ್ತುಂಬಿಕೊಂಡಿದ್ದರು. ಅದರ ಜೊತೆಗೆ ಇದೀಗ ಕೆಜಿಎಫ್ ಚಾಪ್ಟರ್2 ಸಿನಿಮಾವನ್ನು ಕೂಡ ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಡೂಪರ್ ಹಿಟ್ ಕೆಜಿಎಫ್ ಚಾಪ್ಟರ್2 ಸಿನಿಮಾ ಇದೇ ಆಗಸ್ಟ್ 20ರಂದು ಸಂಜೆ 7ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಜೀ಼ ಕನ್ನಡ ವಾಹಿನಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಿಳಿಸಿದೆ. ಕೆಜಿಎಫ್ ಚಾಪ್ಟರ್2 ಸಿನಿಮಾದ ಪೋಸ್ಟರ್ ಅನ್ನ ಜೀ಼ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅವನು ಬರ್ತಿದ್ದಾನೆ..ಅದೂ ಒನ್ ವೇಯಲ್ಲಿ. ರಾಕಿಂಗ್ ಸ್ಟೈಲಲ್ಲಿ ಎಂದು ಬರೆದುಕೊಂಡಿದೆ.

ಈ ಸಂತಸದ ಸುದ್ದಿ ತಿಳಿದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸಖತ್ ಖುಷಿಪಟ್ಟು ಕೆಜಿಎಫ್2 ಚಿತ್ರವನ್ನು ತಮ್ಮ ಮನೆಯಲ್ಲಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಲಾಂಗ್ ಹೇರ್ ಸ್ಟೈಲ್ ಅನ್ನ ಹಾಗೇ ಉಳಿಸಿಕೊಂಡಿರುವುದರಿಂದ ಕೆಜಿಎಫ್ ಚಾಪ್ಟರ್3 ಚಿತ್ರದ ಚಿತ್ರೀಕರಣ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಶ್ ಆಗಲೀ, ನಿರ್ದೇಶಕ ಪ್ರಶಾಂತ್ ನೀಲ್ ಆಗಲೀ ಯಾವುದೇ ರೀತಿ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಇನ್ನು ಯಶ್ ಅವರು ನರ್ತನ್ ಅವರೊಟ್ಟಿಗೆ ಮತ್ತೊಂದು ಬಿಗ್ ಬಜೆಟ್ ಪ್ರಾಜೆಕ್ಟ್ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಒಟ್ಟಾರೆಯಾಗಿ ಇದೆಲ್ಲದರ ನಡುವೆ ಕೆಜಿಎಫ್ ಚಾಪ್ಟರ್2 ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವುದಕ್ಕೆ ವೀಕ್ಷಕರು ಯಾವಾಗ ಚಿತ್ರ ನೋಡುತ್ತೇವೆ ಎಂದು ಸಖತ್ ಎಕ್ಸೈಟ್ ಆಗಿದ್ದಾರೆ.