ಫೋನ್ ನಲ್ಲಿ ಮಾತನಾಡುವಾಗ ಮೊದಲು ‘ಹಲೋ’ ಹೇಳುವುದೇಕೆ ಗೊತ್ತಾ? 99%ಜನರಿಗೆ ಗೊತ್ತೇ ಇಲ್ಲ, ರೋಚಕ ಕಥೆ

ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಮೊಬೈಲ್ ಸ್ಮಾರ್ಟ್ ಫೋನ್ ಗಳನ್ನ ಒಂದು ಕ್ಷಣ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ.ಅಷ್ಟರ ಮಟ್ಟಿಗೆ ಮನುಷ್ಯರು ಮೊಬೈಲ್ ಫೋನ್ ಗಳನ್ನು ಅವಲಂಬಿಸಿಕೊಂಡಿದ್ದೇವೆ.ಕೇವಲ ಒಂದು ಫೋನು ನಮ್ಮ ಇಡೀ ಬದುಕನ್ನ ನಿರ್ಧರಿಸಿಬಿಡಬಹುದೇನೋ ಎಂಬಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದರೆ ನಮಗೆ ಈ ಫೋನ್ ಗಳಲ್ಲಿನ ಕೆಲವು ವಿಚಾರ ಸಂಗತಿಗಳು ನಮ್ಮನ್ನು ಅಚ್ಚರಿಗೊಳಿಸುವುದರಲ್ಲಿ ಎರಡು ಮಾತಿಲ್ಲ.ಸಾಮಾನ್ಯವಾಗಿ ನಮ್ಮ ಮೊಬೈಲ್ ಕರೆ ಬಂದಾಗ ನಾವು ಮತ್ತು ಪ್ರತಿಯಾಗಿ ಕೇಳಿ ಬರುವ ಪದ ಹಲೋ.ಈ ಹಲೋ ಎಂಬುದನ್ನೇ ಯಾಕೆ ನಾವು ಮಾತನಾಡುವ ಮೊದಲು ಬಳಸುತ್ತೇವೆ.ಹಲೋ ಎಂಬುದನ್ನೇ ಬಳಸಬೇಕು ಎಂಬ ನಿಯಮವನ್ನು ಯಾರು ಮಾಡಿದರು.ಈ ಹಲೋ ಎಂಬ ಪದದ ಹಿನ್ನೆಲೆ ಏನು ಎಂಬುದು ನಿಜಕ್ಕೂ ಕೂಡ ಸ್ವಾರಸ್ಯಕರವಾಗಿದೆ.

ಹೌದು ದೂರವಾಣಿಯನ್ನು ಆವಿಷ್ಕಾರ ಮಾಡಿದಂತಹ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಕೇವಲ ವಿಜ್ಞಾನಿ ಮಾತ್ರ ಅಲ್ಲದೆ ಒಬ್ಬ ಉತ್ತಮ ಉಪನ್ಯಾಸಕ,ಇಂಜಿನಿಯರ್ ಕೂಡ ಆಗಿದ್ದರು. ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರ ತಾಯಿ ಮತ್ತು ಮಡದಿಯಾದ ಮೇಬಲ್ ಹಬ್ಬರ್ಡ್ ಶ್ರವಣ ದೋಷಕ್ಕೆ ಒಳಗಾಗಿದ್ದರು.ಹಾಗಾಗಿ ಇವರಿಗೆ ಕಿವಿ ಕೇಳಿಸುತ್ತಿರಲಿಲ್ಲ.ಇದರ ಪರಿಣಾಮವೇ ಗ್ರಹಾಂಬೆಲ್ ಅವರಿಗೆ ಕೇಳುವಿಕೆ ಮತ್ತು ವಾಕ್ ಶಕ್ತಿಯ ಕುರಿತು ಸಂಶೋಧನೆ ಮಾಡಲು ಪ್ರೇರಣೆ ಆಯಿತು. ಅಲೆಕ್ಸಾಂಡರ್ ಗ್ರಹಾಂಬೆಲ್ ಅವರಿಡೆ ಗೆಳತಿಯೊಬ್ಬರಿದ್ದರು.ಅವರ ಹೆಸರು ಮಾರ್ಗರೇಟ್ ಹಲೋ.

ಗ್ರಹಾಂಬೆಲ್ ಅವರು ತಮ್ಮ ಪ್ರೀತಿಯ ಗೆಳತಿ ಮಾರ್ಗರೆಟ್ ಹಲೋ ಅವರನ್ನು ಪ್ರೀತಿಯಿಂದ ಹಲೋ ಎಂದು ಕರೆಯುತ್ತಿದ್ದರು.ಈ ಸಂದರ್ಭದಲ್ಲಿ ಗ್ರಹಾಂಬೆಲ್ ಅವರು ದೂರವಾಣಿಯ ಅವಿಷ್ಕಾರವನ್ನು ಸಂಪೂರ್ಣಗೊಳಿಸಿದರು.ತಮ್ಮ ನೆಚ್ಚಿನ ಗೆಳತಿಗೆ ಮೊದಲು ಕರೆ ಮಾಡಿದಾಗ ಹಲೋ ಎಂದು ಕರೆಯುತ್ತಿದ್ದ ಕಾರಣ ಈ ಹಲೋ ಎಂಬ ಪದ ಹಾಗೆಯೇ ಮುಂದುವರಿದುಕೊಂಡು ಇಂದಿಗೂ ಕೂಡ ಪರಸ್ಪರ ವ್ಯಕ್ತಿಗಳು ಸಂಭಾಷಣೆ ಆರಂಭ ಮಾಡುವ ಮೊದಲು ಹಲೋ ಎಂಬ ಪದ ಬಳಸುವುದು ರೂಢಿಯಾಗಿದೆ. ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.