ಮಿಸ್ ಯುನಿವರ್ಸ್ ಹರ್ನಾಜ್ ಸಂದು ಕಿರೀಟದ ಬೆಲೆ ಎಷ್ಟು ಗೊತ್ತಾ? ಎಷ್ಟು ವಜ್ರಗಳು ಮತ್ತು ಎಷ್ಟು ಕೆಜಿ ಚಿನ್ನ ಇದೆ ಗೊತ್ತಾ?

ಇತ್ತೀಚೆಗಷ್ಟೇ ಸೌಂದರ್ಯ ಸ್ಪರ್ಧೆಯಲ್ಲಿ ಚಂಡೀಗಢದ ಚೆಲುವೆ ಹರ್ನಾಜ್ ಸಂಧು ಅವರು ವಿಜೇತರಾಗಿ ವಿಶ್ವ ಸುಂದರಿ ಕಿರೀಟ ತೊಟ್ಟಿದ್ದಾರೆ. ಇದೀಗ ಎಲ್ಲೆಡೆ ಇವರದ್ದೇ ಭಾರಿ ಸುದ್ದಿಯಾಗಿದೆ. ಇನ್ನು ಮಿಸ್ ಯೂನಿವರ್ಸ್ ಆಗಿರುವ ಹರ್ನಾಜ್ ಸಂಧು ಅವರು ಸಿನಿಮಾಗಳಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಒಂದು ಕಡೆಯಾದರೆ, ಮತ್ತೊಂದೆಡೆ ಹರ್ನಾಜ್ ಸಂಧು ಪಡೆದ ಆ ವಿಶ್ವ ಸುಂದರಿ ಕಿರೀಟದ ಬೆಲೆ ಎಷ್ಟಿರ ಬಹುದು ಎಂಬ ಪ್ರಶ್ನೆ ಮತ್ತೊಂದಷ್ಟು ಜನಕ್ಕೆ ಕಾಡುತ್ತಿದೆ. ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಭಾರತ ದೇಶಕ್ಕೆ ವಿಶ್ವ ಸುಂದರಿ ಕಿರೀಟ ಸಂದಿದೆ. ಇದು ಭಾರತೀಯರಿಗೆ ನಿಜಕ್ಕೂ ಕೂಡ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇಪ್ಪತ್ತೊಂದು ವರ್ಷದ ಚಂಡೀಗಢದ ಚೆಲುವೆ ಹರ್ನಾಜ್ ಸಂಧು ಅವರು 2021 ರ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದಾರೆ.

ಮಾಡೆಲ್ ಕಮ್ ನಟಿ ಆಗಿರುವ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ ಹಿಂದೆ ಅಂದರೆ ಬರೋಬ್ಬರಿ ಇಪ್ಪತ್ತೊಂದು ವರ್ಷಗಳ ಹಿಂದೆ 1994 ರಲ್ಲಿ ಭಾರತಕ್ಕೆ ಮಿಸ್ ವರ್ಲ್ಡ್ ಮತ್ತು ಮಿಸ್ ಯುನಿವರ್ಸ್ ಎರಡು ಕಿರೀಟಗಳು ಲಭಿಸಿದ್ದವು. ಸುಷ್ಮಿತಾ ಸೇನ್ ಅವರು ಮಿಸ್ ಯುನಿವರ್ಸ್ ಆಗಿ ಭಾರತಕ್ಕೆ ಪ್ರಶಸ್ತಿ ತಂದರೆ, ಇತ್ತ ಕರ್ನಾಟಕದ ಮಂಗಳೂರು ಮೂಲದ ಚೆಲುವೆ ಐಶ್ವರ್ಯ ರೈ ಮಿಸ್ ವರ್ಲ್ಡ್ ಆಗಿ ಜಯಶೀಲರಾಗಿದ್ದರು. ಇದಾದ ನಂತರ ಎರಡು ಸಾವಿರದ ಇಸವಿಯಲ್ಲಿ ಲಾರಾ ದತ್ತ ಅವರು ಈ ಮಿಸ್ ಯುನಿವರ್ಸ್ ಕಿರೀಟ ತೊಟ್ಟರು.

ಇವರ ನಂತರ ಈ ಸೌಂದರ್ಯ ಸ್ಪರ್ಧೆಯಲ್ಲಿ ಬರೋಬ್ಬರಿ ಎರಡು ದಶಕಗಳ ಬಳಿಕ ಇಪ್ಪತ್ತೊಂದು ವರ್ಷದ ಚಂಡೀಗಡದ ಚೆಲುವೆ ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಪಟ್ಟ ಏರಿದ್ದಾರೆ. ಹರ್ನಾದ್ ಸಂಧು ಅವರು ಪಂಜಾಬಿನ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಇವರು ಕೆಲವು ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮಿಸ್ ಯುನಿವರ್ಸ್ ಕಿರೀಟದ ಬೆಲೆ ಎಷ್ಟು ಎಂದು ತಿಳಿದರೆ ನಿಜಕ್ಕೂ ಕೂಡ ಅಚ್ಚರಿಯಾಗುತ್ತದೆ. ಇದೆಲ್ಲದರ ಜೊತೆಗೆ ವಿಶ್ವ ಸುಂದರಿಗೆ ಲಭ್ಯವಾಗುವ ಸೌಲಭ್ಯಗಳು ಕೂಡ ಅದ್ದೂರಿಯಾಗಿ ಇರುತ್ತದೆ.

ಇನ್ನು ಈ ಮಿಸ್ ಯುನಿವರ್ಸ್ ಕಿರೀಟಕ್ಕೆ 19 ಕ್ಯಾರೆಟ್ ಚಿನ್ನ ಬಳಸಿ ತಯಾರಿಸಿ, ಇದಕ್ಕೆ ಬರೋಬ್ಬರಿ 1770 ವಜ್ರಗಳನ್ನು ಅಳವಡಿಸಲಾಗಿರುತ್ತದಂತೆ. ಇದರೊಂದಿಗೆ ಮೂರು ಗೋಲ್ಡನ್ ಕ್ಯಾನರಿಯನ್ನ ಹೊಂದಿಸಲಾಗಿದೆ. ಇವರಿಗೆ ಸರಿ ಸುಮಾರು 1.8 ಕೋಟಿಯಷ್ಟು ಬಹುಮಾನದ ಮೊತ್ತ ದೊರೆಯುತ್ತದೆ. ವಿಶ್ವ ಸುಂದರಿ ಅವರ ಕುಟುಂಬದವರು ನ್ಯೂಯಾರ್ಕ್ ನೀಡುವ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡಬಹು ದಾಗಿರುತ್ತದೆ. ಈಗ ಮಿಸ್ ಯುನಿವರ್ಸ್ ಆಗಿರುವ ಹರ್ನಾಜ್ ಸಂಧು ಅವರಿಗೆ ಮೇಕಪ್ ಅಸಿಸ್ಟೆಂಟ್, ವರ್ಣಾಲಂಕಾರದ ಸಲಕರಣಿಗಳು, ಮೇಕಪ್ ಕಿಟ್, ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಛಾಯಾಗ್ರಾಹಕರನ್ನು ಕೂಡ ನೇಮಿಸಲಾಗಿರುತ್ತದೆ.

ಇನ್ನು ಇಡೀ ಜಗತ್ತಿನ ಅವರಿಚ್ಚೆಯ ಭಾಗಗಳಿಗೆ ಉಚಿತವಾಗಿ ಊಟ ಸಹಿತ ಪ್ರವಾಸ ಮಾಡುವ ಅವಕಾಶವನ್ನು ಕೂಡ ಮಾಡಲಾಗಿರುತ್ತದೆ. ವಿಶ್ವ ಸುಂದರಿ ಪಟ್ಟವೇರಿದ ಈ ಚೆಲುವೆಗೆ ನೀಡಿದ ಕಿರೀಟದ ಬೆಲೆ ಎಷ್ಟಿರಬಹುದು ಎಂದು ಅನೇಕರು ಉಬ್ಬೇರಿಸಿದ್ದರು. ವಿಶ್ವ ಸುಂದರಿ ಹರ್ನಾಜ್ ಸಂಧು ಅವರಿಗೆ ನೀಡಿದ ಈ ಕಿರೀಟದ ಬೆಲೆ ಬರೋಬ್ಬರಿ ಐದು ಮಿಲಿಯನ್ ವೆಚ್ಚವಾಗಿದ್ದು, ಈ ಕಿರೀಟ ಕೋಟಿ ಕೋಟಿ ಬೆಲೆಯ ಮೌಲ್ಯವನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: