ಮೇಘನಾ ನೀವು ಚಿರು ಸರ್ಜಾ ಮನೆಗೆ ಹೋಗಲ್ವಾ ಎಂದಿದ್ದಕ್ಕೆ ಮೇಘನಾ ಕೊಟ್ಟ ಉತ್ತರವೇ ಬೇರೆ .. ಏನು ಗೊತ್ತಾ ? ನೋಡಿ ಒಮ್ಮೆ

ನನಗೆ ಅಲ್ಲಿ ಇರಲು ತುಂಬಾ ಹಿಂಸೆ ಆಗುತ್ತದೆ ಎಂದು ಭಾವುಕರಾಗಿ ನುಡಿದ ನಟಿ ಮೇಘನಾ ಸರ್ಜಾ..! ಕೆಲವು ತಿಂಗಳಿಂದ ಕಿರುತೆರೆಯಲ್ಲಿ ಹೊಸದೊಂದು ರಿಯಾಲಿಟಿ ಶೋ ಆರಂಭವಾಗಿದೆ. ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಗೋಲ್ಡನ್ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ಸಿನಿಮಾ ಸೆಲೆಬ್ರಿಟಿಗಳ ಸ್ನೇಹ ಭಾಂದವ್ಯದ ಬಗ್ಗೆ ಬೆಳಕು ಚೆಲ್ಲುವಂತಹ ಶೋ ಆಗಿದೆ. ಈ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯ ಸಾರಥ್ಯವಿದೆ. ಈಗಾಗಲೇ ಈ ಶೋ ನಲ್ಲಿ ಒಂದಷ್ಟು ಸೆಲೆಬ್ರಿಟಿಗಳ ತಮ್ಮ ಗೆಳೆಯರೊಟ್ಟಿಗೆ ಆಗಮಿಸಿ ತಮ್ಮ ಸ್ನೇಹದ ಕೆಲವು ಸ್ವಾರಸ್ಯಕರ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಈ ಗೋಲ್ಡನ್ ಗ್ಯಾಂಗ್ಸ್ ಶೋ ಈಗಾಗಲೇ ಸಾಕಷ್ಟು ಜನ ಮೆಚ್ಚುಗೆ ಪಡೆದುಕೊಂಡಿದೆ. ಅದದಂತೆ ಈ ಶೋ ಗೇ ಕನ್ನಡದ ಹಿರಿಯ ನಟರಾದ ಸುಂದರ್ ರಾಜ್ ಕುಟುಂಬ ಮತ್ತು ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಕುಟುಂಬ ಒಟ್ಟಿಗೆ ಸೇರಿದೆ.

ನಟ ಸುಂದರ್ ರಾಜ್ ಮತ್ತು ಟಿ.ಎಸ್.ನಾಗಭರಣ ಅವರದ್ದು ದಶಕಗಳ ಗೆಳೆತನ. ಒಬ್ಬರು ನಟರಾಗಿ, ಮತ್ತೊಬ್ಬರು ನಿರ್ದೇಶಕರಾಗಿ ಬಣ್ಣದ ಲೋಕದಲ್ಲಿ ನಾಲ್ಕು ದಶಕಗಳ ಕಾಲ ಒಟ್ಟಿಗೆ ಪಯಣ ಸಾಗಿಸುತ್ತಾ ಬಂದಿದ್ದಾರೆ‌. ಬಣ್ಣದ ಜಗತ್ತಿನ ಜೊತೆಗೆ ಇವರಿಬ್ಬರ ಗೆಳೆತನದ ಬಾಂಧವ್ಯ ಕೂಡ ಅಷ್ಟೇ ಗಟ್ಟಿಯಾಗಿದ್ದು, ಇವರ ಮಕ್ಕಳು ಕೂಡ ಅಷ್ಟೇ ಸೌಹಾರ್ದತೆಯಿಂದ ಆಪ್ತ ಸ್ನೇಹಿತರಾಗಿ ಬೆಳೆದಿದ್ದಾರೆ. ಅಂತೆಯೇ ಟಿ.ಎಸ್.ನಾಗಭರಣ ಅವರ ಪುತ್ರ ಪನ್ನಾಗಭರಣ, ಚಿರಂಜೀವಿ ಸರ್ಜಾ, ಪ್ರಜ್ವಲ್ ದೇವರಾಜ್ ಅವರು ಪ್ರಾಣ ಸ್ನೇಹಿತರಾಗಿದ್ದಾರೆ. ನಟ ದಿ. ಚಿರಂಜೀವಿ ಸರ್ಜಾ ಅವರು ಸುಂದರ್ ರಾಜ್ ಅವರ ಪುತ್ರಿ ನಟಿ ಮೇಘನಾ ಅವರನ್ನ ಪ್ರೀತಿಸಿ ಮದುವೆ ಆಗುತ್ತಾರೆ. ಆದರೆ ದುರಾದೃಷ್ಟವಶಾತ್ ಅವರು ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದುತ್ತಾರೆ.

ಈ ಸಂಧರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದ ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದಿಂದ ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾರೆ. ಇದರಿಂದಾಗಿ ಸುಂದರ್ ರಾಜ್ ಅವರ ಕುಟುಂಬ ಮತ್ತು ಸರ್ಜಾ ಅವರ ಕುಟುಂಬ ಪಟ್ಟ ನೋವಷ್ಟೇ ಅವರ ಸ್ನೇಹಿತರಾದ ಪ್ರಜ್ವಲ್., ಪನ್ನಾಗಭರಣ ಅವರು ಕೂಡ ತಮ್ಮ ಪ್ರಾಣ ಸ್ನೇಹಿತನನ್ನ ಕಳೆದುಕೊಂಡು ನೋವನ್ನು ಅನುಭವಿಸುತ್ತಾರೆ. ಸರ್ಜಾ ಮತ್ತು ಸುಂದರ್ ರಾಜ್ ಅವರ ಈ ಸಂಕಷ್ಟದ ಸಮಯದಲ್ಲಿ ಪನ್ನಾಗಭರಣ ಅವರ ಸ್ನೇಹಿತರ ಬಳಗ ಅವರ ಹೆಗಲಿಗೆ ನಿಲ್ಲುತ್ತಾರೆ. ಇದಾದ ಬಳಿಕ ನಟಿ ಮೇಘನಾ ರಾಜ್ ಅವರು ಮಾನಸಿಕವಾಗಿ ಸಂಪೂರ್ಣ ಕುಗ್ಗಿ ತಮ್ಮ ಎಲ್ಲಾ ಚಟುವಟಿಕೆಯಿಂದ ದೂರ ಆಗುತ್ತಾರೆ.

ಮೇಘನಾ ರಾಜ್ ಅವರಿಗೆ ಗಂಡು ಮಗು ಜನನವಾದ ನಂತರ ಆ ಮಗು ಚಿರಂಜೀವಿ ಸರ್ಜಾ ಅವರಾಗಿ ಜನ್ಮ ತಾಳಿದ್ದಾರೆ ಎಂದು ಭಾವಿಸಿ ರಾಯನ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಂಡು ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ ನಟಿ ಮೇಘನಾ ಸರ್ಜಾ. ಪನ್ನಾಗಭರಣ ಅವರ ಮೊಟ್ಟ ಮೊದಲ ನಿರ್ಮಾಣದ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪಿ.ಬಿ.ಸ್ಟೂಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯಡಿಯಲ್ಲಿ ಪನ್ನಾಗಭರಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಗೋಲ್ಡನ್ ಗ್ಯಾಂಗ್ ಶೋ ನಲ್ಲಿ ಚಿರಂಜೀವಿ ಸರ್ಜಾ ಅವರ ಆಪ್ತ ಗೆಳೆಯರಾದ ನಿರ್ದೇಶಕ ಪನ್ನಾಗಭರಣ, ನಟ ಪ್ರಜ್ವಲ್ ದೇವರಾಜ್, ಮೇಘನಾ ರಾಜ್, ಸುಂದರ್ ರಾಜ್, ಟಿ.ಎಸ್.ನಾಗಭರಣ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸೇರಿದಂತೆ ಗೆಳೆಯರೆಲ್ಲಾ ಪಾಲ್ಗೊಂಡು ತಮ್ಮ ಸ್ನೇಹದ ಭಾಂದವ್ಯವನ್ನು ಹಂಚಿಕೊಂಡಿದ್ದಾರೆ.

ಇದೇ ಸಂಧರ್ಭದಲ್ಲಿ ನಟಿ ಮೇಘನಾರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ ನೆನೆದು ಭಾವುಕರಾಗಿ ಕಣ್ಣೀರಾಕಿದ್ದಾರೆ. ಆದರೆ ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರು ನಿಧನರಾದ ನಂತರ ಅವರ ಮನೆಯಲ್ಲಿ ಇರಲು ಸಾದ್ಯವಾಗುತ್ತಿಲ್ಲವಂತೆ. ಅಲ್ಲಿದ್ದರೆ ಚಿರು ಅವರ ಜೊತೆ ಕಳೆದ ದಿನಗಳು ಪದೇ ಪದೇ ನೆನಪಾಗುತ್ತವಂತೆ. ಆಗಾಗ ತಮ್ಮ ಪುತ್ರ ರಾಯನ್ ಸರ್ಜಾ ಕರೆದುಕೊಂಡು ತಮ್ಮ ಮಾವನ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾರಂತೆ. ಸದ್ಯಕ್ಕೆ ನಟಿ ಮೇಘನಾ ರಾಜ್ ಅವರು ತಮ್ಮ ತಂದೆ ಸುಂದರ್ ರಾಜ್ ಅವರ ಮನೆಯಲ್ಲಿಯೇ ಇದ್ದಾರಂತೆ.

Leave a Reply

%d bloggers like this: