ಮತ್ತೊಂದು ಹೊಸ ಕನ್ನಡ ಚಿತ್ರದಲ್ಲಿ ಮೇಘನಾ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್ ಅವರು

ನಟಿ ಮೇಘನಾ ರಾಜ್ ಅವರು ಚಿರು ಅವರು ಅಕಾಲಿಕ ನಿಧನದ ನಂತರ ಸಂಪೂರ್ಣವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಚಿರಂಜೀವಿ ಸರ್ಜಾ ಅವರ ಅವರ ಕುಟುಂಬ ಶೋಕದ ಸಾಗರದಲ್ಲಿ ಮುಳುಗಿತು. ಅದರಲ್ಲೂ ಚಿರು ಅವರನ್ನ ಪ್ರೀತಿಸಿ ಮದುವೆ ಆಗಿದ್ದ ನಟಿ ಮೇಘನಾರಾಜ್ ಗರ್ಭಿಣಿ ಆಗಿದ್ದ ಸಂಭ್ರಮ ಪಡಬೇಕಾದ ದಿನಗಳಲ್ಲೇ ಚಿರು ಅಗಲಿಕೆ ಅವರನ್ನ ತುಂಬಾ ಕಾಡಿತು. ಈ ಒಂದು ಶಾಕ್ ನಿಂದ ಮೇಘನಾ ಹೇಗೆ ಹೊರ ಬರುತ್ತಾರೋ ಅನ್ನೋಷ್ಟರ ಮಟ್ಟಿಗೆ ಇದ್ದರು. ಆದರೆ ಅವರ ಕುಟುಂಬ ಮತ್ತು ಮೇಘನಾ ರಾಜ್ ಅವರ ಬೆನ್ನೆಲುಬಾಗಿ ನಿಂತವರು ಚಿರು ಆತ್ಮೀಯ ಸ್ನೇಹಿತರಾದ ಪನ್ನಾಗಭರಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಇನ್ನೊಂದಷ್ಟು ಮಂದಿ. ಗರ್ಭಿಣಿ ಆಗಿದ್ದ ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ರು.

ಬಳಿಕ ಎಲ್ಲವೂ ಮೇಘನಾ ರಾಜ್ ಅವರ ಬದುಕಿನಲ್ಲಿ ಎಲ್ಲವೂ ಮೊದಲಿನಂತೆ ಆಗುವ ಹೊತ್ತಿಗೆ ಮತ್ತೇ ಕ್ಯಾಮೆರಾ ಮುಂದೆ ಮೇಘನಾ ರಾಜ್ ಬರಲು ಮುಂದಾದ್ರು. ಹಾಗಾಗಿ ಅವರು ಎರಡು ವರ್ಷಗಳ ನಂತರ ಮೇಘನಾ ರಾಜ್ ಅವರು ಜಾಹೀರಾತು, ಸಿನಿಮಾ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕೂಡ ಕಾಣಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ತಮ್ಮ ದೈನಂದಿನ ಅಪ್ ಡೇಟ್ಸ್ ಜೊತೆಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಅಪ್ ಡೇಟ್ಸ್ ನೀಡುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ನಟಿ ಮೇಘನಾರಾಜ್ ಅವರು ಪನ್ನಾಗಭರಣ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ‌. ಈ ಚಿತ್ರದ ಬಗ್ಗೆ ನಿರ್ದೇಶಕ ಯಾವುದೇ ರೀತಿ ಅಪ್ ಡೇಟ್ಸ್ ನೀಡಿರಲಿಲ್ಲ.

ಆದರೆ ಇದೀಗ ಮೇಘನಾ ರಾಜ್ ಅವರ ನಟನೆಯ ಈ ಹೊಸ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ವೊಂದು ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ಪನ್ನಾಗಭರಣ ನಿರ್ದೇಶನದಲ್ಲಿ ಮೇಘನಾ ರಾಜ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಮೂಲಗಳ ಪ್ರಕಾರ ಪ್ರಜ್ವಲ್ ದೇವರಾಜ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಚಿರು ಆಪ್ತ ಬಳಗ ನಟಿ ಮೇಘನಾ ರಾಜ್ ಅವರ ಬೆನ್ನೆಲುಬಾಗಿ ನಿಂತಿದ್ದಾರೆ ಎಂದೇಳಬಹುದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆಯಂತೆ. ಆದರೆ ಈ ಚಿತ್ರಕ್ಕೆ ಇನ್ನೂ ಕೂಡ ಶೀರ್ಷಿಕೆ ಇಟ್ಟಿಲ್ಲ. ಮುಂದಿನ ದಿನಗಳಲ್ಲಿ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

Leave a Reply

%d bloggers like this: