ಮತ್ತೊಂದು ಐಷಾರಾಮಿ ಮನೆ ಖರೀದಿಸಿದ ಅಮಿತಾಭ್ ಬಚ್ಚನ್ ಅವರು, ಬೆಲೆ ಎಷ್ಟು

ಹೂಡಿಕೆಗಾಗಿ ಮತ್ತೊಂದು ದುಬಾರಿ ಮನೆ ಖರೀದಿ ಮಾಡಿದ್ರಾ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್. ಸಾಮಾನ್ಯವಾಗಿ ಈ ಬಾಲಿವುಡ್ ಸ್ಟಾರ್ ನಟ ನಟಿಯರು ತಮ್ಮ ಸಿನಿ‌ಮಾಗಳ ವಿಚಾರವಾಗಿ ಎಷ್ಟು ಸುದ್ದಿ ಆಗುತ್ತಾರೋ ಅಷ್ಟೇ ತಮ್ಮ ವೈಯಕ್ತಿಕ ಜೀವನ, ತಾವು ಖರೀದಿ ಮಾಡೋ ಕಾರು, ಪ್ರಾಪರ್ಟಿಗಳ ವಿಚಾರವಾಗಿಯೂ ಕೂಡ ಭಾರಿ ಸುದ್ದಿ ಆಗುತ್ತಾರೆ. ಅದರಂತೆ ಇದೀಗ ಬಿಟೌನ್ ನಲ್ಲಿ ಸುದ್ದಿ ಆಗಿರೋದು. ಬಾಲಿವುಡ್ ಸುಪ್ರಸಿದ್ದ ದಿಗ್ಗಜ ನಟ ಅಮಿತಾಬ್ ಬಚ್ಚನ್. ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರೋ ನಟ ಅಮಿತಾಬ್ ಬಚ್ಚನ್ ಅವರನ್ನ ಲಕ್ಷಾಂತರ ಮಂದಿ ಫಾಲೋ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನ ಲಕ್ಷಾಂತರ ಮಂದಿ ಫಾಲೋ ಮಾಡ್ತಾರೆ.

ಹಾಗಾಗಿ ಅವರ ಬಗ್ಗೆ ಏನೇ ಲೇಟೆಸ್ಟ್ ಸುದ್ದಿ ಇದ್ದರು ಕೂಡ ಕ್ಷಣಾರ್ಧದಲ್ಲಿ ತಿಳಿದೋಗುತ್ತೆ. ಹೌದು ಹಾಗಾಗಿಯೇ ಅಮಿತಾಬ್ ಬಚ್ಚನ್ ಅವರು ಈಗ ಕೋಟಿ ಬೆಲೆಯ ಮನೆಯನ್ನ ಖರೀದಿ ಮಾಡಿರೋ ವಿಚಾರ ಹೊರ ಬಿದ್ದಿದೆ. ಅಮಿತಾಬ್ ಬಚ್ಚನ್ ಅವರು ಮುಂಬೈನ ಫೇಮಸ್ ಏರಿಯಾದ ಪಾರ್ಥೆನಾನ್ ಕಟ್ಟಡದಲ್ಲಿ 31ನೇ ಮಹಡಿಯಲ್ಲಿ ನಾಲ್ಕು ಕೋಣೆಯನ್ನೊಂದಿರೋ ಐಷಾರಾಮಿ ಮನೆಯೊಂದನ್ನ ಖರೀದಿ ಮಾಡಿದ್ದಾರೆ. ಇದರ ಮೌಲ್ಯ ಬರೋಬ್ಬರಿ 15 ಕೋಟಿ ಬೆಲೆ ಎಂದು ತಿಳಿದಿದೆ. ಆದರೆ ಸ್ಪಷ್ಟ ನಿಖರ ಮೌಲ್ಯ ಹೊರ ಬಿದ್ದಿಲ್ಲ. ಅಂದ ಹಾಗೆ ಈ ಮನೆಯು 12 ಸಾವಿರ ಚದರಡಿ ವಿಸ್ತೀರ್ಣವನ್ನೊಂದಿದೆಯಂತೆ. ಆದರೆ ಅಮಿತಾಬ್ ಬಚ್ಚನ್ ಈ ಮನೆಯನ್ನ ಖರೀದಿ ಮಾಡಿರೋದು ವಾಸ ಮಾಡೋಕ್ಕಲ್ಲ. ಇದು ಕೇವಲ ಹೂಡಿಕೆ ಮಾಡಿರೋದಂತೆ.

ಅಂದರೆ ಬಿಗ್ ಬಿ ಖರೀದಿ ಮಾಡಿರೋ ಈ ಮನೆಯನ್ನ ಯಾವಾಗ ಬೇಕಾದರು ಮಾರುಕಟ್ಟೆ ಬೆಲೆ ಅರಿತು ಮಾರಾಟ ಮಾಡ್ಬೋದಂತೆ. ಸದ್ಯಕ್ಕೆ ಅವರು ಜಲ್ಸಾದಲ್ಲಿ ಕುಟುಂಬದೊಟ್ಟಿಗೆ ವಾಸ ಮಾಡುತ್ತಿದ್ದಾರೆ. ಬಿಗ್ ಬಿ ಅವರಿಗೆ ಈಗಾಗಲೇ ಮುಂಬೈನ ಪ್ರತಿಷ್ಟಿತ ಏರಿಯಾಗಳೆಲ್ಲಾ ನಾಲ್ಕಾರು ಮನೆಗಳಿವೆ. ತಾವಿರುವ ಮನೆಯ ಬಳಿ ಪ್ರತೀಕ್ಷಾ ಅನ್ನೋ ಬಂಗಲೆ ಕೂಡಾ ಇದೆ. ಅದರ ಜೊತೆಗೆ ಬ್ಯಾಂಕ್ ವೊಂದಕ್ಕೆ ಲೀಸ್ ಗೂ ಕೂಡ ಕೊಟ್ಟಿದ್ದಾರೆ. ಅದಲ್ಲದೆ ಇನ್ನ ಬಿಗ್ ಬಿ ಅಮಿತಾಬ್ ಬಚ್ಚನ್ 70ರ ನಂತರವೂ ಕೂಡ ಸಿನಿಮಾರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಈಗ ಕೌನ್ ಬನೇಗಾ ಕರೋಡ್ ಪತಿ 14ನೇ ಆವೃತ್ತಿಯನ್ನ ನಿರೂಪಣೆ ಮಾಡುತ್ತಿದ್ದಾರೆ. ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ.

Leave a Reply

%d bloggers like this: