ಮತ್ತೊಮ್ಮೆ ಗೆಲುವಿನ ನಗೆ ಬೀರಿದ ನಟಿ ರಶ್ಮಿಕಾ ಮಂದಣ್ಣ ಅವರು, ಅವರ ಹೊಸ ಚಿತ್ರ ಗಳಿಸಿದ್ದೆಷ್ಟು ಗೊತ್ತೇ

ಸ್ಟಾರ್ ನಟರಿಗೆ ಲಕ್ಕಿ ಹೀರೋಯಿನ್ ಆದ್ರಾ ರಶ್ಮಿಕಾ ಮಂದಣ್ಣ. ಈ ಒಂದು ವಿಚಾರ ಇದೀಗ ಸೌತ್ ಸಿನಿಮಾ ರಂಗದಲ್ಲಿ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದರೆ ನಟಿ ರಶ್ಮಿಕಾ ಮಂದಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೀತಾ ರಾಮಂ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಹೌದು ಮಲೆಯಾಳಂ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರು ನಟಿಸಿರುವ ಸೀತಾ ರಾಮಂ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ಎಲ್ಲೆಡೆ ಅಪಾರ ಮೆಚ್ಚುಗೆ ಪಡೆದುಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. 1960ರ ದಶಕದ ಕಾಶ್ಮೀರದಲ್ಲಿ ನಡೆಯುವಂತಹ ಪ್ರೇಮಕಥಾವನ್ನ ಈ ಚಿತ್ರದಲ್ಲಿ ಎಣೆಯಲಾಗಿದೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಆಫೀಸರ್ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಕಾಣಿಸಿಕೊಂಡರೆ, ಕಥಾ ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ.

ಇವರುಗಳ ಜೊತೆಗೆ ಸುಮಂತ್ವನಟಿಸಿದ್ದು, ನಟಿ ರಶ್ಮಿಕಾ ಮಂದಣ್ಣ ಮುಸ್ಲಿಂ ಸಮುದಾಯದ ಆಪ್ರೀನ್ ಎಂಬ ಹೆಣ್ಣು ಮಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸೀತಾ ರಾಮಂ ಸಿನಿಮಾದಲ್ಲಿನ ರಶ್ಮಿಕಾ ಅಭಿನಯಕ್ಕೆ ಸಿನಿ ಪ್ರೇಕ್ಷಕರು ಮನ ಸೋತಿದ್ದಾರೆ. ಈ ರಾಮಂ ಸಿನಿಮಾ ಪ್ರೇಮಕಥಾ ಹಂದರ ವೊಂದಿದ್ದು, ಸಿನಿ ಪ್ರೇಕ್ಷಕರು ಮುಗಿ ಬಿದ್ದು ಈ ಚಿತ್ರ ನೋಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡುತ್ತಿದೆ. ಈ ಬಗ್ಗೆ ಸಂತಸವಾಗಿರುವ ನಿರ್ಮಾಪಕರು ಟ್ವಿಟರ್ ನಲ್ಲಿ ವೀಡಿಯೋವೊಂದು ಮಾಡಿ ನಮ್ಮ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿ ಥಿಯೇಟರ್ ಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

ಹನು ರಾಘವಪುಡಿ ಅವರು ಸೀತಾರಾಮಂ ಸಿನಿಮಾವನ್ನು ಅಚ್ಚು ಕಟ್ಟಾಗಿ ಉತ್ತಮವಾಗಿ ತೆರೆ ಮೇಲೆ ತಂದು ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಸೀತಾರಾಮಂ ಸಿನಿಮಾ ಯುಎಸ್ ನಲ್ಲಿ ಮಿಲಿಯನ್ ಡಾಲರ್ ಕ್ಲಬ್ ಸೇರಿದ ದುಲ್ಖರ್ ಸಲ್ಮಾನ್ ಅವರ ಮೂರನೇ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಇನ್ನು ಈ ಚಿತ್ರಕ್ಕೆ ತೋರಿದ ಪ್ರೀತಿ, ಗೌರವಾದರಗಳನ್ನ ಕಂಡು ದುಲ್ಖರ್ ಸಲ್ಮಾನ್ ಭಾವುಕರಾಗಿ ತೆಲುಗು ಪ್ರೇಕ್ಷಕರಿಗೆ ಭಾವುಕ ನುಡಿಗಳನ್ನ ಬರೆದು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಸೀತಾ ರಾಮಂ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್ ಅವರೊಟ್ಟಿಗೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡ ರಶ್ಮಿಕಾ ಮಂದಣ್ಣ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ರಶ್ಮಿಕಾ ಮಂದಣ್ಣ ನಟಿಸಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿವೆ. ಹಾಗಾಗಿ ಸೌತ್ ಸಿನಿರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಲಕ್ಕಿ ಹೀರೋಯಿನ್ ಎಂಬ ಮಾತುಗಳು ಚರ್ಚೆ ಆಗುತ್ತಿದೆ.

Leave a Reply

%d bloggers like this: