ಮತ್ತೊಮ್ಮೆ ಗೆದ್ದು ಬೀಗಿದ ನಟಿ ರಶ್ಮಿಕಾ ಮಂದಣ್ಣ ಅವರು

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿರುವ ಕಾಲ ಇದು. ಒಂದೆರಡು ಸಿನಿಮಾಗಳನ್ನ ಹೊರತು ಪಡಿಸಿದರೆ ರಶ್ಮಿಕಾ ಮಂದಣ್ಣ ನಟಿಸಿದ ಉಳಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅದೇ ರೀತಿ ಇದೀಗ ಆಗಸ್ಟ್5 ಅಂದರೆ ನಿನ್ನೆ ಶುಕ್ರವಾರ ತೆರೆ ಕಂಡ ತೆಲುಗಿನ ಸೀತಾ ರಾಮಂ ಸಿನಿಮಾ ಕೂಡ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸೀತಾ ರಾಮಂ ಸಿನಿಮಾ ಒಂದು ಪ್ರೇಮಕಾವ್ಯ. ಈ ಸಿನಿಮಾದಲ್ಲಿ ನಾಯಕ ನಟರಾಗಿ ಮಾಲಿವುಡ್ ಸ್ಟಾರ್ ನಟ ದುಲ್ಖರ್ ಸಲ್ಮಾನ್ ನಟಿಸಿದ್ದಾರೆ. ದುಲ್ಖರ್ ಸಲ್ಮಾನ್ ಅವರು ಈ ಸಿನಿಮಾದಲ್ಲಿ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ನಾಯಕಿ ನಟಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ಈ ವರ್ಷದಲ್ಲಿ ತೆರೆಕಂಡ ಒಂದೊಳ್ಳೆ ಪ್ರೇಮಕಥೆ ಆಧಾರಿತ ಸಿನಿಮಾ ಎಂಬ ಕೀರ್ತಿಗೆ ಈ ಸೀತಾ ರಾಮಂ ಸಿನಿಮಾ ಪಾತ್ರವಾಗಲಿದೆ. ಈ ಸೀತಾ ರಾಮಂ ಸಿನಿಮಾ ಎರಡು ಕಾಲ ಘಟ್ಟದಲ್ಲಿ ನಡೆಯುವುದರಿಂದ ನಟ ದುಲ್ಖರ್ ಸಲ್ಮಾನ್ ಅವರನ್ನ ಎರಡು ವಿಭಿನ್ನ ಶೇಡ್ ನಲ್ಲಿ ನೋಡಬಹುದಾಗಿದೆ. ಮೊದಲ ದಿನದಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿರುವ ಸೀತಾ ರಾಮಂ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ಎಲ್ಲರೂ ಫಿಧಾ ಆಗಿದ್ದು, ರಶ್ಮಿಕಾ ಮಂದಣ್ಣ ಅವರ ನಟನೆ ನೋಡಲೆಂದೇ ಈ ಚಿತ್ರವನ್ನು ಎರಡು ಬಾರಿ ನೋಡಬಹುದು ಎಂದು ಒಂದಷ್ಟು ಸಿನಿ ಪ್ರೇಕ್ಷಕರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಸೀತಾ ರಾಮಂ ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ ನಿರ್ಮಾಣ ಸಂಸ್ಥೆಯಡಿಯಲ್ಲಿ ಅಶ್ವಿನಿ ದತ್ ಅವರು ಬಂಡವಾಳ ಹೂಡಿಕೆ ಮಾಡಿದೆ. ಇನ್ನು ತಾರಾಗಣದಲ್ಲಿ ದುಲ್ಖರ್ ಸಲ್ಮಾನ್, ರಶ್ಮಿಕಾ ಮಂದಣ್ಣ, ಮೃಣಾಲ ಠಾಕೂರ್, ಸುಮಂತ್ ಇದ್ದಾರೆ. ಪಿಎಸ್ ವಿನೋದ್ ಮತ್ತು ಶ್ರೇಯಸ್ ಕೃಷ್ಣ ಛಾಯಾಗ್ರಹಣ ಕಾರ್ಯ ನಿರ್ವಹಿಸಿದರೆ, ವಿಶಾಲ್ ಚಂದ್ರಶೇಖರ್ ರಾಗ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆಯಾಗಿ ಸೀತಾ ರಾಮಂ ಸಿನಿಮಾ ಮೊದಲ ದಿನದಲ್ಲೇ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿರುವುದರಿಂದ ಚಿತ್ರತಂಡ ಸಖತ್ ಖುಷಿಯಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಅವರಿಗೆ ಈ ಸಿನಿಮಾದ ಗೆಲುವು ಮತ್ತಷ್ಟು ಉತ್ಸಾಹ ಮತ್ತು ಅವಕಾಶಗಳ ಸುರಿಮಳೆಯಾಗಲು ನೆರವಾಗಿದೆ.

Leave a Reply

%d bloggers like this: