ಪ್ರಭಾಸ್ , NTR ಆಯಿತು ಈಗ ಮತ್ತೊಬ್ಬ ತೆಲುಗಿನ ಖ್ಯಾತ ನಟನ ಜೊತೆ ಪ್ರಶಾಂತ್ ನೀಲ್ ಸಿನೆಮಾ ಫಿಕ್ಸ್! ಚಿತ್ರದ ಟೈಟಲ್ ಕೂಡ ಫಿಕ್ಸ್ ಆಗಿದೆ

ಟಾಲಿವುಡ್ ಖ್ಯಾತ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ..! ಸ್ಯಾಂಡಲ್ ವುಡ್ ಪ್ಯಾನ್ ಇಂಡಿಯಾ ಸ್ಟಾರ್ ಎಂದೇ ಹೆಸರಾಗುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದ ಅಮೋಘ ಯಶಸ್ಸಿನ ನಂತರ ಅದರಲ್ಲಿಯೂ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ರಿಲೀಸ್ ನಂತರ ಬಂದ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪ್ರತಿಭೆಯ ಬಗ್ಗೆ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಾಕಿಂಗ್ ಸ್ಟಾರ ಯಶ್ ಕೇವಲ ಕರ್ನಾಟಕದಲ್ಲಿ ಮಾತ್ರ ರಾಜಾಹುಲಿಯಾಗಿ ಮೆರೆಯುತ್ತಿದ್ದರು. ಯಾವಾಗ ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತೋ ಅಲ್ಲಿಂದ ಯಶ್ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಆ ನರಾಚಿ ಎಂಬ ಅದ್ಭುತ ಕಾಲ್ಪನಿಕ ಸಾಮ್ರಾಜ್ಯ ನಿಜಕ್ಕೂ ಕೂಡ ಸಿನಿ ಪ್ರೇಕ್ಷಕರಿಗೆ ಹೊಸ ಲೋಕವನ್ನೇ ಸೃಷ್ಟಿ ಮಾಡಿತ್ತು. ಇಂತಹ ಪ್ರತಿಭಾವಂತ ನಿರ್ದೇಶಕನ ಜೊತೆ ಕೆಲಸ ಮಾಡಲು ಸೌತ್ ಇಂಡಿಯನ್ ಸಿನಿಮಾದ ದಿಗ್ಗಜ ನಟರು ಕೂಡ ತುದಿಗಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರಿಗೆ ಸಲಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್ ನೀಲ್ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ನಿರ್ದೇಶನದ ಕೆಜಿಎಫ್ ಮುಂದುವರಿದ ಭಾಗವಾಗಿ ಕೆಜಿಎಫ್ ಚಾಪ್ಟರ್ 2.ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಹ ಜೊತೆಯಲ್ಲಿ ಮಾಡಿ ಮುಗಿಸಿದ್ದಾರೆ.

ಇತ್ತೀಚೆಗಷ್ಟೇ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಅಧೀರ ಪಾತ್ರಧಾರಿ ಸಂಜಯ್ ದತ್ ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ. ಅದರ ಒಂದಷ್ಟು ಫೋಟೋಗಳನ್ನು ಕೂಡ ಪ್ರಶಾಂತ್ ನೀಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನು ಕೆಲವು ತಿಂಗಳುಗಳ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದ ದೊಡ್ಮನೆಗೆ ಭೇಟಿ ನೀಡಿದ್ದರು. ತೆಲುಗಿನಲ್ಲಿ ದೊಡ್ಮನೆ ಅಂದರೆ ಅದು ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಎಂದು ಹೇಳಬಹುದು‌. ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ನಟ ರಾಮ್ ಚರಣ್ ತೇಜಾ ಅವರು ವಿಶೇಷ ಔತಣಕೂಟಕ್ಕೆ ಕರೆದಿದ್ದರು.

ಅವರ ಆಹ್ವಾನ ಮೇರೆಗೆ ಹೋಗಿದ್ದ ಪ್ರಶಾಂತ್ ನೀಲ್ ಅವರು ತುಂಬು ಸಂತಸ ಪಟ್ಟಿದ್ದರು. ಖ್ಯಾತ ನಿರ್ಮಾಪಕರಾದ ಡಿವಿವಿ ದಾನಯ್ಯ ಅವರು ಸಹ ಈ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆದ ಕಾರಣ ಟಾಲಿವುಡ್ ಸಿನಿ ಅಂಗಳದಲ್ಲಿ ಹೊಸದೊಂದು ಸುದ್ದಿ ಭಾರಿ ಸೌಂಡ್ ಮಾಡಿತು. ನಿರ್ದೇಶಕ ಪ್ರಶಾಂತ್ ನೀಲ್ ರಾಮ್ ಚರಣ್ ತೇಜಾ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಟಾಕ್ ಜೋರಾಗಿ ಹರಡಿತು. ಇದೀಗ ಈ ಸುದ್ದಿ ನಿಜವಾಗಿದೆ. ಏಕೆಂದರೆ ರಾಮ್ ಚರಣ್ ಮತ್ತು ಪ್ರಶಾಂತ್ ನೀಲ್ ಹೊಸ ಪ್ರಾಜೆಕ್ಟ್ ನ ಟೈಟಲ್ ಕೂಡ ಲಾಂಚ್ ಆಗಿದೆ. ಅದರ ಹೆಸರು ಫ್ರಾಂಚೈಸ್ .

ಸದ್ಯಕ್ಕೆ ನಟ ರಾಮ್ ಚರಣ್ ತೇಜಾ ತಮಿಳಿನ ಪ್ರಸಿದ್ದ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ನಟಿಸಬೇಕಿದೆ. ಇನ್ನು ಈಗಾಗಲೇ ಅಭಿನಯಿಸಿರುವ ರಾಜಮೌಳಿ ನಿರ್ದೇಶನದ ಮಲ್ಟಿ ಸ್ಟಾರರ್ ಆರ್.ಆರ್.ಆರ್. ಪ್ಯಾನ್ ಇಂಡಿಯಾ ಚಿತ್ರದ ಪ್ರಮೋಶನ್ ನಲ್ಲಿ ರಾಮ್ ಚರಣ್ ಇದ್ದಾರೆ. ಇತ್ತ ಪ್ರಶಾಂತ್ ನೀಲ್ ಕೆಜಿಎಫ್ 2 ಮತ್ತು ಸಲಾರ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದ್ದಾರೆ. ಇದೆಲ್ಲಾ ಮುಗಿದ ಬಳಿಕ ಈ ಫ್ರಾಂಚೈಸ್ ಚಿತ್ರ ಸಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

%d bloggers like this: