ಮತ್ತೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ಸರ್ಜಾ ಅವರು

ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದ ಬಳಿಕ ಅವರ ಕುಟುಂಬ ಶೋಕದ ಸಾಗರದಲ್ಲಿ ಮುಳುಗಿತು. ಅದರಲ್ಲೂ ಚಿರು ಅವರನ್ನ ಪ್ರೀತಿಸಿ ಮದುವೆ ಆಗಿದ್ದ ನಟಿ ಮೇಘನಾರಾಜ್ ಅವರು ಸಂಪೂರ್ಣ ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಅದಾದ ನಂತರ ಗರ್ಭಿಣಿ ಆಗಿದ್ದ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ರು. ಈ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿ, ಈಗಾಗಲೇ ಒಂದು ವರ್ಷದ ಹುಟ್ಟು ಹಬ್ಬವನ್ನ ಬಹಳ ಅದ್ದೂರಿಯಾಗಿ ಮಾಡಿದ್ದಾರೆ. ಅತ್ತೆ ಮಾವ ಮತ್ತು ಅಪ್ಪ ಅಮ್ಮನ ಜೊತೆ ಇರುವ ನಟಿ ಮೇಘನಾರಾಜ್ ಅವರು ತಮ್ಮ ಮಗನ ಪೋಷಣೆ ಮಾಡುತ್ತಾ ಮತ್ತೆ ಸಿನಿಮಾರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೌದು ಎರಡು ವರ್ಷಗಳ ನಂತರ ಮೇಘನಾ ರಾಜ್ ಅವರು ಜಾಹೀರಾತು, ಸಿನಿಮಾ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಕಳೆದ ವರ್ಷ ಒಪ್ಪಿಕೊಂಡಿದ್ದ ಸಿನಿಮಾಗಳ ಚಿತ್ರೀಕರಣ ಕೂಡ ಆರಂಭ ಪಡೆದುಕೊಂಡಿವೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ತಮ್ಮ ದೈನಂದಿನ ಅಪ್ ಡೇಟ್ಸ್ ಜೊತೆಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಅಪ್ ಡೇಟ್ಸ್ ನೀಡುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ನಟಿ ಮೇಘನಾರಾಜ್ ಅವರು ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿ ಜುಲೈ7 ಒಂದು ಸಣ್ಣ ಆಲೋಚನೆ ನಿಜವಾಯಿತು. ನಾವು ಈ ಹೊಸ ಪ್ರಾಜೆಕ್ಟ್ ಅನ್ನ ಅಕ್ಟೋಬರ್17, 2021 ರಲ್ಲಿ ಆರಂಭ ಮಾಡಿದೆವು. ಅನೇಕ ಬಾರಿ ಚರ್ಚಿಸಿ ಈ ಚಿತ್ರದ ಕಥೆಯನ್ನು ಪುನರ್ ಪರಿಶೀಲಿಸಿ ಮತ್ತೆ ಕಥೆ ರೆಡಿ ಮಾಡಿ, ಚಿತ್ರಕಥೆ, ಪಾತ್ರಗಳು, ಫೋಟೋಶೂಟ್ ಹೀಗೆ ಪ್ರತಿಯೊಂದನ್ನು ಕೂಡ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದೇವೆ. ಇದೀಗ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದೆ ಎಂದು ಹೊಸ ಚಿತ್ರದ ಫೋಟೋಶೂಟ್ ವೊಂದರ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ನಟಿ ಮೇಘನಾರಾಜ್ ಅವರು ನಟನೆಗೆ ವಾಪಸ್ ಆಗಿರುವುದಕ್ಕೆ ಅವರ ಅಭಿಮಾನಿಗಳು ಸ್ವಾಗತ ಹೇಳುವ ಮೂಲಕ ವಿಶ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

%d bloggers like this: