ಮನುಷ್ಯರು ಮರಣ ಹೊಂದಿದ ನಂತರ ಅವರ ಎರಡೂ ಕಾಲಿನ ಹೆಬ್ಬೆರಳನ್ನು ಏಕೆ ಕಟ್ಟುತ್ತಾರೆ ಗೊತ್ತಾ

ಮನುಷ್ಯರು ಮರಣ ಹೊಂದಿದ ನಂತರ ಅವರ ಎರಡೂ ಕಾಲಿನ ಹೆಬ್ಬೆರಳನ್ನು ಏಕೆ ಕಟ್ಟುತ್ತಾರೆ ಗೊತ್ತಾ.ಈ ವಿಚಾರ ನಿಜಕ್ಕೂ ಕೂಡ ನಮಗೆ ಒಂದಷ್ಟು ಆಶ್ಚರ್ಯವನ್ನುಂಟು ಮಾಡುತ್ತದೆ. ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ ಕೆಲವು ಆಚರಣೆ ಸಂಪ್ರದಾಯಗಳು ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿರುತ್ತದೆ.ನಂಬಿಕೆ,ಮೂಢನಂಬಿಕೆಗಳು ಮನುಷ್ಯನ ಮೇಲೆ ಹಲವಾರು ಪರಿಣಾಮಗಳನ್ನು ಉಂಟು ಮಾಡುತ್ತವೆ.ಇತ್ತೀಚೆಗೆ ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ ಆಚರಣೆಗಳನ್ನು ಕಡೆಗಣಿಸುವುದೇ ಹೆಚ್ಚು.ಆದರೆ ಅದಕ್ಕೆ ಅದರದೇ ಆದಂತಹ ಹಿನ್ನೆಲೆ ಇರುತ್ತದೆ.ಅಂತೆಯೇ ಮನುಷ್ಯರು ಸತ್ತ ನಂತರ ತಕ್ಷಣ ಅವರ ಕಾಲಿನ ಹೆಬ್ಬೆರಳನ್ನು ಕಟ್ಟುತ್ತಾರೆ.ಇದು ಆ ಸತ್ತ ವ್ಯಕ್ತಿಗೆ ಮಾಡುವ ಅಂತಿಮ ಧಾರ್ಮಿಕ ವಿಧಿವಿಧಾನಗಳಲ್ಲಿ ಒಂದಾಗಿರುತ್ತದೆ.ವ್ಯಕ್ತಿ ಸತ್ತಾಗ ಅವನ ಕಿವಿ ಮತ್ತು ಮೂಗಿನ ಹೊಳ್ಳೆಗಳಿಗೆ ಹತ್ತಿ ಇಡುತ್ತಾರೆ.ತಲೆಯನ್ನು ಬಟ್ಟೆಯಿಂದ ಸುತ್ತುತ್ತಾರೆ.

ಅದರಂತೆ ಎರಡು ಕಾಲಿನ ಹೆಬ್ಬೆರಳನ್ನು ದಾರದಿಂದ ಕಟ್ಟುತ್ತಾರೆ.ಇದಕ್ಕೆ ಪೂರ್ವಜರ ಒಂದು ನಂಬಿಕೆ ಅಂದರೆ ಸತ್ತ ವ್ಯಕ್ತಿಯ ಆತ್ಮ ಅವನು ವಾಸಿಸುತ್ತಿದ್ದ ಮನೆಗೆ ಮತ್ತೆ ಪ್ರವೇಶ ಮಾಡಬಾರದು ಎಂಬ ಉದ್ದೇಶದಿಂದ ಹೆಬ್ಬೆರಳನ್ನು ಕಟ್ಟುತ್ತಾರೆ ಎಂಬ ನಂಬಿಕೆಯನ್ನ ಹೊಂದಿದ್ದಾರೆ.ಇದನ್ನ ವೈಜ್ಞಾನಿಕವಾಗಿ ತಿಳಿಯುವುದಾದರೆ ಸತ್ತ ವ್ಯಕ್ತಿಯ ದೇಹದಲ್ಲಿ ರಕ್ತ ಸಂಚಾರ ಸ್ಥಗಿತಗೊಂಡು ದೇಹ ಸಂಪೂರ್ಣ ಬಿಗಿಯಾಗಿ ಬಿಡುತ್ತದೆ.ಆಗ ದೇಹ ಯಾವ ಸ್ದಿತಿಯಲ್ಲಿರುತ್ತದೆಯೋ ಅದೇ ರೀತಿಯಾಗಿಯೇ ಬಿಡಬೇಕಾಗುತ್ತದೆ.ಕಾಲಿನ ಬೆರಳುಗಳನ್ನು ಕಟ್ಟದೇ ಹೋದಲ್ಲಿ ಆ ಎರಡು ಕಾಲುಗಳು ಅಗಲವಾಗಿ ಬಿಟ್ಟರೆ, ಅದನ್ನ ಮತ್ತೆ ಜೋಡಿಸಲು ಕಷ್ಟ ಸಾಧ್ಯವಾಗುತ್ತದೆ.ಆದ ಕಾರಣ ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳಿಗೆ ದಾರವನ್ನು ಕಟ್ಟಲಾಗುತ್ತದೆ.

Leave a Reply

%d bloggers like this: