ಮಂಗಳಮುಖಿ ಕೈಯಿಂದ ಈ ವಸ್ತುವನ್ನು ಪಡೆದರೆ ನಿಮಗೆ ದುಡ್ಡೇ ದುಡ್ಡು

ನೀವು ಎಷ್ಟೇ ದುಡಿಯುತ್ತಿದ್ದರು ನಿಮಗೆ ನೀವು ಸಂಪಾದಿಸಿದ ಹಣ ಉಳಿತಾಯ ಆಗುತ್ತಿಲ್ಲ ವಾದರೆ ನೀವು ಈ ಒಂದು ಸಣ್ಣ ಮಾನವೀಯ ಕಾರ್ಯ ಮಾಡಿ ನಿಮಗೆ ಕಾಡುತ್ತಿರುವ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತದೆ.ಹೌದು ಇಂದು ಬಹುತೇಕ ಜನರಿಗೆ ಕಾಡುತ್ತಿರುವುದು ಸಮಸ್ಯೆ ಅಂದರೆ ಅದು ಆರ್ಥಿಕ ತೊಂದರೆ. ಕೆಲವರು ಎಷ್ಟೇ ಸಂಪಾದನೆ ಮಾಡಿದರು ಕೂಡ ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ.ಕೆಲವರ ಮನೆಯಲ್ಲಿ ಮನೆ ಮಂದಿಯೆಲ್ಲಾ ದುಡಿಯುತ್ತಾರೆ.ಆದರೆ ಅವರಿಗೆ ಆರ್ಥಿಕ ಸಮಸ್ಯೆ ತಪ್ಪಿದ್ದಲ್ಲ.ಅನಗತ್ಯ ಖರ್ಚುಗಳು ಎದುರಾಗುತ್ತಲೇ ಇರುತ್ತವೆ. ದುಡಿದ ಹಣ ನೀರಿನಂತೆ ಪೋಲಾಗುತ್ತಿರುತ್ತದೆ. ಸಂಪಾದನೆಗಿಂತ ಉಳಿತಾಯವೇ ಸಂಪಾದನೆ ಎಂಬ ಮಾತೊಂದಿದೆ. ಆದರೆ ಈ ಮಾತು ಎಲ್ಲರೂ ಕೂಡ ಒಪ್ಪುವುದಿಲ್ಲ.ಏಕೆಂದರೆ ಅವರು ಸಂಪಾದಿಸಿದ ಹಣ ಇವರ ಕೈಯಲ್ಲಿ ನಿಲ್ಲುವುದಿಲ್ಲ.

ಇಂತಹ ಸಮಸ್ಯೆಗೆ ಒಂದು ರೀತಿಯ ಸರಳ ಮಾನವೀಯ ಕಾರ್ಯ ನಿಮಗೆ ಪರಿಹಾರ ನೀಡಬಹುದು.ಹೌದು ಸಾಮಾನ್ಯವಾಗಿ ನೀವು ನೋಡಿರುವಂತೆ ರಸ್ತೆಬದಿಗಳಲ್ಲಿ,ಸಿಗ್ನಲ್ ಗಳಲ್ಲಿ ನಿಮ್ಮ ಬಳಿ ಮಂಗಳ ಮುಖಿಯರು ಹಣ ಕೇಳುತ್ತಾರೆ.ಇದು ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ.ಇನ್ನೂ ಕೆಲವರು ತಮ್ಮ ಬಳಿ ಇದ್ದಷ್ಟು ಕೊಟ್ಟು ಮುಂದೆ ಸಾಗುತ್ತಾರೆ.ಆದರೆ ಕೆಲವರು ಅವರನ್ನ ನೋಡಿ ರೇಗುವುದು ಕೂಡಾ ಉಂಟು.ಆದರೆ ಮಂಗಳಮುಖಿಯರಿಗೆ ಈ ರೀತಿಯಾಗಿ ಅವಮಾನಿಸಬೇಡಿ.ಅವರನ್ನ ತುಚ್ಚವಾಗಿ ಕಾಣಬೇಡಿ.ನಿಮ್ಮಲ್ಲಿ ಹಣ ವಿದ್ದರೆ ನೀಡಿ,ಇಲ್ಲವಾದಲ್ಲಿ ನಮಸ್ಕರಿಸಿ ಮುನ್ನೆಡೆಯಿರಿ.

ಆದಷ್ಟು ಅವರನ್ನ ಗೌರವದಿಂದ ಕಂಡರೆ ಒಳ್ಳೆಯದು.ಮಂಗಳ ಮುಖಿಯರು ಸಾಕ್ಷಾತ್ ಆದಿದಂಪತಿಗಳ ಅಂಶಗಳನ್ನು ಒಳಗೊಂಡಿರುತ್ತಾರೆ.ಇವರಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಸಿಗಬೇಕು.ಆದರೆ ಪ್ರಸ್ತುತ ಸಮಾಜದಲ್ಲಿ ಅವರನ್ನು ಕಂಡರೆ ನಿರ್ಲಕ್ಷ ಮಾಡಿ ಮೂಗು ಮುರಿಯುವವರೇ ಹೆಚ್ಚು.ಕೆಲವು ಅನಿವಾರ್ಯ ಕಾರಣಾಂತರಗಳಿಂದ ಅವರು ಭಿಕ್ಷೆ ಬೇಡಬಹುದು. ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅವರಿಂದ ಒಂದು ರೂ ನಾಣ್ಯಗಳನ್ನು ಹಿಂಪಡೆಯಿರಿ.ಆ ಒಂದು ರುಪಾಯಿಯನ್ನ ನಿಮ್ಮ ಪರ್ಸ್ ನಲ್ಲಿಟ್ಟುಕೊಂಡರೆ ನಿಮ್ಮ ಆರ್ಥಿಕ ಜೀವನ ಉತ್ತಮಗೊಳ್ಳುತ್ತದೆ.

Leave a Reply

%d bloggers like this: