ಮಂಗಳ ಗ್ರಹದಲ್ಲಿ ಸೆರೆ ಸಿಕ್ಕಿತು ಒಂದು ವಿಚಿತ್ರ ಆಕೃತಿ! ಅಸಲಿಗೆ ಅದು ಏನು ಗೊತ್ತಾ

ಮನುಷ್ಯ ಭೂಮಿ ಗ್ರಹವನ್ನು ಹೊರತು ಪಡಿಸಿ ಇನ್ನೊಂದು ಗ್ರಹದಲ್ಲಿ ಜೀವಿಸಬಲ್ಲ ಗ್ರಹ ಅಂದರೆ ಅದು ಮಂಗಳ ಗ್ರಹ. ಈ ಭೂಮಿ ಗ್ರಹಕ್ಕೆ ಸನಿಹ ಇರುವಂತಹ ಮಂಗಳ ಗ್ರಹದಲ್ಲಿ ಮನುಷ್ಯರು ವಾಸ ಮಾಡಲು ಎಲ್ಲಾ ರೀತಿಯ ಯೋಗ್ಯವಾದುದ್ದಾಗಿದೆ ಎಂಬುದು ಇದುವರೆಗೆ ನಡೆದುಬಂದಿರುವ ಸಂಶೋಧನೆಗಳ ವರದಿ. ಅಂತೆಯೇ ನಾಸಾ ಕೂಡ ಅನೇಕ ಬಾರಿ ಈ ಮಂಗಳ ಗ್ರಹದ ಬಗ್ಗೆ ಸಂಶೋಧನೆಗಳನ್ನು ನಡೆಸಿದೆ.ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ನಿರಂತರವಾಗಿ ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೆ ಯಾವುದೇ ರೀತಿಯ ಸಕರಾತ್ಮಕತೆಯ ಉತ್ತರ ಸಿಗುತ್ತಿಲ್ಲ. ಎಪ್ಪತ್ತರ ದಶಕದಲ್ಲಿ ಮಂಗಳ ಗ್ರಹದಲ್ಲಿ ಸೂಕ್ಷ್ಮ ಜೀವಿಗಳು ಜೀವಿಸುತ್ತಿದ್ದವು ಎಂಬುದನ್ನ ತಿಳಿದುಕೊಳ್ಳಲು ವೈಕಿಂಗ್ ಅನ್ವೇಶಕಗಳನ್ನ ಉಡಾವಣೆ ಕೂಡ ಮಾಡಲಾಗಿತ್ತು.

ಆದರೆ ಮಂಗಳ ಗ್ರಹದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದವು ಎಂಬುದಕ್ಕೆ ಯಾವುದೇ ರೀತಿಯ ಪುರಾವೆಗಳು ಲಭ್ಯವಾಗಿಲ್ಲ. ಕೆಲವು ಸಂಶೋಧಕರು ತಿಳಿಸುವ ಪ್ರಕಾರ ಈ ಉಲ್ಕೆಗಳು ಮಂಗಳ ಗ್ರಹದಿಂದ ಬಂದಿದ್ದಾವೆ. ಆದರೆ ಇದಕ್ಕೂ ಕೂಡ ಸಮರ್ಪಕವಾಗಿ ದಾಖಲೆ ಪುರಾವೆಗಳು ಇಲ್ಲ. ಮಂಗಳ ಗ್ರಹದಲ್ಲಿ ದೀಪದಂತಹ ಚಿತ್ರಗಳು ಇದ್ದಾವೆ ಎಂಬುದನ್ನ ಕೆಲವು ಸಂಶೋಧಕರು ತಿಳಿಸಿದ್ದರು. ಜೊತೆಗೆ ಅಲ್ಲಿಯ ಮನುಷ್ಯನ ಆಕೃತಿ ಕಾಣಿಸಿಕೊಂಡಿತ್ತು ಎಂಬ ವಿಚಾರ ಜಗತ್ತಿನಾದ್ಯಂತ ಭಾರಿ ಸುದ್ದಿ ಮಾಡಿತ್ತು.

ಆದರೆ ಇದನ್ನ ಮತ್ತೆ ಪರೀಕ್ಷೆಗೆ ಒಳಪಡಿಸಿ ಸೂಕ್ಷ್ಮವಾಗಿ ಅಧ್ಯಾಯನ ನಡೆಸಿದಾಗ ಅದು ಬಂಡೆಗಳ ಆಕೃತಿ ಎಂದು ತಿಳಿದು ಬಂದಿತು. ಭಾರತ ದೇಶ ಸೇರಿದಂತೆ ಮಂಗಳ ಗ್ರಹದ ಮೇಲೆ ಅಮೇರಿಕಾದ ನಾಸಾ ಸಂಸ್ಥೆ ಹಲವಾರು ಭಾರಿ ಪ್ರಯೋಗ ನಡೆಸಿದೆ. ಆದರೆ ಈ ಪ್ರಯೋಗದಿಂದ ಬಂದಂತಹ ಫಲಿತಾಂಶಗಳನ್ನ ಅಮೆರಿಕಾದ ನಾಸಾ ಯಾರಿಗೂ ಕೂಡ ಸೂಕ್ತವಾದ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.