ಮಳೆಯಿಂದ ಜಲಾವೃತವಾಗಿದ್ದ ಬೆಂಗಳೂರಿನ ಅಪಾರ್ಟ್ಮೆಂಟ್, ಈಗ ಮಾಲಿಕರು ಮನೆಗೆ ಬಂದು ನೋಡಿದಾಗ ಕಾದಿತ್ತು

ಮನೆಗೆ ಮಳೆ ನೀರು ನುಗ್ತು ಅಂತ ಮನೆ ಮಾಲೀಕರು ಮನೆ ಬಿಟ್ಟು ಬೇರೆ ಕಡೆ ಮನೆ ಮಾಡ್ಕೊಂಡು ಹೋಗಿದ್ರು. ಆದ್ರೇ ಇದೇ ಸಂಧರ್ಭವನ್ನು ಸದುಪಯೋಗಿಸಿಕೊಂಡು ಮನೆಗಳ್ಳರು ಖಾಲಿಯಿದ್ದ ಮನೆಯಲ್ಲಿ ತಮ್ಮ ಕಳ್ತನದ ಕರಾಮತ್ತನ್ನ ತೋರಿದ್ದಾರೆ. ಹೌದು ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಧಾರಾಕಾರ ಮಳೆ ಸುರಿದು ನಗರದ ಪ್ರತಿಷ್ಟಿತ ಏರಿಯಾಗಳೆಲ್ಲಾ ಮಳೆ ನೀರಿನಿಂದ ಆವೃತವಾಗಿತ್ತು. ಅದೆಷ್ಟೋ ಅಪಾರ್ಟ್ ಮೆಂಟ್ ಗಳು ಜಲಾವೃತವಾಗಿತ್ತು. ಅದೇ ರೀತಿಯಾಗಿ ಸರ್ಜಾಪುರ ರಸ್ತೆಯಲ್ಲಿರೋ ದೊಡ್ಡಕನ್ನಳ್ಳಿಯ ರೈನ್ ಬೋ ಲೇಜೌಟ್ ಅಪಾರ್ಟ್ ಮೆಂಟ್ ಕೂಡ ನೀರಿನಿಂದ ಮುಳುಗಡೆ ಆಗಿತ್ತು. ಹೀಗಾಗಿ ಮನೆಯ ನಿವಾಸಿಗಳು ಬೇರೆಡೆ ಸ್ಥಳಾಂತರ ಆಗಿದ್ರು. ಇದೇ ಸಂಧರ್ಭ ನೋಡಿಕೊಂಡು ಖದೀಮರು ಮನೆ ದರೋಡೆ ಮಾಡಿದ್ದಾರೆ.

ಮಳೆ ಬಂದು ಮನೆಗೆ ನೀರು ಹರಿದು ಬಂದದ್ದು ಈ ಕಳ್ಳರಿಗೆ ಅದೆಷ್ಟು ಅನುಕೂಲ ಆಗಿತ್ತು ಅಂದರೆ ಒಂದೆಡೆ ಮಳೆ ನೀರು ಇದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದೇ ರೀತಿ ಸಿಸಿ ಟಿವಿ ಕೂಡ ವಿದ್ಯುತ್ ಇಲ್ಲದೆ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಕಳ್ಳರಿಗೆ ಇದು ವರದಾನವಾಗಿ ಬಿಟ್ಟಿದೆ. ಲೇಔಟ್ ನ ಮೂರು ಮನೆಯಲ್ಲಿದ್ದ ಚಿನ್ನಾಭರಣ, ಹಣ, ಬೆಲೆ ಬಾಳೋ ವಸ್ತುಗಳನ್ನ ದೋಚಿ ಪರಾರಿ ಆಗಿದ್ದಾರೆ. ಮನೆ ಕ್ಲೀನ್ ಮಾಡೋಣ ಅಂತ ಮಾಲೀಕರು ಬಂದಾಗ ಈ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮನೆ ಕಳ್ಳತನ ಆಗಿರೋ ಮಾಲೀಕರು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ರಾಜ ಕಾಲುವೆ ಒತ್ತುವರಿ ಆಗಿ ನಿರ್ಮಾಣ ಆಗಿರೋ ರೈನ್ ಬೋ ಡ್ರೈವ್ ಲೇ ಔಟ್ ನ ಹದಿನೈದಕ್ಕೂ ಹೆಚ್ಚು ಮನೆ ಮಾಲೀಕರಿಗೆ ಮನೆ ತೆರವು ಮಾಡುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ರೈನ್ ಬೋ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಪೀಕಲಾಟ ಆರಂಭವಾಗಿದೆ.

Leave a Reply

%d bloggers like this: