ಮಕ್ಕಳ ಜೊತೆಗೆ ದೀಪಾವಳಿ ಹಬ್ಬದ ಫೋಟೋಗಳನ್ನು ಹಂಚಿಕೊಂಡ ಯಶ್ ರಾಧಿಕಾ ದಂಪತಿ

ಮಕ್ಕಳೊಟ್ಟಿಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ರಾಕಿಂಗ್ ಸ್ಟಾರ್ ಯಶ್ ದಂಪತಿ. ರಾಕಿಬಾಯ್ ಸದ್ಯಕ್ಕೆ ಕೆಜಿಎಫ್ ಚಾಪ್ಟರ್2 ಸಿನಿಮಾದ ನಂತರ ಸದ್ಯಕ್ಕೆ ಒಂದಷ್ಟು ಹೊಸ ಪ್ರಾಜೆಕ್ಟ್ ಗಳತ್ತ ಗಮನ ಹರಿಸಿದ್ದಾರೆ. ಕೆಜಿಎಫ್2 ಸಿನಿಮಾ ವರ್ಲ್ಢ್ ವೈಡ್ ಸಖತ್ ಆಗಿ ಸಕ್ಸಸ್ ಕಂಡಿದೆ. ಈ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮತ್ತು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕೆಜಿಎಫ್2 ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಅನ್ನೋದು ವರ್ಲ್ಢ್ ವೈಡ್ ಇರೋ ಅವರ ಅಸಂಖ್ಯಾತ ಅಭಿಮಾನಿಗಳ ಕುತೂಹಲದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.

ಆದರೆ ಯಶ್ ಮಾತ್ರ ಹಾಲಿವುಡ್ ಸ್ಟಾರ್ ತಂತ್ರಜ್ಞರೊಟ್ಟಿಗೆ ಕಾಣಿಸಿಕೊಂಡು ಕುತೂಹಲ ಉಂಟು ಮಾಡಿದ್ದಾರೆ. ಶೂಟ್, ರೇಸಿಂಗ್ ಸೇರಿ ಒಂದಷ್ಟು ಕಲೆಯನ್ನ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾಗಾಗಿ ಈ ಒಂದು ತಯಾರಿ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾವನ್ನ ಕೆ.ವಿ.ಎನ್ ಪ್ರೊಡಕ್ಷನ್ ಅವರೇ ನಿರ್ಮಾಣ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಇದೆಲ್ಲದರ ನಡುವೆ ಅಪ್ಪು ಅವರ ಗಂಧದಗುಡಿ ಚಿತ್ರದ ಪೂರ್ವ ಬಿಡುಗಡೆ ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಹೆಸರಿನಲ್ಲಿ ಪ್ರಕಾಶ್ ರಾಜ್ ಅವರು ಮಾಡಿರುವ ಉಚಿತ ಅಪ್ಪು ಆಂಬುಲೆನ್ಸ್ ಸಾಮಾಜಿಕ ಸೇವೆಗೆ ಸ್ವತಃ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ಅವರು ಕೂಡ ಕೈ ಜೋಡಿಸಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಇನ್ನು ಇಷ್ಟೆಲ್ಲ ಬಿಝಿ ಶೆಡ್ಯುಲ್ ನಡುವೆ ಯಶ್ ತಮ್ಮ ಕುಟುಂಬದವರೊಟ್ಟಿಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಹೌದು ದೀಪಾವಳಿ ಹಬ್ಬದಂದು ತಮ್ಮ ಮಗ ಯಥರ್ವ್, ಮಗಳು ಐರಾ ಮತ್ತು ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಅವರೊಟ್ಟಿಗೆ ಹೂಕಂಡ ಹಚ್ಚಿ ಸಂಭ್ರಮಿಸಿದ್ದಾರೆ. ಕುಟುಂಬ ಸಮೇತ ದೀಪಾವಳಿ ಹಬ್ಬವನ್ನ ಸಂಭ್ರಮಿಸಿರೋ ಫೋಟೋಗಳನ್ನ ಯಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಯಶ್ ಅವರ ಈ ಫ್ಯಾಮಿಲಿ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

Leave a Reply

%d bloggers like this: