ಮಾಜಿ ವಿಶ್ವ ಸುಂದರಿಯ ಆಸ್ತಿ-ಪಾಸ್ತಿ ಪರರ ಪಾಲು

ಮಾಜಿ ವಿಶ್ವ ಸುಂದರಿಯ ಆಸ್ತಿ-ಪಾಸ್ತಿ ಪರರ ಪಾಲು. ಬಾಲಿವುಡ್ ನ ಸುಪ್ರಸಿದ್ದ ನಟಿಯಾದ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿರುವ ತಮ್ಮ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ ಮತ್ತು ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಉನ್ನತ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಆಸ್ತಿ ಮಾರುವ ಅಗತ್ಯವೇನಿತ್ತು ಎಂಬುದು ಅವರ ಅಭಿಮಾನಿಗಳಿಗೆ ಗೊಂದಲವಾಗಿದೆ.ಇದರ ಅಸಲಿಯತ್ತೇ ಬೇರೆಯದ್ದೇ ಆಗಿದೆ. 2000 ರ ಇಸವಿಯ ವಿಶ್ವ ಸುಂದರಿ ಕಿರೀಟ ತೊಟ್ಟ ಪ್ರಿಯಾಂಕಾ ಚೋಪ್ರಾ ಅವರಿಗೆ ನಂತರದಲ್ಲಿ ಬಾಲಿವುಡ್ ನಲ್ಲಿ ಅಪಾರ ಅವಕಾಶಗಳು ದೊರೆತವು. ನಟಿಸಿದ ಒಂದಷ್ಟು ಚಿತ್ರಗಳು ಸೂಪರ್ ಹಿಟ್ ಆಗಿ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.ಈ ದಶಕದಲ್ಲಿ ಚೋಪ್ರಾ ಸ್ಟಾರ್ ನಟರ ಸಂಭಾವನೆಯಷ್ಟೆ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು.ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಅವರ ಅಮೋಘ ನಟನೆಗೆ ಎರಡು ರಾಷ್ಟ್ರ ಪ್ರಶಸ್ತಿ ಮತ್ತು ಐದು ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸಿವೆ.

ದುಬಾರಿ ಸಂಭಾವನೆ ಪಡೆಯುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅಂದಿನ ದಿನಮಾನಗಳಲ್ಲಿ ವಾಣಿಜ್ಯ ನಗರಿ ಮುಂಬೈ,ಗೋವಾ ಸೇರಿದಂತೆ ಒಂದಷ್ಟು ಪ್ರತಿಷ್ಟಿತ ನಗರಗಳಲ್ಲಿ ಪ್ರಾಪರ್ಟಿ ಮಾಡಿದರು. 2018 ರಲ್ಲಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಖ್ಯಾತ ಪಾಪ್ ಸಿಂಗರ್, ಗೀತ ರಚನೆಕಾರ,ನಟ ನಿಕ್ ಜಾನ್ಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಪಿಂಕಿ ತಮ್ಮ ಪತಿ ನಿಕ್ ಜಾನ್ಸ್ ಅವರೊಟ್ಟಿಗೆ ಅಮೆರಿಕಾದಲ್ಲಿ ನೆಲೆಸಬೇಕಾಯಿತು.ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು.ಅಲ್ಲಿಯೂ ಕೂಡ ಜನಪ್ರಿಯತೆ ಪಡೆದಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹಾಲಿವುಡ್ ರಂಗದಲ್ಲಿಯೂ ಭಾರಿ ಬೇಡಿಕೆಯಿದೆ.ಹೀಗಿರುವಾಗ ಇತ್ತೀಚೆಗೆ ಸೋನಾ ಎಂಬ ನೂತನ ರೆಸ್ಟೋರೆಂಟ್ ವೊಂದನ್ನು ಆರಂಭಿಸಿದ್ದಾರೆ. ಅಮೆರಿಕಾದ ಪ್ರತಿಷ್ಟಿತ ಏರಿಯಾದಲ್ಲಿ ಈ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಈ ರೆಸ್ಟೋರೆಂಟ್ ಗೆ ಹಾಲಿವುಡ್ ನ ಖ್ಯಾತ ನಟ-ನಟಿಯರು,ಉದ್ಯಮಿಗಳು ಭೇಟಿ ನೀಡುತ್ತಾರಂತೆ.

ಇಷ್ಟೆಲ್ಲಾ ಐಷಾರಾಮಿ ಜೀವನ ನಡೆಸುತ್ತಿರುವ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿರುವ ತಮ್ಮ ಪ್ರಾಪರ್ಟಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೌದು ಮುಂಬೈ ಮತ್ತು ಗೋವಾದಲ್ಲಿರುವ ಪ್ರತಿಷ್ಟಿತ ಅಪಾರ್ಟ್ ಮೆಂಟ್ ಗಳಲ್ಲಿರುವ ಫ್ಲಾಟ್ ಗಳನ್ನು ಸೇಲ್ ಮಾಡಿದ್ದಾರೆ.ಅಂಥೇರಿ ವೇಸ್ಟ್ ರಾಜ್ ಕ್ಲಾಸಿಕ್ ವರ್ಸೋವಾ ದಲ್ಲಿರುವ ಏಳನೇ ಅಂತಸ್ತಿನಲ್ಲಿರುವ ಮನೆಯನ್ನು ಮೂರು ಕೋಟಿ ಹಾಗೂ ಮತ್ತೊಂದು ಮನೆಯನ್ನು ನಾಲ್ಕು ಕೋಟಿಗೆ ಸೇಲ್ ಮಾಡಿದ್ದಾರೆ.ಆದರೆ ಇದಕ್ಕೆ ಪ್ರಿಯಾಂಕಾ ಚೋಪ್ರಾ ಸ್ಪಷ್ಟವಾದ ಮಾಹಿತಿ ನೀಡಿಲ್ಲ.ಆದರೆ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ ಕಾರಣ ಇವರ ತಾಯಿ ಮಧು ಚೋಪ್ರಾ ಅವರೇ ಭಾರತದಲ್ಲಿರುವ ಪ್ರಾಪರ್ಟಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

%d bloggers like this: