ಮಾಜಿ CM ಸಿದ್ದರಾಮಯ್ಯನವರು ತಮ್ಮ ಪತ್ನಿಯನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಕಾರಣಕ್ಕೆ ಕರೆದುಕೊಂಡು ಹೋಗುವುದಿಲ್ಲ

ಸಾಮಾನ್ಯವಾಗಿ ರಾಜ್ಯದ ರಾಜಕಾರಣಿಗಳ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ.ಜೊತೆಗೆ ಒಂದಷ್ಟು ರಾಜಕೀಯ ಕುಟುಂಬಗಳ ಬಗ್ಗೆ ಪತ್ನಿ,ಮಗ-ಮಗಳ ಬಗ್ಗೆ ಮಾಹಿತಿಯೂ ಕೂಡ ಇರುತ್ತದೆ.ಅದಯಲ್ಲೂ ಕೆಲವು ಶಾಸಕರು,ಮಂತ್ರಿಗಳು ತಾವು ಲೈಮ್ ಲೈಟ್ ಗೆ ಬರುವುದರ ಜೊತೆಗೆ ತಮ್ಮ ಕುಟುಂಬದವರನ್ನು ಕೂಡ ಸಾರ್ವಜನಿಕ ಜೀವನಕ್ಕೆ ಪರಿಚಯ ಮಾಡಿಕೊಟ್ಟಿರುತ್ತಾರೆ.ಆದರೆ ಕೆಲವು ರಾಜಕೀಯ ನಾಯಕರು ತಮ್ಮನ್ನು ಹೊರತುಪಡಿಸಿ ತಮ್ಮ ಕುಟುಂಬದ ಯಾರನ್ನು ಕೂಡ ಪರಿಚಯಿಸುವುದಿಲ್ಲ.ಅಂತಹ ರಾಜಕೀಯ ನಾಯಕರಲ್ಲಿ ಶ್ರೀ ಸಿದ್ದರಾಮಯ್ಯನವರು ಕೂಡ ಒಬ್ಬರಾಗಿದ್ದಾರೆ.ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿ ಐದು ವರ್ಷಗಳ ಜನಪರ ಆಡಳಿತ ನೀಡಿದ ಸಿದ್ದರಾಮಯ್ಯ,ನವರು ಇದುವರೆಗೂ ಕೂಡ ತಮ್ಮ ಧರ್ಮಪತ್ನಿಯನ್ನು ಸಾರ್ವಜನಿಕವಾಗಿ ಪರಿಚಯ ಮಾಡಿಕೊಟ್ಟಿಲ್ಲ.

ಇದು ಅವರ ವೈಯಕ್ತಿಕ ಬದುಕು ಆದರೆ ರಾಜ್ಯದಲ್ಲಿರುವ ಅವರ ಅಸಂಖ್ಯಾತ ಅಭಿಮಾನಿ ಅನುಯಾಯಿಗಳಿಗೆ ಇಂದಿಗೂ ಕೂಡ ಸಿದ್ದರಾಮಯ್ಯ ಅವರ ಧರ್ಮಪತ್ನಿ ಯಾರೆಂದು ತಿಳಿದಿಲ್ಲ.ಅವರ ಮಕ್ಕಳ ಬಗ್ಗೆ ಇತ್ತೀಚೆಗೆ ತಿಳಿದುಕೊಂಡಿದ್ದರು ಸಹ ಅವರ ವೈಯಕ್ತಿಕ ವಿಚಾರಗಳು,ಕುಟುಂಬದ ಬಗ್ಗೆ ತಿಳಿದಿಲ್ಲ.ಈ ವಿಚಾರದ ಬಗ್ಗೆ ಕೊಂಚ ತಿಳಿಯುವುದಾದರೆ ಸಿದ್ದರಾಮಯ್ಯ ನವರು ಮೈಸೂರು ಜಿಲ್ಲೆ ವರಣಾ ತಾಲ್ಲೂಕಿನ ಸಿದ್ದರಾಮಯ್ಯನಹುಂಡಿ ಗ್ರಾಮದಲ್ಲಿ.ಇವರ ತಂದೆಗೆ ಐದು ಜನ ಮಕ್ಕಳು.ಅವರಲ್ಲಿ ಎರಡನೇ ಅವರೇ ಸಿದ್ದರಾಮಯ್ಯ.ಬಿ ಎಸ್ಸಿ.ಎಲ್. ಎಲ್. ಬಿ. ಪದವೀಧರರಾದ ಸಿದ್ದರಾಮಯ್ಯ ಅವರು ಪ್ರೋ.ನಂಜುಂಡಸ್ವಾಮಿ ಅವರ ಮೂಲಕ ರಾಜಕೀಯ ಪ್ರವೇಶ ಪಡೆದ ಸಿದ್ದರಾಮಯ್ಯನವರು ನಂತರದಲ್ಲಿ ದಿನದಲ್ಲಿ ಮಾಡಿದ್ದೆಲ್ಲಾ ಈಗ ಇತಿಹಾಸ.

ರಾಜ್ಯದಲ್ಲಿ ಬಡ-ಬಗ್ಗರಿಗೆ ಅನುಕೂಲವಾಗುವಂತಹ ಉತ್ತಮ ಕಾರ್ಯಕ್ರಮಗಳನ್ನ ನೀಡಿ ಜನಪ್ರಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ಕೊಟ್ಟಿದ್ದಾರೆ.ಅದರಿಂದ ಅವರನ್ನ ಭಾಗ್ಯವಿಧಾತ ಎಂದೇ ಕರೆಯುತ್ತಾರೆ.ಇಷ್ಟೆಲ್ಲಾ ರಾಜ್ಯದ ಜನರ ಪ್ರೀತಿ ಗಳಿಸಿರುವ ಮಾಜಿ ಮುಖ್ಯಮಂತ್ರಿಗಳು ತಮ್ಮ ಧರ್ಮಪತ್ನಿಯನ್ನು ಯಾವುದೇ ಒಂದೇ ಒಂದು ಸರ್ಕಾರಿ ಸಾರ್ವಜನಿಕ ವೇದಿಕೆಗಳಲ್ಲಿ ಪರಿಚಯ ಮಾಡಿಕೊಟ್ಟಿಲ್ಲ.ಕಾರಣ ಇಷ್ಟೇ ಇವರ ಧರ್ಮಪತ್ನಿ ಪಾರ್ವತಿ ಅವರಿಗೆ ಈ ಸಭೆ-ಸಮಾರಂಭ,ರಾಜಕೀಯ ವಿಚಾರಗಳು ಇಷ್ಟವಿಲ್ಲವಂತೆ. ಸಿದ್ದರಾಮಯ್ಯ ಮತ್ತು ಪಾರ್ವತಿ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು.

ರಾಕೇಶ್ ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ.ದುರಾದೃಷ್ಟವಶಾತ್ ಸಿದ್ದರಾಮಯ್ಯ ಅವರ ತಮ್ಮ ಮೊದಲ ಪುತ್ರ ರಾಕೇಶ್ ಬಹು ಅಂಗಾಂಗಳ ವೈಫಲ್ಯದಿಂದಾಗಿ 2016 ರಲ್ಲಿ ನಿಧನರಾದರು. ಬ್ರೇಜಿ಼ಲ್ ದೇಶದ ಪ್ರವಾಸದಲ್ಲಿದ್ದ ರಾಕೇಶ್ ಸಿದ್ದರಾಮಯ್ಯ ಅವರು ಅಲ್ಲಿಯೇ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಉಂಟಾಗಿ ಪ್ರಾಣ ತ್ಯಜಿಸಿದರು.ಬೆಳೆದ ಮಗ ತನ್ನ ಕಣ್ಣ ಮುಂದೆಯೇ ಜೀವ ಬಿಟ್ಟ್ದದ್ದು ಸಿದ್ದರಾಮಯ್ಯನವರ ಜೀವನದಲ್ಲಿ ಅತ್ಯಂತ ಕಠೋರದ ಘಟನೆಯಾಗಿದೆ.ಇದೆಲ್ಲದರ ನಡುವೆ ವರಣಾ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆ ಆಗಿರುವ ಯತೀಂದ್ರ ಸಿದ್ದರಾಮಯ್ಯ ಇದೀಗ ತಮ್ಮ ಅಣ್ಣನಿಧನರಾದ ಬಳಿಕ ತಮ್ಮ ತಂದೆಯ ರಾಜಕೀಯ ಜೀವನದ ಜೊತೆಗೆ ಸಾಗುತ್ತಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರಿಗೆ ತಮ್ಮ ಪತ್ನಿ ಪಾರ್ವತಿ ಅವರ ಮೇಲೆ ಎಷ್ಟು ಪ್ರೀತಿ ಅಂದರೆ ಮೈಸೂರು ಮೃಗಾಲಯದ 125 ನೇ ವಾರ್ಷಿಕೋತ್ಸವ ಅಂಗವಾಗಿ ಅಲ್ಲಿ ಆಗತಾನೇ ಐರಾವತಿ ಮತ್ತು ಅಭಿಮನ್ಯು ಆನೆಗಳಿಗೆ ಜನಿಸಿದ ಆನೆಮರಿಯೊಂದಕ್ಕೆ ತಮ್ಮ ಮಡದಿ ಪಾರ್ವತಿ ಅವರ ಹೆಸರನ್ನೇ ನಾಮಕರಣ ಮಾಡಿದ್ದರು.ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚಂತೆ.ಅದರಲ್ಲಿಯೂ ಅನೆಗಳನ್ನ ಕಂಡರೆ ಬಲು ಇಷ್ಟವಂತೆ.ಹೀಗಾಗಿ ಆ ಆನೆಮರಿಗೆ ಪಾರ್ವತಿ ಅಂತಾನೇ ಹೆಸರಿಟ್ಟಿದ್ದಾರೆ.ಇನ್ನು ಸಿದ್ದರಾಮಯ್ಯ ಅವರ ಮಡದಿ ಪಾರ್ವತಿ ಸಿದ್ದರಾಮಯ್ಯ ಅವರು ಎಂದೂ ಕೂಡ ಮಾಧ್ಯಮಗಳಲ್ಲಿ ಮಾತನಾಡಿದವರಲ್ಲ.ಅಪಾರ ದೈವಭಕ್ತೆಯಾಗಿರುವ ಪಾರ್ವತಿ ಅವರು ತಮ್ಮ ಪತಿಯ ಉನ್ನತಿಗಾಗಿ,ತಮ್ಮ ಕುಟುಂಬದ ಏಳ್ಗೆಗಾಗಿ ಸದಾ ಭಗವಂತನಲ್ಲಿ ಪ್ರಾರ್ಥಿಸುತ್ತಾರಂತೆ ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಖಾಸಗಿ ಕಾರ್ಯಕ್ರಮ ವೊಂದರಲ್ಲಿ ಹೇಳಿಕೊಂಡಿದ್ದರು.

Leave a Reply

%d bloggers like this: