ಮಜಾ ಭಾರತದ ಲೇಡಿ ಗೆಟಪ್ ರಾಘವೇಂದ್ರಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ? ಯಾವ ನಟನಿಗೂ ಕಮ್ಮಿಯಿಲ್ಲ.. ನೋಡಿ ಒಮ್ಮೆ

ರಾಘವೇಂದ್ರ ಆಗಿದ್ದ ಈ ನಟ ರಾಗಿಣಿ ಆದ ನಂತರ ಇವರ ಸಂಭಾವನೆ ಎಷ್ಟು ಗೊತ್ತಾ..! ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಮನರಂಜನೆಯ ಕಾರ್ಯಕ್ರಮಗಳಿಗೆ ಕೊರತೆಯೇನಿಲ್ಲ. ಸಿಂಗಿಂಗ್ ಶೋ, ಡ್ಯಾನ್ಸ್ ಶೋ, ಡ್ರಾಮಾ, ಅಡುಗೆ ಅಂತಹ ಅನೇಕ ಕಾರ್ಯಕ್ರಮಗಳಿವೆ. ಇಂತಹ ಮನರಂಜನೆ ಕಾರ್ಯಕ್ರಮಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ವೀಕ್ಷಕರಿಗೆ ಭಾರಿ ಇಷ್ಟವಾಗಿವೆ. ಅಂತಹ ಹಾಸ್ಯ ಕಾರ್ಯಕ್ರಮಗಳಲ್ಲಿ ಮಜಾ‌ಭಾರತ ಕಾಮಿಡಿ ಶೋ ಕೂಡ ಒಂದಾಗಿದೆ. ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಗಳಲ್ಲಿ ಪ್ರಮುಖವಾಗಿರುವ ಕಲರ್ಸ್ ವಾಹಿನಿಯ ಮತ್ತೊಂದು ಅಂಗ ವಾಹಿನಿಯಾಗಿರುವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾಭಾರತ ಕಾಮಿಡಿ ಶೋ ಸಹ ಪ್ರಮುಖವಾದದು.ಈ ಮಜಾ ಭಾರತ ಕಾಮಿಡಿ ಶೋ ಮೂಲಕ ಇಂದು ಅನೇಕ ಪ್ರತಿಭಾವಂತ ಕಲಾವಿದರು ತಮ್ಮ ಜೀವನಕ್ಕೆ ಹೊಸ ತಿರುವನ್ನ ಕಂಡುಕೊಂಡಿದ್ದಾರೆ. ಈ ಶೋನಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ತೋರಿ ಇಂದು ಕೇವಲ ಧಾರಾವಾಹಿ ಮಾತ್ರ ಅಲ್ಲದೆ ಬೆಳ್ಳಿ ತೆರೆಯಲ್ಲಿಯೂ ಕೂಡ ಮಿಂಚುತ್ತಿದ್ದಾರೆ.

ಹೌದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಮಜಾ ಭಾರತ ಕಾಮಿಡಿ ಶೋ ನಲ್ಲಿ ಅನೇಕ ನಟರು ಇಂದು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅವರ ಪೈಕಿ ಮಂಜು ಪಾವಗಡ, ರಾಘವೇಂದ್ರ ಪ್ರಮುಖರು ಅಂದರೆ ಅತಿಶಯೋಕ್ತಿ ಆಗುವುದಿಲ್ಲ. ಏಕೆಂದರೆ ಇವರಿಬ್ಬರ ಜುಗಲ್ ಬಂದಿ ಸೂಪರ್ ಹಿಟ್ ಆಗಿದ್ದು ಹಾಸ್ಯದ ಹೊನಲನ್ನ ಹರಿಸುತ್ತದೆ. ಅಷ್ಟರ ಮಟ್ಟಿಗೆ ಇವರಿಬ್ಬರ ಜೋಡಿ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಮಂಜು ಪಾವಗಡ ಅವರು ಕನ್ನಡ ಕಿರುತೆರೆಯ ಪ್ರಸಿದ್ದತೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿ ತಮ್ಮ ಹಾಸ್ಯ ಪ್ರಜ್ಞೆ ಮತ್ತು ವ್ಯಕ್ತಿತ್ವದ ಮೂಲಕ ಶೋ ಗೆದ್ದರು. ಅದೇ ರೀತಿಯಾಗಿ ಮತ್ತೊಬ್ಬ ಪ್ರತಿಭಾವಂತ ನಟ ಅಂದರೆ ಅದು ನಟ ರಾಘವೇಂದ್ರ. ಇವರು ಮಜಾಭಾರತ ಕಾಮಿಡಿ ಶೋನಲ್ಲಿ ಪುರುಷ ಪಾತ್ರಕ್ಕಿಂತ ಮಹಿಳೆಯ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸುವ ಮೂಲಕವೇ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಮಜಾಭಾರತ ಶೋ ನಲ್ಲಿ ಕೆಲವು ಎಪಿಸೋಡ್ ಗಳಲ್ಲಿ ರಾಘವೇಂದ್ರರಾಗಿಯೇ ನಟಿಸುತ್ತಿದ್ದ ಇವರಿಗೆ ಒಮ್ಮೆ ಮಹಿಳಾ ಪಾತ್ರ ದೊರೆಯುತ್ತದೆ.

ಈ ಮಹಿಳಾ ಪಾತ್ರದಲ್ಲಿ ನಟ ರಾಘವೇಂದ್ರ ಅವರು ಅತ್ಯದ್ಭುತವಾಗಿ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಇವರ ಅಭಿನಯಕ್ಕೆ ಇಡೀ ಪ್ರೇಕ್ಷಕ ವರ್ಗ ಮನ ಸೋಲುತ್ತದೆ. ರಾಘವೇಂದ್ರ ಅವರು ತಮ್ಮ ಶಾಲಾ ದಿನಗಳಲ್ಲಿ ನಾಟಕವೊಂದರಲ್ಲಿ ಅಜ್ಜಿ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದರಂತೆ. ರಾಘವೇಂದ್ರ ಅವರು ಹಿರಿಯ ನಟಿ ಉಮಾಶ್ರೀ ಅವರ ಅಪ್ಪಟ ಅಭಿಮಾನಿಯಂತೆ. ಅಂತೆಯೇ ವಿಶೇಷ ಸಂಚಿಕೆಯೊಂದರಲ್ಲಿ ಅತಿಥಿಯಾಗಿ ನಟಿ ಉಮಾಶ್ರೀ ಅವರು ಮಜಾಭಾರತ ಕಾರ್ಯಕ್ರಮಕ್ಕೆ ಬಂದಾಗ ರಾಘವೇಂದ್ರ ಅವರು ಉಮಾಶ್ರೀ ಅವರಂತೆ ನಟಿಸಿದ್ದರಂತೆ. ಇವರ ನಟನೆಗೆ ಸ್ವತಃ ಉಮಾಶ್ರೀ ಅವರೇ ಭಾವುಕರಾಗಿ ರಾಘವೇಂದ್ರ ಅವರನ್ನ ಅಪ್ಪಿಕೊಂಡಿದ್ದರಂತೆ. ಅಷ್ಟರ ಮಟ್ಟಿಗೆ ನಟ ರಾಘವೇಂದ್ರ ಅವರನ್ನು ಕಲಾ ಸರಸ್ವತಿ ಒಲಿದುಕೊಂಡಿದೆ. ಇದೀಗ ನಟ ರಾಘವೇಂದ್ರ ಅವರಿಗೆ ವಿವಿಧ ವಾಹಿನಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದು, ಅವರ ಸಂಭಾವನೆ ಲಕ್ಷಗಟ್ಟಲೇ ಇದೆಯಂತೆ.

Leave a Reply

%d bloggers like this: