ಮೈದಾನದಲ್ಲಿ ಪಾಕ್ ಆಟಗಾರನ ನೋಡಿ ನಾಚಿದ ನಟಿ ಊರ್ವಶಿ ರೌಟೆಲಾ ಅವರು

ಬಾಲಿವುಡ್ ಬ್ಯೂಟಿ ಮಾಡೆಲ್ ಕಮ್ ನಟಿ ಊರ್ವಶಿ ರೌಟೆಲಾ ಅವರ ಹೆಸರು ಇತ್ತೀಚೆಗೆ ಕೆಲವು ದಿನಗಳಿಂದ ಭಾರತ ತಂಡದ ಕ್ರಕೆಟಿಗ ರಿಷಭ್ ಪಂತ್ ಅವರೊಟ್ಟಿಗೆ ತಳುಕು ಹಾಕಿಕೊಂಡಿತು. ಆದರೆ ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ಊರ್ವಶಿ ರೌಟೆಲಾ ಅವರೊಟ್ಟಿಗೆ ಪಾಕ್ ಆಟಗಾರ ನಾಸಿಮ್ ಶಾ ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡು ಸಖತ್ ಟ್ರೋಲ್ ಆಗ್ತಿದೆ. ಈ ಬಾಲಿವುಡ್ ಮತ್ತು ಕ್ರಿಕೆಟ್ ಕ್ಷೇತ್ರಕ್ಕೆ ಯಾವ ರೀತಿಯ ಸಂಬಂಧ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೇ ಅನೇಕ ಬಾಲಿವುಡ್ ತಾರೆಯರು ಕ್ರಿಕೆಟ್ ಆಟಗಾರರ ಜೊತೆ ರಿಲೇಶನ್ ಶಿಪ್ ಲವ್ ಮ್ಯಾರೇಜ್ ಅಂತ ಸುದ್ದಿ ಆಗ್ತಾರೆ. ಅದ್ರಂತೆ ಬಾಲಿವುಡ್ ನಟಿ ಊರ್ವಶಿ ಅವರು ಕೂಡ ಭಾರತದ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರ ಹೆಸರಿನೊಟ್ಟಿಗೆ ಕೇಳಿ ಬರುತ್ತಿತ್ತು.

ಇದೀಗ ದುಬೈನಲ್ಲಿ ನಡಿತಿರೋ ಏಷ್ಯಾ ಕಪ್ ಪಂದ್ಯ ನೋಡಲು ಊರ್ವಶಿ ರೌಟೆಲಾ ಅವರು ಕ್ರೀಡಾಂಗಣಕ್ಕೆ ಹೋಗಿರ್ತಾರೆ. ಅಲ್ಲಿ ಊರ್ವಶಿ ಅವರನ್ನ ಕಂಡ ಪಾಕ್ ಆಟಗಾರ ನಾಸಿಮ್ ಶಾ ನಾಚಿ ನೀರಾಗಿ ಸ್ಮೈಲ್ ಮಾಡ್ತಾರೆ. ಅದೇ ರೀತಿ ಊರ್ವಶಿ ಕೂಡ ನಾಸಿಮ್ ಕಂಡು ಸ್ಮೈಲ್ ಮಾಡ್ತಾರೆ. ಇವರಿಬ್ಬರು ಪರಸ್ಪರ ಒಬ್ಬರೊಬ್ಬರನ್ನ ನೋಡಿ ಸ್ಮೈಲ್ ಮಾಡ್ತಿರೋ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇನ್ನು ಈ ವೀಡಿಯೋವನ್ನು ಊರ್ವಶಿ ರೌಟೆಲಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಕೆಲವು ನೆಟ್ಟಿಗರು ಊರ್ವಶಿ ಅವರಿಗೇ ಯಾಕ್ ಇಷ್ಟ್ ದಿನ ರಿಷಭ್ ಪಂತ್ ಬೇಕಿತ್ತು. ಈಗ ಪಾಕ್ ನಾಸಿಮ್ ಶಾ ಬೇಕಾ ಎಂದು ಕಮೆಂಟ್ ಮಾಡಿದ್ರು.

ಈ ಪ್ರತಿಕ್ರಿಯೆಗಳನ್ನೆಲ್ಲಾ ಗಮನಿಸಿದ ಊರ್ವಶಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ರಿಮೂವ್ ಮಾಡಿದ್ರು. ಇನ್ನು ಈ ಹಿಂದೆ ರಿಷಭ್ ಪಂತ್ ಅವರು ಹಾಂಗ್ ಕಾಂಗ್ ಪಂದ್ಯದ ನಡುವೆ ಮೈದಾನದಲ್ಲಿ ರಸ್ಟ್ ಮಾಡುತ್ತಿದ್ದಾಗ ಜೊತೆಗಾರ ಆಟಗಾರರಾದ ಚಹಾಲ್, ರೋಹಿತ್ ಶರ್ಮಾ ಅವರು ರಿಷಭ್ ಪಂತ್ ಅವರಿಗೆ ಏನಪ್ಪಾ ಊರ್ವಶಿ ಅವರನ್ನ ಹುಡುಕ್ತಾ ಇದ್ಯ ಎಂದು ಕಾಲೆಳೆದಿದ್ದರು ಎಂದು ನೆಟ್ಟಿಗರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ನಟಿ ಊರ್ವಶಿ ಅವರು ಇತ್ತೀಚೆಗೆ ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ಅವರ ನಟಿಸಿದ ದಿ ಲೆಜೆಂಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸಲು ಊರ್ವಶಿ ರೌಟೆಲಾ ಅವರು ಬರೋಬ್ಬರಿ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮೂಲಕ ಸುದ್ದಿಯಾಗಿದ್ದರು.