ಮಹಿಂದ್ರಾ ಇಂದ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 456 ಕಿಲೋಮೀಟರ್ ಕ್ರಮಿಸಬಹುದು

ಎಲೆಕ್ಟ್ರಿಕ್ ಎಸ್.ಯು.ವಿ ಕಾರು ಲಾಂಚ್ ಮಾಡಿದ ಮಹೀಂದ್ರಾ ಸಂಸ್ಥೆ. ಇತ್ತೀಚೆಗೆ ಕಾರು ಮಾರುಕಟ್ಟೆಯಲ್ಲಿ ಮಾತ್ರ ಅಲ್ಲ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಕೂಡ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಅದ್ರಂತೆ ಗ್ರಾಹಕರ ಅಭಿರುಚಿ ಬೇಡಿಕೆಯಂತೆ ಹೊಸ ತಂತ್ರಜ್ಞಾನ ಮತ್ತು ಫೀಚರ್ ಒಳಗೊಂಡಂತೆ ಮಹೀಂದ್ರಾ ಕಾರು ತಯಾರಕ ಸಂಸ್ಥೆ ಎಕ್ಸ್ಯುವಿ 400 ಇವಿ ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಕಾರನ್ನ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಮಾರಾಟಕ್ಕೆ ಪ್ರಾಯೋಗಿಕವಾಗಿ ತರುವ ಯೋಜನೆಯನ್ನ ಹಾಕಿಕೊಂಡಿದೆ. ಈ ಎಕ್ಸ್ಯುವಿ ಕಾರು ಖರೀದಿ ಮಾಡ ಬಯಸುವ ಕಾರು ಪ್ರಿಯರು ಈ ವರ್ಷದ ಅಂತ್ಯ ಅಂದರೆ ಡಿಸೆಂಬರ್ ನಲ್ಲಿ ಟೆಸ್ಟ್ ಡ್ರೈವ್ ಮಾಡಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಬಹು ಬೇಗ ಜಾರಿ ಆಗುತ್ತಿದ್ದಂತೆ ಮಹೀಂದ್ರಾ ಸಂಸ್ಥೆ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನ ದೇಶದ ಸರಿ ಸುಮಾರು ಹದಿನಾರು ನಗರಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಈ ಮಹೀಂದ್ರಾ ಎಕ್ಸ್ಯುವಿ 400 ಮಾದರಿಯ ಕಾರಿನ ಲಕ್ಷಣಗಳನ್ನ ತಿಳಿಯೋದಾದರೆ ಇದು 39.4 kwh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100 ಕೆವಿ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಕಾರನ್ನ ಒಮ್ಮೆ ನೀವು ಚಾರ್ಜಿಂಗ್ ಮಾಡಿದರೆ ಸರಿ ಸುಮಾರು 456 ಕಿಮೀ ವರೆಗೆ ಪ್ರಯಾಣ ಮಾಡಬಹುದಾಗಿದೆ. ಇದು ಐವತ್ತು ನಿಮಿಷಗಳಲ್ಲಿಯೇ ಶೇಕಡ 80ರಷ್ಟು ಚಾರ್ಜ್ ಆಗಲಿದೆ. ಈ ಕಾರು 147.5 ಬಿಎಚ್ಪಿ ಪವರ್ ಅಂಡ್ 310 ಎನ್ಎಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜಸ್ಟ್ 8.3 ಸೆಕೆಂಡ್ ಗಳಲ್ಲಿ ಬರೋಬ್ಬರಿ 0-100 ಕಿಮೀ ವೇಗ ಪಡೆದೂಕೊಳ್ಳೋದರ ಜೊತೆಗೆ ಪ್ರತಿ ಗಂಟೆಗೆ 150 ಕಿಮೀ ವರೆಗೆ ವೇಗವನ್ನ ಪಡೆಯುತ್ತದೆ. ಈ ಎಕ್ಸ್ಯುವಿ 400 ವರ್ಶನ್ ನ ಕಾರಿನಲ್ಲಿ ಅತ್ಯುತ್ತಮ ಡ್ರೈವ್ ಟ್ರೇನ್ ಅಂಡ್ ಡೈನಾಮಿಕ್ ಶೈಲಿಯು ಆಕರ್ಷಕವಾಗಿದೆ. ಇದರಲ್ಲಿ ಬೃಹತ್ ವಾದ ಇನ್ಫೋಟೈನ್ಮೆಂಟ್ ವ್ಯವಸ್ಥೆ ಮತ್ತು 60ಕ್ಕೂ ಹೆಚ್ಚಿನ ಕನೆಕ್ಟಿವಿಟಿ ಸೌಕರ್ಯಗಳನ್ನ ಅಳವಡಿಸಲಾಗಿದೆ‌. ಈ ಎಕ್ಸ್ಯುವಿ 400 ಮಾದರಿಯ ಮಹೀಂದ್ರಾ ಕಾರು ಮಾರುಕಟ್ಟೆಯ ಶೋರೂಂ ಬೆಲೆ ಆರಂಭಿಕವಾಗಿ 16 ಲಕ್ಷದಿಂದ ಆರಂಭವಾಗಿ 20 ಲಕ್ಷದವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ. ಒಟ್ಟಾರೆಯಾಗಿ ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಈ ಮಹೀಂದ್ರಾ ಕಾರು ಒಂದು ಉತ್ತಮ ಆಯ್ಕೆಯಾಗಿರಲಿದೆ ಎಂದು ಹೇಳಲಾಗ್ತಿದೆ.

Leave a Reply

%d bloggers like this: