ಮಹಿಂದ್ರಾ ಕಂಪನಿಯ ಹೊಸ ಎಸ್.ಯು.ವಿ ಕಾರು ಖರೀದಿಸಿದ ಬಾಬಾ ರಾಮದೇವ್ ಅವರು

ಬಾಬಾ ರಾಮ್ ದೇವ್ ಅಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು ಪತಂಜಲಿ. ಬಾಬಾ ರಾಮ್ ದೇವ್ ಅವರು ದೇಶದಲ್ಲಿ ಯೋಗ ಗುರುಗಳಾಗಿ ಪರಿಚಯಗೊಂಡವರು. ಚದ ನಂತರ ಗಿಡಮೂಲಿಕೆ, ಆಯುರ್ವೇದ ಚಿಕಿತ್ಸೆ ನೀಡುವುದರ ಜೊತೆಗೆ ಆರ್ಥಿಕ ಮತ್ತು ರಾಜಕೀಯವಾಗಿಯೂ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡು ಇಂದು ಭಾರತೀಯ ಉದ್ಯಮ ಕ್ಷೇತ್ರದಲ್ಲಿ ತಮ್ಮದೇಯಾದ ಬ್ರ್ಯಾಂಡ್ ಮಾಡಿಕೊಂಡಿದ್ದಾರೆ. ಬಾಬಾ ರಾಮ್ ದೇವ್ ಅವರು ಕಲೆ, ಸಾಹಿತ್ಯ ಮತ್ತು ಯೋಗ ಕಲಿಸುವಂತಹ ಗುರುಕುಲ ಆರಂಭಿಸಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅಪಾರ ಜನಪ್ರಿಯ ಗಳಿಸಿದ್ದಾರೆ. ಇವರ ಇನ್ನೊಂದಷ್ಟು ಮಾಹಿತಿ ತಿಳಿಯೋದಾದ್ರೆ 1995ರಲ್ಲಿ ಬಾಬಾ ರಾಮ್ ದೇವ್ ಅವರು ಯೋಗ ಮಂದಿರ್ ಟ್ರಸ್ಟ್ ಆರಂಭಿಸಿದರು. ತದ ನಂತರ 2003ರಲ್ಲಿ ಆಸ್ತ ಎನ್ನುವ ದೂರದರ್ಶನದಲ್ಲಿ ಯೋಗ ಕಾರ್ಯಕ್ರಮ ಆರಂಭಿಸಿದರು.

ಇವರ ಯೋಗ ಕೇಂದ್ರಕ್ಕೆ ಭಾರತದ ಸಿನಿಮಾ, ರಾಜಕೀಯ ಇನ್ನಿತರ ಉದ್ಯಮ ಕ್ಷೇತ್ರದ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ರಾಮ್ ದೇವ್ ಅವರು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಶಿಲ್ಪಾ ಶೆಟ್ಟಿ ಅಂತಹ ಸೆಲೆಬ್ರಿಟಿಗಳಿಗೆ ಯೋಗ ತರಬೇತಿ ನೀಡಿದ್ದಾರೆ. ಇದೀಗ ಗುರು ಬಾಬಾ ರಾಮ್ ದೇವ್ ಅವರು ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದಾರೆ. ಅದರ ಜೊತೆಗೆ ತಮ್ಮ ಈ ಹೊಸ ಕಾರನ್ನ ತಾವೇ ಸ್ವತಃ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸನ್ನಿವೇಶಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೌದು ಬಾಬಾ ರಾಮ್ ದೇವ್ ಅವರು ಮಹೀಂದ್ರಾ ಎಕ್ಸ್ಯುವಿ700 ಕಾರನ್ನ ಖರೀದಿ ಮಾಡಿದ್ದಾರೆ. ಈ ಮಹೀಂದ್ರಾ ಎಕ್ಸ್ಯೂವಿ 700 ಎಕ್ಸ್ಯುವಿ ಕಾರು ಪನರೊಮಿಕ್ ಸನ್ ರೂಫ್ ನೊಂದಿಗೆ ಟಾಪ್ ಎಂಡ್ ಟ್ರಿಮ್ ನಂತೆ ಕಾಣುತ್ತದೆ.

ಮಹೀಂದ್ರಾ ಎಕ್ಸ್ಯುವಿ 700 ಎಸ್ಯುವಿಯು ಎಂಎಕ್ಸ, ಎಂಎಕ್ಸ್3, ಎಎಕ್ಸ್5, ಎಕ್ಸ್7, ಅಂತಹ ವಿವಿಧ ವೇರಿಯೆಂಟ್ ಗಳನ್ನ ಹೊಂದಿವೆ. ಈ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಎಲ್.ಇ.ಡಿ ಹೆಡ್ ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಆಕಾರದಲ್ಲಿರುವ ಎಲ್.ಇ.ಡಿ ಹೆಡ್ ಲ್ಯಾಂಪ್ಸ್, ಪ್ಲಕ್ಸ್ ಸ್ಕೀಡ್ ಜೊತೆಗೆ 18 ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಹೊಂದಿದೆ. ಈ ವಿಶೇಷ ಫೀಚರ್ಸ್ ಗಳ ಜೊತೆಗೆ 10.25 ಇಂಚಿನ ಡಿಜಿಟಲ್ ಅಂಡ್ ಇನ್ಫೋಟೈನ್ ಮೆಂಟ್ ಟಚ್ ಸ್ಕ್ರೀನ್ ಡಿಸ್ ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, ಅಮೆಜಾನ್ ಅಲೆಕ್ಸಾ, 60 ಟೆಕ್ನಾಲಜಿಯನ್ನ ಅಳವಡಿಸಲಾಗಿದೆ. 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನೊಳಗೊಂಡಿದ್ದು, 198 ಬಿ.ಎಚ್.ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡಲಾಗುತ್ತದೆ.

Leave a Reply

%d bloggers like this: