ಮಹಿಳೆಯರು ತುಟಿ ಕಚ್ಚಿದರೆ ಅದರ ಅರ್ಥವೇನು ಗೊತ್ತಾ? ತುಟಿಗಳಿಂದ ನೀಡುವ ಸನ್ನೆಗಳಿಗೆ ಅಸಲಿ ಅರ್ಥವೇನು ಗೊತ್ತಾ?

ಹೆಣ್ಣಿನ ಮನಸ್ಸು ಎಂಬುದು ನೀರಿನಲ್ಲಿ ಮೀನಿನ ಹೆಜ್ಜೆ ಕಂಡು ಹಿಡಿಯಲು ಹೇಗೆ ಸಾಧ್ಯವಿಲ್ಲವೋ ಆ ರೀತಿಯದ್ದು ಎಂದು ಹೇಳುತ್ತಾರೆ. ಆದರೆ ಮಹಿಳೆಯರು ಕೂಡ ಮನುಷ್ಯರೇ. ಅವರನ್ನ ಅರ್ಥ ಮಾಡಿಕೊಳ್ಳುವುದು ಅಷ್ಟೆನೋ ಕಷ್ಟವಲ್ಲ. ಅವರ ಮನಸ್ಥಿತಿಯನ್ನ ಅರಿಯಲು ಕೊಂಚ ಸೂಕ್ಷ್ಮ ಪ್ರಜ್ಞೆಯನ್ನ ತೋರಬೇಕು ಅಷ್ಟೆ ಎಂದು ಹೇಳುತ್ತಾರೆ ಮಾನಸಿಕ ತಜ್ಞರು. ವಿಚಿತ್ರ ಅಂದರೆ ಹೆಣ್ಣು ಮಕ್ಕಳು ಅವರನ್ನ ಅರಿಯಲು ಅವರ ಮನಸ್ಸಿನಲ್ಲಿರುವ ಭಾವನೆಯನ್ನ ಅರ್ಥ ಮಾಡಿಕೊಳ್ಳಲು ಕೆಲವು ಸೂಚನೆಗಳನ್ನ ನೀಡುತ್ತಾರಂತೆ. ಹಾಗಾದರೆ ಯಾವ ಸೂಚನೆಗಳಿಂದ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದು ಎಂದು ನಿಮಗೆ ಗೊತ್ತಾ. ಸಾಮಾನ್ಯವಾಗಿ ಪುರುಷ ಮತ್ತು ಮಹಿಳೆ ಇಬ್ಬರು ಕೂಡ ಒಂದೇ ರೀತಿಯ ಭಾವನೆವುಳ್ಳವರಾಗಿರುತ್ತಾರೆ. ಗಂಡು-ಹೆಣ್ಣಿಗೆ ಕೆಲವು ದೈಹಿಕ ಬದಲಾವಣೆ ಹೊರತು ಪಡಿಸಿದರೆ ಇಬ್ಬರಿಗೂ ಇನ್ಯಾವುದೇ ರೀತಿಯಾಗಿ ವಿಭಿನ್ನವಾಗಿ ಇರುವುದಿಲ್ಲ.

ಆದರೆ ಬಹುತೇಕರು ಹೆಣ್ಣಿನ ಮನಸ್ಸು ಒಂದು ನಿಗೂಢವಾದುದ್ದು ಅವರನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಿಂಬಿಸುತ್ತಾರೆ. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಸಾಮಾನ್ಯವಾಗಿ ಮಹಿಳೆಯರಿಗೆ ತುಂಬಾ ಆಸೆಗಳಿರುತ್ತವೆ. ತನ್ನ ಸಂಗಾತಿ ಆ ಆಸೆಗಳ ಎಲ್ಲವನ್ನು ಪೂರೈಸದಿದ್ದರು ಪರವಾಗಿಲ್ಲ ಅವಳನ್ನ ಪ್ರೀತಿಯಿಂದ ಮಾತನಾಡಿಸಿ ಕಾಳಜಿಯಿಂದ ನೋಡಿಕೊಳ್ಳಬೇಕು ಅಷ್ಟೆ. ತನ್ನ ಸಂಗಾತಿಯ ಪ್ರೀತಿಗೆ ಅವಳು ಸೋಲುತ್ತಾಳೆ. ಮಹಿಳೆಯರು ಸಾಮಾನ್ಯವಾಗಿ ತುಂಬಾ ಸೂಕ್ಷ್ಮತೆವುಳ್ಳು ಮನಸ್ಸುಳ್ಳವರಾಗಿರುತ್ತಾರೆ. ಹಾಗಾಗಿ ಅವರು ಸಣ್ಣ ಪುಟ್ಟ ಸಮಸ್ಯೆ, ಕೆಟ್ಟ ಘಟನೆಗಳಿಗೆ, ಜಗಳಗಳಲ್ಲಿ ಬರುವ ಮಾತುಗಳಿಗೆ ತುಂಬಾ ನೋವು ಪಡುತ್ತಾರೆ. ಇನ್ನು ಯಾವ ಮಹಿಳೆ ಮನೆಯ ಎಲ್ಲಾ ಸದಸ್ಯರು ಊಟವಾದ ಬಳಿಕ ತಾನು ಊಟ ಮಾಡುತ್ತಾಳೋ, ಅಥವಾ ಸದಾ ಎಲ್ಲರ ಕ್ಷೇಮ ಬಯಸಿ ಹೆಚ್ಚು ಮಾತನಾಡದೆ ಮೌನವಾಗಿ ಜೀವಿಸುತ್ತಿರುತ್ತಾಳೋ ಆ ಮಹಿಳೆ ತನ್ನ ಗಂಡ, ಅತ್ತೆ ಮಾವನ ಭಯದಲ್ಲಿ ಜೀವನ ನಡೆಸುತ್ತಿರುತ್ತಾಳೆ ಎಂಧರ್ಥ.

ಇನ್ನು ಕೆಲವು ಹೆಣ್ಣು ಮಕ್ಕಳು ಯಾರಾದರು ಒಬ್ಬರ ಹತ್ತಿರ ಮಾತನಾಡುವಾಗ ಪದೆ ಪದೇ ನಕ್ಕು , ತಲೆ ಕೂದಲನ್ನ ಆ ಕಡೆ ಈ ಕಡೆ ಸರಿಸಿ ಮಾತನಾಡುತ್ತಿದ್ದರೆ ಅವಳಿಗೆ ತನ್ನ ಎದುರಿಗೆ ಇರುವ ವ್ಯಕ್ತಿಯ ಬಗ್ಗೆ ಆತಂಕ ಇದೆ ಎಂದು ತಿಳಿಯಬಹುದು. ಕೆಲವು ಹೆಣ್ಣು ಮಕ್ಕಳು ಮನೆಯಲ್ಲಿ ಎಲ್ಲರ ಮುಂದೆ ನಗುತ್ತಾ ಆರಾಮದಾಯಕವಾಗಿ ಕೂತು ನಿಸ್ಸಂಕೋಚವಾಗಿ ಮಾತನಾಡುತ್ತಿದ್ದರೆ ಅವರಿಗೆ ತಮ್ಮ ಬಗ್ಗೆ ತುಂಬಾ ಧೈರ್ಯ ಆತ್ಮವಿಶ್ವಾಸ ಇದೆ ಎಂದು ತಿಳಿಯಬಹುದಾಗಿರುತ್ತದೆ. ಯಾವಾಗ ಹೆಣ್ಣು ಮಕ್ಕಳು ನಿಮ್ಮ ಮಾತುಗಳಿಗೆ ಒಪ್ಪಿ ಹ್ಞೂ ಗುಡುತ್ತಾ ಹೋಗುತ್ತಾರೋ ಅವರು ನಿಮ್ಮ ಮಾತುಗಳ ಮೇಲೆ ನಿಗಾ ಇಟ್ಟು ಕೇಳುತ್ತಾ ನಂಬುತ್ತಾರೆ ಎಂಧರ್ಥ. ಇನ್ನು ಯಾರಾದರು ಮಹಿಳೆಯರು ನಿಮ್ಮ ನೋಡಿ ಕೆಳ ಭಾಗದ ತುಟ್ಟಿ ಕಚ್ಚಿ ಮಾತನಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಭಯ ಆತಂಕ ಇದೆ ಎಂಧರ್ಥ. ಆದರೆ ಇದನ್ನ ಬಹುತೇಕ ಪುರುಷರು ತಮ್ಮ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಭಾವಿಸುತ್ತಾರೆ.

Leave a Reply

%d bloggers like this: