ಮಹಾನಾಯಕ ಧಾರಾವಾಹಿಯಲ್ಲಿ ತಾಯಿ ಪಾತ್ರ ಮಾಡಿದ ಈಕೆ ನಿಜಕ್ಕೂ ಯಾರು ಗೊತ್ತಾ? ಸಂಭಾವನೆ ಎಷ್ಟು ಗೊತ್ತಾ

ಕನ್ನಡ ಕಿರುತೆರೆಯ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಜೀವನಾಧಾರಿತ ಜನಪ್ರಿಯ ಧಾರಾವಾಹಿಯಾಗಿರುವ ಮಹಾನಾಯಕ ಸೀರಿಯಲ್ ನಾಡಿನಾದ್ಯಂತ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.ಈ ಮಹಾನಾಯಕ ಧಾರಾವಾಹಿಯು ಶಿಕ್ಷಣದ ಮಹತ್ವ ಮತ್ತು ಸಮಾಜಲ್ಲಿರುವಂತಹ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ನಾಡಿನ ಜನರಲ್ಲಿ ಒಂದು ರೀತಿಯ ಸಕರಾತ್ಮಕ ಪ್ರಭಾವ ಬೀರುತ್ತಿದೆ.ಇದರ ಜನಪ್ರಯತೆ ಯಾವ ಮಟ್ಟಿಗೆ ಇದೆ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕೇರಿ ಕೇರಿ ರಸ್ತೆಗಳ ಬದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಕಟೌಟ್ ಹಾಕಿ ಮಹಾನಾಯಕ ಧಾರಾವಾಹಿಗೆ ಅಪಾರ ಪ್ರೋತ್ಸಾಹ ಬೆಂಬಲ ಸೂಚಿಸುತ್ತಿದ್ದಾರೆ.ಜೊತೆಗೆ ಈ ಸೀರಿಯಲ್ ಕನ್ನಡದಲ್ಲಿ ಡಬ್ಬಿಂಗ್ ಆಗಿ ಮೂಡಿಬರಲು ಕಾರಣಕರ್ತರಾದ ಜೀ಼ ಕನ್ನಡ ವಾಹಿನಿಯ ಬಿಸಿ಼ನೆಸ್ ಹೆಡ್ ಆಗಿರುವಂತಹ ರಾಘವೇಂದ್ರ ಹುಣಸೂರು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಮಹಾನಾಯಕ ಧಾರಾವಾಹಿ ಇಂದು ಇಷ್ಟರ ಮಟ್ಟಿಗೆ ಗಮನ ಸೆಳೆಯಲು ಪ್ರಮುಖವಾಗಿ ಇದರಲ್ಲಿ ನಟಿಸುವ ಪ್ರತಿಯೊಬ್ಬ ಕಲಾವಿದರು ಕೂಡ ಮುಖ್ಯವಾಗುತ್ತಾರೆ.ಬಾಲ ಅಂಬೇಡ್ಕರ್ ಪಾತ್ರಧಾರಿಯಿಂದ ಹಿಡಿದು ಅವರ ತಂದೆ-ತಾಯಿ ಪಾತ್ರಗಳು,ಊರಿನ ಮುಖಂಡರ ಪಾತ್ರಗಳು ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ.ಇನ್ನು ಅಂಬೇಡ್ಕರ್ ಅವರ ತಾಯಿ ಭೀಮಭಾಯಿ ಪಾತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ದೇಶದಾದ್ಯಂತ ಅಪಾರ ಜನಮೆಚ್ಚುಗೆ ಗಳಿಸಿರುವ ನಟಿ ನೇಹಾ ಜೋಶಿ ಇತ್ತೀಚೆಗೆ ಖಾಸಗಿ ವಾಹಿನಯ ಸಂದರ್ಶನವೊಂದರಲ್ಲಿ ಈ ಮಹಾನಾಯಕ ಸೀರಿಯಲ್ ನಲ್ಲಿ ನಟಿಸುತ್ತಿರುವ ತಮ್ಮ ಪಾತ್ರದ ಬಗ್ಗೆ ನನಗೆ ಪಾತ್ರಗಳು ಕಿರಿದದ್ದಾಗಿರಲಿ,ಹಿರಿಯದ್ದಾಗಿರಲಿ ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವನ್ನು ಹೊಂದಿರುತ್ತದೆ.

ಅದರಲ್ಲಿಯೂ ಜೀವಂತವಾಗಿದ್ದ ವ್ಯಕ್ತಿಗಳ ಪಾತ್ರಗಳನ್ನು ನಿಭಾಯಿಸುವುದು ಕೊಂಚ ಸವಾಲಿನ ಕೆಲಸವೇ ಸರಿ ಎಂದು ತಮ್ಮ ಭೀಮಬಾಯಿ ಪಾತ್ರದ ಬಗ್ಗೆ ಹೆಮ್ಮೆಯ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಇನ್ನು ನಟಿ ನೇಹಾ ಜೋಶಿ ಈ ಪಾತ್ರದ ನಟನೆಗಾಗಿ ದಿನವೊಂದಕ್ಕೆ ಇಪ್ಪತ್ತೈದು ಸಾವಿರ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.ಇನ್ನು ಮರಾಠಿ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ನಟಿ ನೇಹಾ ಜೋಶಿ ಸದ್ಯಕ್ಕೆ ಈ ಧಾರಾವಾಹಿಯ ಮೂಲಕ ದೇಶದ ಮನೆ ಮನಗಳಲ್ಲಿ ಮಾತಾಗಿದ್ದಾರೆ.

Leave a Reply

%d bloggers like this: