ಮಗುವಿಗೆ ಕಣ್ಣೇ ಇಲ್ಲ ಕಸದ ತೊಟ್ಟಿಗೆ ಎಸೆದು ಬಿಡಿ ಎಂದ ಸಂಬಂದಿಕರು, ಇಂದು ಏಷ್ಯಾದಲ್ಲಿ ಬೃಹತ್ ಕಂಪನಿ ಕಟ್ಟಿ ಸಾವಿರಾರು ಕೋಟಿಯ ಒಡೆಯ

ಜೀವನದಲ್ಲಿ ಯಾರನ್ನೇ ಆಗಲಿ ಕೀಳಾಗಿ ಕಾಣಬಾರದು. ಚುಚ್ಚು ಮಾತುಗಳಿಂದ ಅಸಹಾಯಕ ವ್ಯಕ್ತಿಗಳನ್ನ ಅವಮಾನ ಮಾಡಿ ನೋವನ್ನು ಕೊಡಬಾರದು. ಯಾರ ಅದೃಷ್ಟ ಯಾರು ಬಲ್ಲರು. ವ್ಯಕ್ತಿ ಹೀಗೆ ಬದುಕುತ್ತಾನೆ ಎಂದು ಊಹೆ ಮಾಡಲಾಗದು. ಅಂತೆಯೇ ಅಂದನಾಗಿ ಹುಟ್ಟಿದ ಮಗುವನ್ನ ಸಾಯಿಸಿಬಿಡಿ ಅಂದಿದ್ದ ಸಂಬಂಧಿಕರ ಮಾತು ಕೇಳಿ ನೊಂದಿದ್ದ ಪೋಷಕರು ಅದೇ ಮಗುವನ್ನು ಸಾಕಿ ಬೆಳೆಸುತ್ತಾರೆ. ಇಂದು ಅದೇ ಅಂದ ಮಗು ಸಾವಿರಾರು ಕೋಟಿಯ ಒಡೆಯನಾಗಿ ಬೆಳೆದು ನಿಂತಿದೆ. ಹೌದು ಆಂಧ್ರ ಪ್ರದೇಶದ ಸೀತಾಪುರ ಎಂಬ ಗ್ರಾಮದಲ್ಲಿ ಜನಿಸಿದ ಶ್ರೀಕಾಂತ್ ಬೋಲಾ ಎಂಬುವವರು ಹುಟ್ಟುತ್ತಲೇ ದೃಷ್ಟಿ ಹೀನರಾಗಿರುತ್ತಾರೆ. ಆಗ ಇವರ ಪೋಷಕರಿಗೆ ಸಂಬಂಧಿಕರೆಲ್ಲಾ ಅಯ್ಯೋ ಕಣ್ಣಿಲ್ಲದ ಈ ಮಗುವನ್ನ ಕಷ್ಟ ಪಟ್ಟು ಏಕೆ ಸಾಕಿ ಸಲಹುತ್ತೀರಿ. ಈ ಮಗು ಭವಿಷ್ಯದಲ್ಲಿ ನಿಮ್ಮನ್ನ ಸಾಕಲು ಸಾಧ್ಯವಾಗುವುದಿಲ್ಲ. ಸುಮ್ಮನೆ ಯಾರಿಗಾದ್ರೂ ಕೊಟ್ಟು ಬಿಡಿ ಎಂದು ಹೇಳಿದರಂತೆ.

ಆದರೆ ಇವರ ಮಾತುಗಳನ್ನ ನಿರ್ಲಕ್ಷ್ಯ ಮಾಡಿ ತಮಗೆ ಜನಿಸಿದ ಈ ದೃಷ್ಟಿ ಹೀನ ಮಗುವನ್ನು ಪೋಷಕರು ಸಾಕುತ್ತಾರೆ. ಶ್ರೀಕಾಂತ್ ಬೋಲಾ ಅವರ ಕುಟುಂಬ ಆರ್ಥಿಕವಾಗಿ ತುಂಬ ಕಷ್ಟದಲ್ಲೇ ಇರುತ್ತದೆ. ಇವರ ಪೋಷಕರ ತಿಂಗಳ ಆದಾಯ ಕೇವಲ ಒಂದೂವರೆ ಸಾವಿರ ರೂ.ಗಳಷ್ಟು ಮಾತ್ರ ಇರುತ್ತದೆ. ತಮಗೆ ಎಷ್ಟೇ ಬಡತನವಿದ್ದರು ಕೂಡ ತಮ್ಮ ದೃಷ್ಟಿಹೀನ ಮಗನನ್ನ ಎಲ್ಲರಂತೆ ಸಾಮಾನ್ಯ ಮಗುವಿನ ಹಾಗೆ ಸಾಕಿ ಸಲಹುತ್ತಾರೆ. ಶ್ರೀಕಾಂತ್ ಬೋಲಾ ಬೆಳೆದಂತೆ ಅವನನ್ನ ತಮ್ಮೂರಿನ ಶಾಲೆಗೆ ಸೇರಿಸುತ್ತಾರೆ. ಶಾಲೆಗೆ ಸೇರಿದ ನಂತರ ಸಹಜವಾಗಿ ಶ್ರೀಕಾಂತ್ ಅವರನ್ನ ಶಿಕ್ಷಕರು ಸೇರಿದಂತೆ ಎಲ್ಲರು ಕೂಡ ವಿಭಿನ್ನವಾಗಿಯೇ ಅವರ ಜೊತೆ ನಡೆದುಕೊಳ್ಳುತ್ತಾರೆ.

ತರಗತಿಯಲ್ಲಿ ಕೊನೆಯಲ್ಲಿ ಕುಳಿತುಕೊಳ್ಳುತ್ತಿದ್ದ ಶ್ರೀ ಕಾಂತ್ ಅವರಿಗೆ ಓದಿನಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಕಲಿಯುವವನಿಗೆ ಯಾವ ದೋಷ ಇದ್ದರೇನು. ಎಲ್ಲಿ ಕೂತರೇನು. ಕಲಿಯುವವ ಕಲಿತೇ ಕಲಿಯುತ್ತಾನೆ. ಅಂತೆಯೇ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ವಿಶೇಷ ಚೇತನವಾಗಿರುವ ಶ್ರೀಕಾಂತ್ ಅವರು ಶೇಕಡ 90 ರಷ್ಟು ಅಂಕ ಗಳಿಸಿ ಇಡೀ ಶಾಲೆಯಲ್ಲಿ ಎಲ್ಲರಿಗೂ ಅಚ್ಚರಿಯಾಗಿಸುತ್ತಾರೆ. ಶ್ರೀಕಾಂತ್ ಅವರ ಪ್ರತಿಭೆ ಕಂಡು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡುತ್ತಾರೆ. ತದ ನಂತರ ಪಿ.ಯು.ಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವ ಇಚ್ಚೆ ವ್ಯಕ್ತಪಡಿಸುತ್ತಾರೆ ಶ್ರೀಕಾಂತ್. ಆದರೆ ದೃಷ್ಟಿಹೀನರಾಗಿದ್ದ ಶ್ರೀಕಾಂತ್ ಅವರಿಗೆ ಕಾಲೇಜು ಆಡಳಿತ ಮಂಡಳಿ ವಿಜ್ಞಾನ ವಿಭಾಗದಲ್ಲಿ ಸೀಟು ನೀಡಲು ಹಿಂದೇಟು ಹಾಕುತ್ತಾರೆ.

ಇದರಿಂದ ಕೋಪಗೊಂಡ ಶ್ರೀಕಾಂತ್ ಬೋಲಾ ಅವರು ಕೋರ್ಟ್ ಮೂಲಕ ಹೋರಾಡಿ ವಿಜ್ಞಾನ ವಿಭಾಗದಲ್ಲಿ ಸೀಟು ಗಿಟ್ಟಿಸಿಕೊಂಡು ಅಲ್ಲಿಯೂ ಕೂಡ ಉತ್ತಮವಾಗಿ ಓದಿ ಶೇಕಡ 98 ರಷ್ಟು ಅಂಕ ಗಳಿಸಿ ಸಾಧನೆ ಮಾಡುತ್ತಾರೆ. ಬಳಿಕ ಶ್ರೀಕಾಂತ್ ಅವರ ಪ್ರತಿಭೆಗೆ ಇಡೀ ಕುಟುಂಬ ಒಮ್ಮೆಲೆ ದಿಗ್ಬ್ರಮೆ ಆಗುತ್ತಾರೆ. ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂಬ ಛಲ ಹೊಂದಿದ್ದ ಶ್ರೀಕಾಂತ್ ಕೊನೆಗೆ ಅಮೆರಿಕಾದ ಎಮ್.ಐ.ಟಿ. ಯಲ್ಲಿ ಉನ್ನತ ಶಿಕ್ಷಣ ಅಧ್ಯಾಯನ ಮಾಡುತ್ತಾರೆ. ಬಳಿಕ ಶ್ರೀಕಾಂತ್ ಅವರಿಗೆ ಅನೇಕ ಪ್ರತಿಷ್ಟಿತ ಕಂಪನಿಗಳಿಂದ ಅವಕಾಶಗಳ ಮಹಾಪೂರವೇ ಹರಿದು ಬರುತ್ತದೆ. ಆದರೆ ಬಂದ ಅವಕಾಶಗಳನ್ನೆಲ್ಲಾ ಶ್ರೀಕಾಂತ್ ಅವರು ತಿರಸ್ಕಾರ ಮಾಡಿ ಸ್ವಂತ ವಾಗಿ ಏನಾದರೊಂದು ಉದ್ಯಮ ಆರಂಭಿಸಬೇಕು ಎಂದು ಆಲೋಚನೆ ಮಾಡುತ್ತಾರೆ.

ಆಗ 2012 ರಲ್ಲಿ ಶ್ರೀಕಾಂತ್ ಅವರು ಬೋಲಾಂಟ್ ಇಂಡಸ್ಟ್ರೀಸ್ ಎಂಬ ಫುಡ್ ಪ್ಯಾಕೇಜಿಂಗ್ ಸಂಸ್ಥೆಯನ್ನ ಹುಟ್ಟು ಹಾಕುತ್ತಾರೆ. ಇದೀಗ ಈ ಕಂಪನಿಯು ಬರೋಬ್ಬರಿ ದೇಶದ ಏಳು ಭಾಗಗಳಲ್ಲಿ ತನ್ನ ಉದ್ಯಮಯ ಘಟಕಗಳನ್ನು ಹೊಂದಿದ್ದು, ವರ್ಷಕ್ಕೆ ಸರಿ ಸುಮಾರು ಇನ್ನೂರು ಕೋಟಿಯಷ್ಟು ಆದಾಯ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಬರೋಬ್ಬರಿ 15,000 ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಹೀಗೆ ಶ್ರೀಕಾಂತ್ ಅವರು ಮನುಷ್ಯ ಮನಸ್ಸು ಮಾಡಿದರೆ ಅದು ಎಂತಹ ನ್ಯುನತೆ ಇದ್ದರು ಕೂಡ ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.