ಮಗುವಿಗೆ ಎದೆ ಹಾಲುಣಿಸುವ ಫೋಟೋವನ್ನು ಹಂಚಿಕೊಂಡ ಬಾಲಿವುಡ್ ನಟಿ

ಎದೆ ಹಾಲುಣಿಸುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಾಯ್ತನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಬಾಲಿವುಡ್ ಖ್ಯಾತ ನಟಿ..! ಇತ್ತೀಚೆಗೆ ಬಾಲಿವುಡ್ ಅನೇಕ ಸ್ಟಾರ್ ನಟ-ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಯಾಗುತ್ತಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರು ಇತ್ತೀಚೆಗೆ ಸಖತ್ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ದಿನನಿತ್ಯದ ಅನೇಕ ವಿಚಾರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಕೆಲವು ನಟಿಯರು ಹಂಚಿಕೊಳ್ಳುವ ಖಾಸಗಿತನದ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದಾವೆ. ಅದರಂತೆ ಇದೀಗ ಬಾಲಿವುಡ್ ಖ್ಯಾತ ನಟಿ ಎವೆಲಿರ್ನ್ ಶರ್ಮಾ ಅವರು ತಮ್ಮ ಮಗುವಿಗೆ ಹಾಲುಣಿಸುತ್ತಿರುವ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು ತಾಯ್ತನದ ಬಗ್ಗೆ ಖುಷಿ ಪಡುತ್ತಾ ತಾಯಿಯ ಜವಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ನಟಿ ಎವೆಲಿನ್ ಶರ್ಮಾ ಅವರು ಹಿಂದಿಯ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಯೇ ಜವಾನಿ ಹೇ ದಿವಾನಿ, ಜಬ್ ಹ್ಯಾರಿ ಮೆಟ್ ಸೇಜಲ್, ಸಾಹೋ, ನೌಟಂಕಿ ಸಾಲಾ ಹೀಗೇ ಸೂಪರ್ ಹಿಟ್ ಸಿನಿಮಾಗಳಲ್ಲಿ ಎವೆಲಿನ್ ಶರ್ಮಾ ಅಭಿನಯಿಸಿದ್ದಾರೆ.ಪ್ರಮುಖವಾಗಿ ನಟಿ ಎವೆಲಿನ್ ಶರ್ಮಾ ಅವರು ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಯೇ ಜವಾನಿ ಹೇ ದಿವಾನಿ ಸಿನಿಮಾದಲ್ಲಿ ನಟಿ ಎವೆಲಿನ್ ಶರ್ಮಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ ಎವೆಲಿನ್ ಶರ್ಮಾ ಅವರಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

ಇನ್ನು ಕಳೆದ ವರ್ಷ ತಾನೇ ಆಸ್ಟ್ರೇಲಿಯಾ ಮೂಲದ ವೈದ್ಯರಾಗಿರುವ ತನ್ನ ಗೆಳೆಯ ತುಷಾನ್ ಭಿಂಡಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು. ಅದರ ಒಂದಷ್ಟು ಫೋಟೋಗಳನ್ನು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ತಾವು ಮದುವೆ ಆಗಿರುವ ವಿಚಾರವನ್ನು ತಮ್ಮ ಅಭಿಮಾನಿಗಳೊಟ್ಟಿಗೆ ಸಂಭ್ರಮದಿಂದ ಹಂಚಿಕೊಂಡಿದ್ದರು. ಇದಾದ ಬಳಿಕ ಇತ್ತೀಚೆಗೆ ಮೂರು ತಿಂಗಳ ಹಿಂದೆಯಷ್ಟೇ ನವೆಂಬರ್ ತಿಂಗಳಿನಲ್ಲಿ ನಟಿ ಎವೆಲೆನ್ ಶರ್ಮಾ ಮತ್ತು ತುಷಾನ್ ದಂಪತಿಗಳಿಗೆ ಹೆಣ್ಣು ಮಗು ಜನನ ವಾಗುತ್ತದೆ. ಇದೀಗ ನಟಿ ಎವೆಲಿನ್ ಶರ್ಮಾ ಅವರು ತಮ್ಮ ಮುದ್ದಾದ ಮಗವಿನ ಲಾಲನೆ-ಪಾಲನೆ ಮಾಡುತ್ತಾ ಅದರ ಹಾರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

Leave a Reply

%d bloggers like this: