ಮಗನಿಗೆ ಒಂದೂವರೆ ಕೋಟಿ ಬೆಲೆಯ ದುಬಾರಿ ಕಾರು ಕೊಡಿಸಿದ ಖ್ಯಾತ ನಟಿ

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು ತಮ್ಮಸಿನಿಮಾ, ಜೀವನ ಶೈಲಿ ಮತ್ತು ಹೊಸ ಕಾರ್ ಖರೀದಿ ಮಾಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಅದರಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯ ನಟಿಯಾಗಿ ಮಿಂಚಿದ್ದ ನಟಿ ರೋಜಾ ಅವರು ಇದೀಗ ಆಂಧ್ರಪ್ರದೇಶ ಸರ್ಕಾರದ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಟಿ ರೋಜಾ ಅವರು ಕನ್ನಡದಲ್ಲಿ ಹೆಚ್ಚು ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ರೋಜಾ ಅವರು ತಮಿಳು, ತೆಲುಗು, ಮಲೆಯಾಳಂ ಮಾತ್ರ ಅಲ್ಲದೆ ಕನ್ನಡದಲ್ಲಿ ಕೂಡ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಬಣ್ಣದ ಲೋಕದಿಂದ ದೂರವಿದ್ದು ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದಾರೆ.

ಹೌದು ನಟಿ ರೋಜಾ ಅವರು ಆಂಧ್ರಪ್ರದೇಶದಲ್ಲಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದಲ್ಲಿ ಯುವ ಅಭಿವೃದ್ದಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಹಾಗೂ ರಾಜಕೀಯ ಹೀಗೆ ಈ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಟಿ ರೋಜಾ ಅವರು ಇದೀಗ ಬರೋಬ್ಬರಿ ಒಂದೂವರೆ ಕೋಟಿ ಬೆಲೆಯ ಐಷಾರಾಮಿ ದುಬಾರಿ ಕಾರೊಂದನ್ನ ಖರೀದಿ ಮಾಡಿದ್ದಾರೆ. ರೋಜಾ ಅವರು ಖರೀದಿ ಮಾಡಿರುವ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್400 ಡಿಮ್ಯಾಟಿಕ್ ಕಾರನ್ನ ಖರೀದಿಸಿದ್ದು, ಈ ಕಾರಿನ ಜೊತೆ ನಿಂತಿರುವ ಫೋಟೋ ಮತ್ತು ಅದರ ವೀಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರೋಜಾ ಅವರು ಖರೀದಿ ಮಾಡಿರುವ ಈ ಸ್ಪೆಷಲ್ ಮರ್ಸಿಡಿಸ್ ಜಿಎಲ್ಎಸ್400 ಡಿ ಮ್ಯಾಟಿಕ್ ಬೆಂಜ್ ಕಾರು ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. 3.0 ಲೀಟರಿನ ಇನ್ ಲೈನ್ ಸಿಕ್ಸ್ ಸಿಲೆಂಡರ್ ಎಂಜಿನ್ ಅನ್ನು ಹೊಂದಿದೆ. ಈ ಬೆಂಝ್ ಕಾರು 367 ಬಿ.ಎಚ್.ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇದರಲ್ಲಿರುವ ಫೀಚರ್ಸ್ ನೋಡುವುದಾದರೆ ಇದರಲ್ಲಿ ಇಪ್ಪತ್ತೊಂದು ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್ ಗಳೊಟ್ಟಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್ ಗಳು ಮತ್ತು ಹಲವಾರು ಸೂಕ್ಷ್ಮ ಫೀಚರ್ ಗಳು ರಿನಿವಲ್ ಆಗಿದ್ದು, ಈ ಕಾರು ಜಿಎಲ್ ಎಸ್ ತನ್ನ ಹಳೆಯ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವನ್ನೊಂದಿದೆ. ಈ ಕಾರಿನಲ್ಲಿ ವಿಶೇಷವಾಗಿ ಆರು ವಿಶಾಲವಾದ ಸೀಟುಗಳಿದ್ದು, ಇದು ಸಿಕ್ಲಾಸ್ ಸೆಡಾನ್ ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲಾಗಿದೆ.