ಮಗನ ಮುದ್ದಾದ ಫೋಟೋಗಳನ್ನು ಹಂಚಿಕೊಂಡ ನಟಿ ಸಂಜನಾ ಗಲ್ರಾನಿ ಅವರು

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಕೆಲವು ವರ್ಷಗಳಿಂದ ಅವರ ಸಿನಿಮಾಗಳಿಗಿಂತ ಹೆಚ್ಚಾಗಿ ಭಾರಿ ಸುದ್ದಿಯಾದ ನಟಿಯರ ಪೈಕಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಕನ್ನಡದಲ್ಲಿ ಗಂಡ ಹೆಂಡತಿ, ಮೈಲಾರಿ, ಮಸ್ತ್ ಮಜಾ ಮಾಡಿ, ಐಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ರಾಮ್ ಲೀಲಾ, ಈ ಸಂಜೆ, ಹುಡುಗ ಹುಡುಗಿ, ನರಸಿಂಹ, ಸಂತೆಯಲ್ಲಿ ನಿಂತ ಕಬೀರ ಅಂತಹ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ ನಟಿ ಸಂಜನಾ. ಕನ್ನಡದಲ್ಲಿ ಮಾತ್ರ ಅಲ್ಲದೆ ತೆಲುಗಿನಲ್ಲಿಯೂ ಕೂಡ ಸ್ಟಾರ್ ನಟರ ಜೊತೆಗೆ ಅಭಿನಯಿಸಿ ಟಾಲಿವುಡ್ ನಲ್ಲಿಯೂ ಕೂಡ ಸಂಜನಾ ಗಲ್ರಾನಿ ಅವರು ಜನಪ್ರಿಯತೆ ಹೊಂದಿದ್ದಾರೆ. ಇನ್ನು ಡಾಕ್ಟರ್ ಆಗಿರುವ ಅಜೀಜ್ ಪಾಷಾ ಅವರೊಟ್ಟಿಗೆ ಮದುವೆ ಆಗಿರುವ ಸಂಜನಾ ಗಲ್ರಾನಿ ಅವರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡು ತಾಯ್ತನ ಅನುಭವಿಸುತ್ತಿರುವ ನಟಿ ಸಂಜನಾ ಸದ್ಯಕ್ಕೆ ಸಂಪೂರ್ಣವಾಗಿ ತನ್ನ ಮುದ್ದು ಮಗುವಿನೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಮುದ್ದು ಮಗನೊಟ್ಟಿಗೆ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವ ಸಂಜನಾ ಇತ್ತೀಚೆಗೆ ತಮ್ಮ ಮಗುವಿನ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇನ್ನು ಸಂಜನಾ ಗಲ್ರಾನಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಆಗಾಗ ತಮ್ಮ ಮುದ್ದು ಮಗನ ಫೋಟೋ ಶೇರ್ ಮಾಡುತ್ತಿರುತ್ತಾರೆ. ಈಗಾಗಲೇ ತಮ್ಮ ಮಗನ ಹೆಸರಿನಲ್ಲಿ ಒಂದು ಸೋಶಿಯಲ್ ಮೀಡಿಯಾ ಖಾತೆಯನ್ನ ಕೂಡ ತೆರೆದಿದ್ದಾರೆ ನಟಿ ಸಂಜನಾ ಗಲ್ರಾನಿ. ಇನ್ನು ಸಂಜನಾ ತಮ್ಮ ಮುದ್ದು ಮಗನಿಗೆ ಪ್ರಿನ್ಸ್ ಎಂದು ನಿಕ್ ನೇಮ್ ಇಟ್ಟಿದ್ದಾರಂತೆ. ಸದ್ಯಕ್ಕೆ ಸಂಜನಾ ಗಲ್ರಾನಿ ಅವರು ತಮ್ಮ ಮುದ್ದು ಮಗನ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಭಾರಿ ವೈರಲ್ ಆಗಿವೆ.