ಮಗಳಿಗೆ ‘ಆರ್ನಾ’ ಎಂದು ನಾಮಕರಣ ಮಾಡಿದ ನಟಿ ಪ್ರಣಿತಾ ಅವರು, ಇದರ ಅರ್ಥ ಏನು ಗೊತ್ತೇ

ಭೀಮನ ಅಮವಾಸ್ಯೆ ಹಬ್ಬದಂದು ಗಂಡನ ಪಾದ ಪೂಜೆ ಮಾಡಿ ಭಾರಿ ಸುದ್ದಿಯಾಗಿದ್ದ ಚಂದನವನದ ಹಾಲುಗೆನ್ನೆ ಚೆಲುವೆ ಪ್ರಣೀತಾ ಸುಭಾಷ್ ಇದೀಗ ತಮ್ಮ ಮುದ್ದು ಮಗಳ ಹೆಸರನ್ನ ರಿವೀಲ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ನಟಿ ಪ್ರಣೀತಾ ಸುಭಾಷ್ ಅವರು ದರ್ಶನ್ ಅವರ ಪೊರ್ಕಿ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರದಲ್ಲೇ ಉತ್ತಮ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದು, ಗಣೇಶ್, ವಿಜಯ್,ಉಪೇಂದ್ರ ಸೇರಿದಂತೆ ಕನ್ನಡದ ಸ್ಟಾರ್ ನಟರೊಟ್ಟಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು‌. ಕನ್ನಡ ಮಾತ್ರ ಅಲ್ಲದೇ ತೆಲುಗು ಸ್ಟಾರ್ ನಟರೊಂದಿಗೂ ಕೂಡ ನಟಿಸಿ ಟಾಲಿವುಡ್ ನಲ್ಲಿಯೂ ಕೂಡ ಹೆಸರುವಾಸಿಯಾಗಿರುವ ನಟಿ ಪ್ರಣೀತಾ ಸುಭಾಷ್.

ಅವರು ಕೆಲವು ತಿಂಗಳುಗಳ ಹಿಂದೆಯಷ್ಟೆ ಉದ್ಯಮಿ ನಿತಿನ್ ರಾಜ್ ಎಂಬುವರೊಟ್ಟಿಗೆ ಸಪ್ತಪದಿ ತುಳಿಯುವ ಮುಖಾಂತರ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು. ಈ ಮದುವೆ ಏಕಾಏಕಿ ದಿಢೀರ್ ಆದ ಕಾರಣ ಅವರ ಅಭಿಮಾನಿಗಳಿಗೆ ಇದು ಸಖತ್ ಎಕ್ಸೈಟ್ ಆಗಿತ್ತು. ಇದಾದ ನಂತರ ಪ್ರಣೀತಾ ಅವರು ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದು, ತಮ್ಮ ಕೌಟುಂಬಿಕ ಜೀವನದತ್ತ ಗಮನ ಹರಿಸಿದ್ದಾರೆ. ಅದರ ಜೊತೆಗೆ ಇತ್ತೀಚೆಗೆ ತಮ್ಮ ಪತಿಗೆ ಭೀಮನ ಅಮವಾಸ್ಯೆ ಹಿನ್ನೆಲೆ ಪಾದ ಪೂಜೆ ಮಾಡಿ ಅದರ ಒಂದಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದ್ದರು. ಇದೀಗ ಪ್ರಣೀತಾ ಮತ್ತೆ ಸುದ್ದಿಯಾಗಿದ್ದಾರೆ. ಹೌದು ಪ್ರಣೀತಾ ಅವರು ಕಳೆದ ತಿಂಗಳು ತಾಯಿಯಾಗಿದ್ದರು.

ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾದ ಇದೀಗ ಪ್ರಣೀತಾ ತಮ್ಮ ಮುದ್ದು ಮಗಳ ಫೋಟೋವನ್ನ ರಿವೀಲ್ ಮಾಡಿ ತಮ್ಮ ಮಗಳಿಗೆ ಇಟ್ಟಿರುವ ಹೆಸರನ್ನ ಕೂಡ ತಿಳಿಸಿದ್ದಾರೆ. ಹೌದು ನಟಿ ಪ್ರಣೀತಾ ದಂಪತಿಗಳು ತಮ್ಮ ಮುದ್ದು ಮಗಳಿಗೆ ಆರ್ನಾ ಎಂದ ಹೆಸರಿಟ್ಟಿದ್ದಾರೆ. ಆರ್ನಾ ಎಂಬುದು ‘ಲಕ್ಷ್ಮೀ’ ಎಂಬ ಅರ್ಥ ಕೊಡುತ್ತದೆ. ಪ್ರಣೀತಾ ಅವರು ತಮ್ಮ ಮಗಳನ್ನ ತನ್ನ ಎರಡು ಬಾಹುಬಂಧನದಿಂದ ಅಪ್ಪಿ ಮುತ್ತಿಕ್ಕುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಫಿಧಾ ಆಗಿದ್ದಾರೆ. ಪ್ರಣೀತಾ ಅವರು ಬರೋಬ್ಬರಿ ಐವತ್ತು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನ ಹೊಂದಿದ್ದು, ಪ್ರಣೀತಾ ಫೌಂಡೇಶನ್ ಎಂಬ ಟ್ರಸ್ಟ್ ಆರಂಭಿಸಿ ಇದರ ಮೂಲಕ ಒಂದಷ್ಟು ಸಾಮಾಜಿಕ ಸೇವೆಗಳನ್ನ ಮಾಡುತ್ತಿದ್ದಾರೆ.

Leave a Reply

%d bloggers like this: