ಮಗಳ ವಯಸ್ಸಿನ ಯುವತಿಯನ್ನು ಮದುವೆಯಾದ ಶಂಕರಣ್ಣನ ಆಸ್ತಿ ಎಷ್ಟಿದೆ ಗೊತ್ತಾ? ಮನೆ ಹೇಗಿದೆ ನೋಡಿ

ವಯಸ್ಸಿನಲ್ಲಿ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯನ್ನ ಮದುವೆ ಆಗಿ ಸುದ್ದಿ ಆಗಿದ್ದ ಈ ಯುವತಿ ಹಣದ ವ್ಯಾಮೋಹಕ್ಕೆ ಈ ನಿರ್ಧಾರ ತೆಗೆದುಕೊಂಡಳಾ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿ ಮಾಡಲಾಗಿತ್ತು.ಮದುವೆ ಎಂಬುದು ಎರಡು ಜೀವ ಮನಸ್ಸುಗಳ ಸಮ್ಮಿಲನ. ಎರಡು ಮನಸ್ಸುಗಳು ಒಂದಾದರೆ ಆ ಜೋಡಿಗಳನ್ನು ಬೇರೆ ಮಾಡಲು ಸಾಧ್ಯವೇ.ಆಗುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಚೌಡನಕುಪ್ಪೆ ಗ್ರಾಮದಲ್ಲಿ ಈ ಒಂದು ವಿಶೇಷವಾದ ಮದುವೆ ಎಲ್ಲೆಡೆ ಭಾರಿ ಸುದ್ದಿ ಆಗಿದೆ. ನಲವತ್ತೈದು ವರ್ಷದ ಶಂಕ್ರಣ್ಣ ಎಂಬುವವರನ್ನು ಇಪ್ಪತ್ತೈದು ವರ್ಷದ ಮೇಘಾ ಎಂಬ ಯುವತಿ ವಿವಾಹ ವಾಗಿದ್ದಾಳೆ.ಆಗಂತ ಇದು ಒತ್ತಾಯ ಪೂರ್ವಕ ಮದುವೆಯಲ್ಲ. ಸ್ವತಃ ಯುವತಿಯೇ ಸ್ವಯಂ ಪ್ರೇರಿತಳಾಗಿ ಒಪ್ಪಿ ಶಂಕ್ರಣ್ಣನನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆಗೆ ಬಂದಿದ್ದ ಸಂಬಂಧಿಕರು ಈ ಮದುವೆಯ ಫೋಟೋಗಳನ್ನು ತೆಗೆದು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದಾದ ಕೆಲವೇ ದಿನಗಳಲ್ಲಿ ಈ ಶಂಕ್ರಣ್ಣ ಮತ್ತು ಮೇಘಾರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಈ ಪೋಟೋ ನೋಡಿದ ನೆಟ್ಟಿಗರು ಅರೇ ಇಂದು ಯುವಕರಿಗೆ ಹುಡುಗಿಯರು ಸಿಗುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಆದರೆ ವಯಸ್ಸಾದ ವ್ಯಕ್ತಿಯನ್ನ ಈ ಹುಡುಗಿ ಮದುವೆ ಆಗಿದ್ದಾರಲ್ಲ.ಇವರು ಖಂಡಿತವಾಗಿ ಶಂಕ್ರಣ್ಣ ನ ಅವರ ಹಣ ಆಸ್ತಿ ನೋಡಿಯೇ ಮದುವೆ ಆಗಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಇದರ ಜೊತೆಗೆ ಸೋಶಿಯಲ್ ಮೀಡಿಯಾದ ಅನೇಕ ಟ್ರೋಲ್ಸ್ ಗಳು ಹಣವೊಂದಿದ್ದರೆ ಎಂತಹ ವಯಸ್ಸಾದ ಮುದುಕನನ್ನು ಈ ಹುಡುಗಿಯರು ಮದುವೆ ಆಗುತ್ತಾರೆ ಎಂದು ಶಂಕ್ರಣ್ಣ ಮತ್ತು ಮೇಘ ಅವರ ಫೋಟೋಗಳನ್ನು ಟ್ರೋಲ್ ಮಾಡುತ್ತಿದ್ದರು.ಇತ್ತೀಚೆಗೆ ಅದಕ್ಕೆ ಸಂಬಂಧಪಟ್ಟಂತೆ ಖಾಸಗಿ ವಾಹಿನಿಯು ಒಂದು ಇವರಿಬ್ಬರ ಸಂದರ್ಶನ ನಡೆಸುತ್ತದೆ.ಈ ಸಂದರ್ಶನದಲ್ಲಿ ಮೇಘಾ ಅವರಿಗೆ ನೇರವಾಗಿ ನೀವು ಶಂಕ್ರಣ್ಣ ಅವರನ್ನು ಮದುವೆ ಆಗಿರುವುದು ಅವರ ಬಳಿ ಇರುವ ಹಣ ಆಸ್ತಿ ಬಂಗಲೆಯನ್ನ ನೋಡಿ ಎಂದು ಹೇಳುತ್ತಿದ್ದಾರೆ.

ಇದಕ್ಕೆ ನಿಮ್ಮ ಉತ್ತರ ಏನು ಎಂದು ಕೇಳಿದಕ್ಕೆ ಆಗೇನಿಲ್ಲ ನನಗೆ ಇತ್ತೀಚೆಗೆ ಎರಡು ವರ್ಷಗಳ ಹಿಂದೆಯಷ್ಟೇ ಮದುವೆ ಆಗಿತ್ತು.ನನ್ನ ಪತಿ ಇದ್ದಕಿದ್ದಂತೆ ಕಾಣೆಯಾದರು.ಅವರು ಏನಾಗಿದ್ದಾರೆ ಎಂಬುದು ನನಗೆ ತಿಳಿದಿಲ್ಲ.ಹೀಗಾಗಿ ಅನಿವಾರ್ಯತೆಯಿಂದಾಗಿ ನಾನು ನನ್ನ ಬದುಕಿಗೆ ನೆರವಾಗುವಂತಹವರನ್ನ ಮದುವೆ ಆಗಿದ್ದೇನೆ ಅದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದ್ದಾರೆ. ಇನ್ನು ಶಂಕ್ರಣ್ಣ ಅವರು ರೈತಾಪಿ ಆಗಿರುವುದರಿಂದ ಅವರ ಬಳಿಯೂ ಕೂಡ ಹೇಳಿಕೊಳ್ಳುವಷ್ಟು ಹಣ,ಆಸ್ತಿ ಏನಿಲ್ಲ.ಹಳ್ಳಿಗಳಲ್ಲಿ ಇರುವಂತೆಯೇ ಸಾಮಾನ್ಯವಾದ ಮನೆಯಿದೆ ಎಂದು ತಿಳಿದು ಬಂದಿದೆ.